ರೋಟರಿ ಆನಂತಮಿತ್ರ ಕಲ್ಬಾವಿ ಯುವ ಸಾಧಕ ಪ್ರಶಸ್ತಿ – 2026 ಯುವ ಸಾಧಕಿ ಕು. ಪ್ರಾಪ್ತಿ ಶೆಟ್ಟಿ ಮತ್ತು ಯುವ ಸಾಧಕಿ ಕು. ಆರಾಧ್ಯ ಪಡೈ ಗೆ ಪ್ರಶಸ್ತಿ ಪ್ರಧಾನ

0
17

ಮಂಗಳೂರು : ಕಲ್ಬಾವಿ ಪ್ರತಿಷ್ಠಾನ ಮತ್ತು ರೋಟರಿ ಮಂಗಳೂರು ಸಿಟಿ ಸಂಸ್ಥೆ, ರೋಟರೆಕ್ಟ್ ಕ್ಲಬ್ ಮಂಗಳೂರು ಸ್ವಸ್ಥಿಕಾ ಸಂಸ್ಥೆಯ ಸಂಯುಕ್ತ ಆಶ್ರಯದಲ್ಲಿ ಪ್ರಾಯೋಜಿಸಿದ 5ನೇ ವಾರ್ಷಿಕ ಪ್ರತಿಷ್ಠಿತ ರೋಟರಿ ಅನಂತಮಿತ್ರ ಕಲ್ಬಾವಿ ಯುವ ಸಾಧಕ ಪ್ರಶಸ್ತಿ-2026 ಯನ್ನು ಯುವ ಸಾಧಕಿ ಕು. ಪ್ರಾಪ್ತಿ ಶೆಟ್ಟಿ ಮತ್ತು ಯುವ ಸಾಧಕಿಯಾದ ಕು. ಆರಾಧ್ಯ ಪಡ್ಡೆ ರವರು ರಾಜ್ಯಮಟ್ಟದ ಕ್ರೀಡಾ ಕ್ಷೇತ್ರದಲ್ಲಿ ಸಾಧಿಸಿದ ಗಮನಾರ್ಹ ಸಾಧನೆಯನ್ನು ಪರಿಗಣಿಸಿ ತಾ. 21.05.2026ರಂದು ನಗರದ ಈಡನ್ ಕ್ಲಬ್ ಸಭಾಂಗಣದಲ್ಲಿ ಜರಗಿದ ಸಮಾರಂಭದಲ್ಲಿ ಪ್ರಶಸ್ತಿ ಪ್ರಧಾನ ಮಾಡಿ ಅಭಿನಂದಿಸಲಾಯಿತು.

ರೋಟರಿ ಸಂಸ್ಥೆಯ ಅಧ್ಯಕ್ಷೆಯರಾದ `ರೋ. ಸಜ್ಞಾ ಭಾಸ್ಕರ್ ರವರು ಸ್ವಾಗತಿಸಿ, ನಗರದ ದ.ಕ. ಜಿಲ್ಲಾ ನಿರ್ಮಿತಿ ಕೇಂದ್ರದ ಕಾರ್ಯನಿರ್ವಾಹಕ ನಿರ್ದೇಶಕರಾದ ರೋ. ರಾಜೇಂದ್ರ ಕಲಾವಿಯವರು ಅವರ ಪೋಷಕರಾದ ದಿ. ಕಲ್ಬಾವಿ ಅನಂತ ಪದ್ಮನಾಭ ರಾವ್ ಹಾಗೂ ದಿ. ಸುಮಿತ್ರ ರಾವ್ ಸ್ಮರರ್ಣಾರ್ಥ ಜಿಲ್ಲೆಯ ಯುವ ಪ್ರತಿಭಾವಂತ ಮತ್ತು ಯುವ ಸಾಧಕರಾಗಿ ವಾರ್ಷಿಕ ಪ್ರಶಸ್ತಿಯನ್ನು ಪ್ರಾಯೋಜಿಸಲಾಗಿದ್ದು ಸಂಸ್ಥೆಯ ಯುವಜನ ಸೇವಾ ಯೋಜನೆಯ ಅಂಗವಾಗಿ ಯುವ ಸಾಧಕಿ ಕು. ಪ್ರಾಪ್ತಿ ಶೆಟ್ಟಿ (ರಾಜ್ಯಮಟ್ಟದ ಟೆನ್ನಿಸ್ ಆಟಗಾರ್ತಿ) ಮತ್ತು ಯುವ ಸಾಧಕಿಯಾದ ಕು. ಆರಾಧ್ಯ ಪಡೆ (ಹೂಲ ಹೂಪ್ ರೆಕಾರ್ಡ್ ಹೋಲ್ಡರ್) ಅವರ ಕ್ರೀಡಾ ಕ್ಷೇತ್ರದಲ್ಲಿ ಗಣನೀಯ ಸಾಧನೆಯನ್ನು ಪರಿಗಣಿಸಿ ಈ ಪ್ರತಿಷ್ಠಿತ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಮಾಹಿತಿ ನೀಡಿ ಈ ಪ್ರಶಸ್ತಿಯು ಪ್ರಶಸ್ತಿ ಫಲಕ, ಪ್ರಶಸ್ತಿ ಪ್ರಮಾಣ ಪತ್ರ ಮತ್ತು ನಗದು ಬಹುಮಾನ ರೂ. 10,000/- ಒಳಗೊಂಡಿದೆ ಎಂದು ನುಡಿದರು.

ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಸ್ವಸ್ಥಿಕಾ ರಾಷ್ಟ್ರೀಯ ವ್ಯವಹಾರ ಶಾಲೆಯ ಅಧ್ಯಕ್ಷರಾದ ಡಾ. ರಾಘವೇಂದ್ರ ಹೊಳ್ಳ ರವರು, ಯುವ ಸಾಧಕರ ಕ್ರೀಡಾ ಉತ್ಸಾಹಕ್ಕೆ ಸಂಘಸಂಸ್ಥೆಗಳು ಪ್ರೋತ್ಸಾಹ ನೀಡಿ ಯಶಸ್ಸು ಸಾಧಿಸಲು ಪ್ರೇರೇಪಿಸಬೇಕು ಎಂದು ನುಡಿದು ಪ್ರಶಸ್ತಿ ವಿಜೇತರಿಗೆ ಪ್ರಶಸ್ತಿ ಪ್ರಧಾನದ ವಿಧಿವಿಧಾನವನ್ನು ನೆರವೇರಿಸಿ ಅವರ ವಿಶೇಷ ಪ್ರತಿಭೆ ಮತ್ತು ಅನುಪಮ ಸಾಧನೆಯನ್ನು ಪ್ರಶಂಶಿಸಿ ಉಜ್ವಲ ಭವಿಷ್ಯ ಹಾರೈಸಿದರು.

ರೋಟರಿ ಸಂಸ್ಥೆಯ ಸ್ಥಾಪನಾ ಅಧ್ಯಕ್ಷರಾದ ಹಾಗೂ ಪ್ರಶಸ್ತಿ ಆಯ್ಕೆ ಸಮಿತಿಯ ಅಧ್ಯಕ್ಷರಾದ ರೋ, ಡಾ. ರಂಜನ್ ರಾವ್‌ರವರು ಪ್ರಶಸ್ತಿ ವಿಜೇತರ ಪರಿಚಯ, ಅಪ್ರತಿಮ ಪ್ರತಿಭೆ ಮತ್ತು ಅವರು ರಾಜ್ಯ ಮಟ್ಟದ ಕ್ರೀಡಾ ಕ್ಷೇತ್ರದಲ್ಲಿ ಸಾಧಿಸಿದ ಗಮನಾರ್ಹ ಸಾಧನೆಯ ಮಾಹಿತಿ ನೀಡಿದರು. ಪ್ರಶಸ್ತಿಯ ಪ್ರಾಯೋಜಕ ಮತ್ತು ಸಂಸ್ಥೆಯ ಸಲಹೆಗಾರರಾದ ರೋ, ರಾಜೇಂದ್ರ ಕಲಾವಿಯವರು ಅಭಿನಂದನಾ ಭಾಷಣ ಮಾಡಿದರು. ವೇದಿಕೆಯಲ್ಲಿ ರೋಟರಿ ಸಂಸ್ಥೆಯ ಯುವಜನ ಸೇವಾ ಯೋಜನೆಯ ನಿರ್ದೇಶಕರಾದ ರೋ. ಕೆನ್ಯೂಟ್ ಪಿಂಟೋ, ರೋಟರೆಕ್ಸ್ ಸಂಸ್ಥೆಯ ಅಧ್ಯಕ್ಷರಾದ ರೋ, ಸಾತ್ವಿಕ್ ಮುಲ್ಯ ಜೊತೆ ಕಾರ್ಯದರ್ಶಿಯಾದ ಕು. ನಮೃತಾ ಉಪಸ್ಥಿತರಿದ್ದರು. ಪ್ರಶಸ್ತಿ ಸ್ವೀಕರಿಸಿ ಪ್ರತಿಕ್ರಿಯಿಸಿದ ಪ್ರಶಸ್ತಿ ವಿಜೇತರು ರೋಟರಿ ಸಂಸ್ಥೆಗೆ ಕೃತಜ್ಞತೆ ಸಲ್ಲಿಸಿದರು. ಕಾರ್ಯದರ್ಶಿ ರೋ, ಪದ್ಮನಾಭ್ ನಾಯ್ ವರದಿ ಮಂಡಿಸಿ ವಂದಿಸಿದರು.

ವರದಿ : ಎಂ. ವಿ. ಮಲ್ಯ

LEAVE A REPLY

Please enter your comment!
Please enter your name here