ಮೂಡುಬಿದಿರೆ : ವಿಶ್ವ ರೆಡ್‌ ಕ್ರಾಸ್‌ ದಿನಾಚರಣೆಯ ಅಂಗವಾಗಿ ಅತಿಥಿ ಉಪನ್ಯಾಸ ಕಾರ‍್ಯಕ್ರಮ

0
7

ಮೂಡಬಿದ್ರೆಯ ಯುವ‌ ರೆಡ್‌ ಕ್ರಾಸ್‌ ಘಟಕದ ವತಿಯಿಂದ ವಿಶ್ವರೆಡ್‌ ಕ್ರಾಸ್‌ ದಿನಾಚರಣೆಯ ಅಂಗವಾಗಿ ಅತಿಥಿ ಉಪನ್ಯಾಸ ಕಾರ‍್ಯಕ್ರಮವನ್ನು ಆಯೋಜಿಸಲಾಯಿತು.

ಕಾರ‍್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಕಾರ್ಕಳದ ಶ್ರೀಭುವನೇಂದ್ರ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಜಿ.ಎನ್.ಭಟ್ಅವರು ಮಾತನಾಡಿ, ವ್ಯಕ್ತಿತ್ವ ವೃದ್ಧಿಗೊಳಿಸುವಲ್ಲಿ ಯುವ ರೆಡ್‌ ಕ್ರಾಸ್‌ ಸಹಾಯಕವಾಗಿದ್ದು, ವಿದ್ಯಾರ‍್ಥಿಗಳು ಸದಾ ಚಟುವಟಿಕೆಯಿಂದಿರಬೇಕು ಎಂದು ಹೇಳಿದರು.

ಮೊಬೈಲ್ಫೋನ್ಅನ್ನು ಅಗತ್ಯಕ್ಕೆ ಮಾತ್ರ ಬಳಸಬೇಕು . ಯೋಗ, ಪ್ರಾಣಾಯಾಮ ಹಾಗೂ ವ್ಯಾಯಾಮ ಕ್ಕೆ ಪ್ರತಿದಿನ ಸಮಯವನ್ನು ಮೀಸಲಿಡಬೇಕು.

ಜೀವನದಲ್ಲಿ ಯಶಸ್ಸು ಸಾಧಿಸಲು ಸಹನೆ ಮತ್ತು ತಾಳ್ಮೆ ಅತ್ಯಗತ್ಯವೆಂದು ಅವರು ವಿದ್ಯಾರ‍್ಥಿಗಳಿಗೆ ಹಿತವಚನ ನೀಡಿದರು. ಕಾರ‍್ಯಕ್ರಮದಲ್ಲಿ ವಿದ್ಯಾರ‍್ಥಿನಿ ವಿಕಿತಾ ಸ್ವಾಗತಿಸಿದರು. ನಮ್ರತಾ ವಂದಿಸಿದರು. ಜ್ಞಾನ ಶ್ರೀ ಕಾರ‍್ಯಕ್ರಮ ನಿರೂಪಿಸಿದರು. ಯುವರೆಡ್‌ ಕ್ರಾಸ್‌ ಸಂಯೋಜಕಿ ಶ್ರೀ ಗೌರಿ ಕೆ. ವೇದಿಕೆಯಲ್ಲಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here