ಕನ್ನಡ ಭವನ ರೂವಾರಿಗಳಾದ ಡಾ. ವಾಮನ್ ರಾವ್ ಬೇಕಲ್ -ಸಂಧ್ಯಾ ರಾಣಿ ಟೀಚರ್ ಗೆ ” ಕರುನಾಡ ಕನ್ನಡ ಗಡಿನಾಡು ಪೋಷಕ ರತ್ನ “ಪ್ರಶಸ್ತಿ 2026

0
10

ಕಾಸರಗೋಡು : ಎಸ್. ಡಿ. ಮುಡೆಣ್ಣನವರ ಸಂಸ್ಥಾಪಕ ರಾಜ್ಯಾಧ್ಯಕ್ಷರು, ಕರುನಾಡ ಕನ್ನಡ ಸಾಹಿತ್ಯ ಹಾಗೂ ಸಾಂಸ್ಕೃತಿಕ ಬಳಗ (ರಿ.) ಬೆಂಗಳೂರು ಇವರು ದಿನಾಂಕ 25.5.2026 ನೇ ಸೋಮವಾರ ದಂದು ಡಾ. ಬಿ. ಆರ್. ಅಂಬೇಡ್ಕರ್ ಸಭಾಭವನ ಹಾವೇರಿಯಲ್ಲಿ ನಡೆಸುತ್ತಿರುವ ರಾಜ್ಯ ಮಟ್ಟದ ಎರಡನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಗಡಿನಾಡು ಕಾಸರಗೋಡಿನಲ್ಲಿ ಕನ್ನಡವನ್ನು ಉಳಿಸಿ ಬೆಳೆಸಲು ಹಾಗೂ ಕರ್ನಾಟಕ ದಾದ್ಯಂತ ಸಂಪರ್ಕ ಸಾದಿಸುತ್ತಿರುವ ಮತ್ತು ವಿವಿಧ ವಿನೂತನ ಕನ್ನಡ ಕಾರ್ಯಕ್ರಮ ಗಳೊಂದಿಗೆ ಕನ್ನಡಪರ ಸಂಘಟನೆಗೆ ಹೊಸ ಆಯಾಮ ಕಲ್ಪಿಸುತ್ತಿರುವ ಕಾಸರಗೋಡು ನುಳ್ಳಿಪ್ಪಾಡಿಯ ಕನ್ನಡ ಭವನ ಮತ್ತು ಗ್ರಂಥಾಲಯ (ರಿ.)ಸಮೂಹ ಸಂಸ್ಥೆಗಳ ರೂವಾರಿಗಳಾದ ಡಾ. ವಾಮನ್ ರಾವ್ ಬೇಕಲ್ -ಸಂಧ್ಯಾ ರಾಣಿ ಟೀಚರ್ ಇವರ ಕನ್ನಡ ಸೇವಾ ಕ್ಷೇತ್ರದ ಅಪ್ರತಿಮ ಸಾಧನೆಯನ್ನು ಪರಿಗಣಿಸಿ ಹಾವೇರಿಯಲ್ಲಿ ನಡೆಯುವ ರಾಜ್ಯ ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ “ಕರುನಾಡ ಕನ್ನಡ ಗಡಿನಾಡು ಪೋಷಕ ರತ್ನ “ಪ್ರಶಸ್ತಿಯನ್ನು ಗೌರವಪೂರ್ವಕ ನೀಡಿ ಗೌರವಿಸಲಿದ್ದಾರೆ.

LEAVE A REPLY

Please enter your comment!
Please enter your name here