ಮನೆ ತುಂಬಾ ಜಿರಳೆಗಳ ಕಾಟವೇ? ಅಡುಗೆ ಮನೆಯಲ್ಲಿರುವ ಈ ವಸ್ತುಗಳಿಂದಲೇ ಸಿಗಲಿದೆ ಶಾಶ್ವತ ಪರಿಹಾರ!

0
20

ಮನೆಗಳಲ್ಲಿ, ವಿಶೇಷವಾಗಿ ಅಡುಗೆಮನೆ ಮತ್ತು ಬಚ್ಚಲು ಮನೆಗಳಲ್ಲಿ ಜಿರಳೆಗಳ ಕಾಟ ಸಾಮಾನ್ಯ ಸಮಸ್ಯೆಯಾಗಿದೆ. ಜಿರಳೆಗಳು ಕೇವಲ ಅಸಹ್ಯ ಹುಟ್ಟಿಸುವ ಕೀಟಗಳಲ್ಲ, ಅವು ಆಹಾರವನ್ನು ಕಲುಷಿತಗೊಳಿಸಿ ಹಲವು ರೋಗಗಳಿಗೆ ಕಾರಣವಾಗಬಹುದು. ಆದರೆ ದುಬಾರಿ ಕೀಟನಾಶಕಗಳಿಗೆ ಹಣ ಖರ್ಚು ಮಾಡದೆ, ಮನೆಯಲ್ಲೇ ಇರುವ ಕೆಲವು ಸಾಮಾನ್ಯ ವಸ್ತುಗಳಿಂದ ಜಿರಳೆಗಳನ್ನು ದೂರವಿಡಬಹುದು.

ವಿನೆಗರ್ ಬಳಸಿ ಜಿರಳೆಗಳಿಗೆ ಗುಡ್‌ಬೈ

ವಿನೆಗರ್‌ನ ತೀವ್ರ ವಾಸನೆ ಜಿರಳೆಗಳಿಗೆ ಸಹಿಸಲಾಗದು. ಬಿಸಿ ನೀರಿಗೆ ಸ್ವಲ್ಪ ವಿನೆಗರ್ ಬೆರೆಸಿ ಜಿರಳೆಗಳು ಓಡಾಡುವ ಸ್ಥಳಗಳಲ್ಲಿ ಸಿಂಪಡಿಸಿದರೆ ಅವು ದೂರ ಓಡುತ್ತವೆ. ಇದು ಇರುವೆಗಳು ಸೇರಿದಂತೆ ಇತರೆ ಕೀಟಗಳ ಮೇಲೂ ಪರಿಣಾಮಕಾರಿ.

ಸೀಮೆಎಣ್ಣೆ ಕೂಡಾ ಪರಿಣಾಮಕಾರಿ

ಸಿಂಕ್, ಡ್ರೈನ್ ಹಾಗೂ ಅಡುಗೆಮನೆಯ ಮೂಲೆಗಳಲ್ಲಿ ಸ್ವಲ್ಪ ಸೀಮೆಎಣ್ಣೆ ಸಿಂಪಡಿಸಿದರೆ ಜಿರಳೆಗಳು ಆ ಪ್ರದೇಶಕ್ಕೆ ಬರೋದಿಲ್ಲ. ಇದರ ವಾಸನೆ ಕೀಟಗಳನ್ನು ದೂರವಿಡಲು ಸಹಾಯಕ.

ನಿಂಬೆ ರಸದಿಂದ ಸ್ವಚ್ಛತೆ

ನಿಂಬೆ ರಸ ಮತ್ತು ನೀರಿನ ಮಿಶ್ರಣದಿಂದ ಅಡುಗೆಮನೆ ಹಾಗೂ ನೆಲವನ್ನು ಸ್ವಚ್ಛಗೊಳಿಸಿದರೆ ಜಿರಳೆಗಳ ಕಾಟ ಕಡಿಮೆಯಾಗುತ್ತದೆ. ಜೊತೆಗೆ ಮನೆ ತಾಜಾ ಪರಿಮಳದಿಂದ ಕೂಡಿರುತ್ತದೆ.

ಬೇವಿನ ಎಣ್ಣೆ ಮತ್ತು ಪುದೀನಾ ಎಣ್ಣೆ

ಬೇವಿನ ಎಣ್ಣೆ ನೈಸರ್ಗಿಕ ಕೀಟನಾಶಕವಾಗಿ ಕಾರ್ಯನಿರ್ವಹಿಸುತ್ತದೆ. ನೀರಿಗೆ ಕೆಲವು ಹನಿ ಬೇವಿನ ಎಣ್ಣೆ ಅಥವಾ ಪುದೀನಾ ಎಣ್ಣೆ ಬೆರೆಸಿ ಸಿಂಪಡಿಸಿದರೆ ಜಿರಳೆಗಳು ದೂರವಾಗುತ್ತವೆ. ಇದು ಕೀಟಗಳ ಸಂತಾನೋತ್ಪತ್ತಿಯನ್ನೂ ಕಡಿಮೆ ಮಾಡುತ್ತದೆ.

ಲವಂಗದ ಎಣ್ಣೆ

ಲವಂಗದ ವಾಸನೆಗೂ ಜಿರಳೆಗಳು ಹತ್ತಿರ ಬರುವುದಿಲ್ಲ. ಲವಂಗ ಅಥವಾ ಲವಂಗದ ಎಣ್ಣೆ ಮಿಶ್ರಿತ ನೀರನ್ನು ಅಡುಗೆಮನೆಯ ಮೂಲೆಗಳಲ್ಲಿ ಸಿಂಪಡಿಸಿದರೆ ಉತ್ತಮ ಫಲಿತಾಂಶ ಸಿಗುತ್ತದೆ.

ನಿಂಬೆ ಮತ್ತು ಸೋಡಾ ಮಿಶ್ರಣ

ನಿಂಬೆ ರಸ ಮತ್ತು ಬೇಕಿಂಗ್ ಸೋಡಾ ಮಿಶ್ರಣವನ್ನು ಜಿರಳೆಗಳು ಇರುವ ಸ್ಥಳಗಳಲ್ಲಿ ಸಿಂಪಡಿಸಿದರೆ ಅವುಗಳನ್ನು ತೊಡೆದುಹಾಕಲು ಸಹಾಯಕವಾಗುತ್ತದೆ.

ಮನೆಯ ಶುಚಿತ್ವವೇ ಮುಖ್ಯ

ಜಿರಳೆಗಳನ್ನು ತಡೆಯಲು ಮನೆ ಮತ್ತು ಅಡುಗೆಮನೆಯನ್ನು ಪ್ರತಿದಿನ ಸ್ವಚ್ಛವಾಗಿಡುವುದು ಅತ್ಯಗತ್ಯ. ತೇವಾಂಶ, ಕಸ ಹಾಗೂ ಆಹಾರದ ಅವಶೇಷಗಳು ಜಿರಳೆಗಳನ್ನು ಆಕರ್ಷಿಸುತ್ತವೆ. ಕಿಟಕಿ, ಬಾಗಿಲು ಮತ್ತು ಸಣ್ಣ ಬಿರುಕುಗಳನ್ನು ಮುಚ್ಚಿ, ಕಸವನ್ನು ಪ್ರತಿದಿನ ವಿಲೇವಾರಿ ಮಾಡಿದರೆ ಜಿರಳೆಗಳ ಸಮಸ್ಯೆ ಬಹಳ ಮಟ್ಟಿಗೆ ಕಡಿಮೆಯಾಗುತ್ತದೆ.

LEAVE A REPLY

Please enter your comment!
Please enter your name here