ಮೇ.26 ಮತ್ತು 27ರಂದು ಮಂಗಳೂರು ಹಾಗೂ ಉಡುಪಿ ಜಿಲ್ಲೆಗೆ ಸಾರ್ವಜನಿಕ ಉದ್ದಿಮೆಗಳ ಸಮಿತಿ ಭೇಟಿ

0
8

ಮಂಗಳೂರಿನ ಒಳಚರಂಡಿಯ ವ್ಯವಸ್ಥೆಯ ಬಗ್ಗೆ ಪರಿಶೀಲನೆಗೆ ಸಮಿತಿ ಆಗಮನ ಐವನ್ ಡಿʼಸೋಜಾ.ಪೂರ್ವ ಭಾವಿ ಸಭೆ

ಸಾರ‍್ವಜನಿಕ ಉದ್ದಿಮೆ ಸಮಿತಿಯು ಮಂಗಳೂರು ಮತ್ತು ಉಡುಪಿ ಜಿಲ್ಲೆಗೆ ದಿನಾಂಕ: 26-05-2026 ಮತ್ತು ದಿನಾಂಕ:27-05-2026 ರಂದು ಭೇಟಿ ನೀಡಲಿದ್ದು, ಮಂಗಳೂರು ಒಳಚರಂಡಿ ದರ‍್ವ್ಯವಸ್ಥೆಯ ಬಗ್ಗೆ ವೆಟ್ವೆಲ್ ಗಳು ನೀರು ಶುದ್ದೀಕರಣದ ಬಗ್ಗೆ ಖುದ್ದಾಗಿ ಪರಿಶೀಲಿಸಲು ಸಮಿತಿ ಅಗಮಿಸುತ್ತಿದೆ.

ಈ ಸಮಿತಿಯು ಮಂಗಳೂರು ನಗರದ ಅನೇಕ ಕಡೆಗಳಾದ ಮದ್ಯ ಎಸ್.ಟಿ.ಪಿ, ಅಂಗರಗುಂಡಿ, ನಂದಿನಿ ನದಿ, ಕಾವೂರು, ಮುಲ್ಲಕಾಡು, ಜಪ್ಪಿನಮೊಗರು, ಕೊಡಿಯಾಲ್ಬೈಲ್ ಅನೆಗುಂಡಿ, ಸುಲ್ತಾನ್ಬತ್ತೇರಿ ಮುಂತಾದ ಕಡೆಗಳಲ್ಲಿ ಭೇಟಿ ನೀಡಿ ಪರಿಶೀಲನೆಗೆ ಈಗಾಗಲೇ ಸ್ಥಳಗಳನ್ನು ನಿಗದಿಪಡಿಸಲಾಗಿದೆ.

ಮಂಗಳೂರು ಮಹಾನಗರಕ್ಕೆ1250/- ಕೋಟಿ ರೂಪಾಯಿಯ ಬೃಹತ್ ಯೋಜನೆ ತರುವಲ್ಲಿ ಸದ್ರಿ ಸ್ಥಳಗಳನ್ನು ಪರಿಶೀಲಿಸಿ ಸರಕಾರಕ್ಕೆ ವರದಿಯನ್ನು ನೀಡಲು ಈ ಸಮಿತಿಯು ಮುಂದಿನ ದಿನಗಳಲ್ಲಿ ಕ್ರಮಕೈಗೊಳ್ಳಲಿದೆ ಎಂದು ಐವನ್ ಡಿʼಸೋಜಾರವರು ತಿಳಿಸಿದ್ದಾರೆ. ಮಂಗಳೂರು ಮಹಾನಗರ ಪಾಲಿಕೆಯ ತಮ್ಮ ಕಛೇರಿಯಲ್ಲಿ ಪೂರ‍್ವಭಾವಿ ಸಭೆ ನಡೆದು ಇಂಜಿನಿರ‍್ಗಳು ಇದರ ಬಗ್ಗೆ ಚರ‍್ಚೆ ನಡೆಸಿದರು. ಈ ಸಭೆಯಲ್ಲಿ ತೆಗೆದುಕೋಳ್ಳಬೇಕಾದ ತರ‍್ಮಾನಗಳ ಬಗ್ಗೆ ಸಭೆಯಲ್ಲಿ ಚರ‍್ಚಿಸಲಾಯಿತು.

ಈಸಮಿತಿಯು ವರದಿಯನ್ನು ನೀಡಿ ಮಂಗಳೂರು ನಗರದ ನೀರಿನ ವ್ಯವಸ್ಥೆ ಮತ್ತು ಒಳಚರಂಡಿ ವ್ಯವಸ್ಥೆಯನ್ನು ತೆಗೆದುಕೊಳ್ಳಬೇಕಾದ ಕ್ರಮದ ಬಗ್ಗೆ ಅಧಿಕಾರಿಗಳು ಸಹಕರಿಸಬೇಕೆಂದು ಐವನ್ ಡಿʼಸೋಜಾರವರು ಕರೆ ನೀಡಿದರು.

ಈ ಸಂದರ‍್ಭದಲ್ಲಿ ಶಶಿಧರ್ ಹೆಗ್ಡೆ, ಬಾಸ್ಕರ್ ಸಾಲ್ಯಾನ್, ಡಿಕೆ ಅಸೋಕ್ ಲ್ಯಾನ್ಸಿ ಲೋಟ್ ಪಿಂಟೋ, ಅಶ್ರಫ್ ಬೆಂಗರೆ ಪ್ರಕಾಶ್ ಸಾಲ್ಯಾನ್ ಅನಿಲ್ ಕುಮಾರ್, ಕೇಶವ ಮರೋಳಿ, ನಾಗೇಂದ್ರ ಕುಮಾರ್ ಚೇತನ್ ಕುಮಾರ್ ಕು| ಅಪ್ಪಿಲತಾ, ಮುಂತಾದವರು ಈ ಸಂದರ‍್ಭದಲ್ಲಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here