ಸಸಿಹಿತ್ಲು ಶ್ರೀ ಭಗವತೀ ದೇವಸ್ಥಾನದಲ್ಲಿ ಮೇ 24ರಂದು ದೃಢ ಸಂಪ್ರೋಕ್ಷಣೆ ಹಾಗೂ ಆಶ್ಲೇಷಾ ಬಲಿ

0
15

ಸಸಿಹಿತ್ಲು ಗ್ರಾಮದ ಶ್ರೀ ಭಗವತೀ ದೇವಸ್ಥಾನದಲ್ಲಿ ದಿನಾಂಕ 24-05-2026 ರವಿವಾರ ದೃಢ ಸಂಪ್ರೋಕ್ಷಣೆ ಹಾಗೂ ನಾಗದೇವರಿಗೆ ವಾರ್ಷಿಕ ಆಶ್ಲೇಷಾ ಬಲಿ ಸೇವೆಯು ನಡೆಯಲಿದೆ.

ಮೇ 23ರಂದು ಸಂಜೆ 5 ಗಂಟೆಯಿಂದ ವಾಸ್ತು ಹೋಮ, ವಾಸ್ತು ಪೂಜೆ, ರಾಕ್ಷೆಘ್ನ ಹೋಮ ಹಾಗೂ ಪ್ರಾಕಾರ ಬಲಿ ನಡೆಯಲಿದ್ದು, ಮೇ 24ರಂದು ಬೆಳಿಗ್ಗೆ 8 ಗಂಟೆಯಿಂದ ಶ್ರೀ ಭಗವತಿಯ ಸನ್ನಿಧಿಯಲ್ಲಿ ಶಾಂತಿ ಹೋಮ, ಪ್ರಾಯಶ್ಚಿತ್ತ ಹೋಮ, ಪಂಚವಿಂಶತಿ ಕಲಶ, ಪ್ರಧಾನ ಹೋಮ, ಕಲಶಾಭಿಷೇಕ, ಪ್ರಸನ್ನ ಪೂಜೆ ಹಾಗೂ ಮಹಾಮಂತ್ರಾಕ್ಷತೆ ನಡೆಯಲಿದೆ.

ಇದೇ ವೇಳೆ ನಾಗ ಸನ್ನಿಧಿಯಲ್ಲಿ ನವಕ ಕಲಶ, ಪ್ರಧಾನ ಹೋಮ, ಪಂಚಾಮೃತ ಅಭಿಷೇಕ, ಆಶ್ಲೇಷಾ ಬಲಿ ಹಾಗೂ ಪ್ರಸನ್ನ ಪೂಜೆ ನೆರವೇರಲಿದ್ದು, ಮಧ್ಯಾಹ್ನ 12.30ಕ್ಕೆ ಅನ್ನಸಂತರ್ಪಣೆ ನಡೆಯಲಿದೆ.

ಈ ಪುಣ್ಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಶ್ರೀ ಭಗವತೀ ಹಾಗೂ ನಾಗದೇವರ ಕೃಪೆಗೆ ಪಾತ್ರರಾಗುವಂತೆ ದೇವಸ್ಥಾನದ ಆಡಳಿತ ಮಂಡಳಿ ಹಾಗೂ ಬ್ರಹ್ಮಕಲಶೋತ್ಸವ ಸಮಿತಿ ಭಕ್ತರಲ್ಲಿ ಮನವಿ ಮಾಡಿದೆ.

LEAVE A REPLY

Please enter your comment!
Please enter your name here