ಕಿನ್ನಿಮೂಲ್ಕಿ ಕನ್ರ‍್ಪಾಡಿ ಬ್ರಾಹ್ಮಣ ಸಂಘದ ವರ‍್ಷಿಕ ಸಭೆಯು ಶ್ರೀದೇವಿ ಸಭಾ ಭವನದಲ್ಲಿ ಇತ್ತೀಚಿಗೆ ನೆಡೆಯಿತು.ಸಂಘದ ಅಧ್ಯಕ್ಷ ಎಂ.ಎನ್. ರಾಜೇಂದ್ರ ನೇತೃತ್ವದಲ್ಲಿ ಜರಗಿತು.
ಮುಖ್ಯ ಅತಿಥಿಯಾಗಿ ಉಡುಪಿ ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷರಾದ ಸಂದೀಪ್ ಕುಮಾರ್ , ಉಡುಪಿ ತಾಲ್ಲೂಕ್ ಬ್ರಾಹ್ಮಣ ಸಂಘದ ಅಧ್ಯಕ್ಷರಾದ ಶ್ರೀಕಾಂತ್ ಉಪದ್ಯಾಯ ಸಮಾಜ ಸೇವೆಯಲ್ಲಿ ವಿಪ್ರ ಸಮಾಜದ ಸಾಧಕರಾದ ರಮೇಶ್ ರಾವ್ ಬೀಡು , ಖ್ಯಾತ ವೈದ್ಯರು ಶಿಕ್ಷಣ ತಜ್ಞರಾದ ಡಾ ಸೀತಾರಾಮ್ ಭಟ್ , ಪ್ರತಿಭಾ ಪುರಸ್ಕಾರದಲ್ಲಿ ವಿಶೇಷ ಸಾಧನೆಗೈದ ಹರೀಶ್ ಭಟ್ ರವರನ್ನು ಶಾಲು ಹೊದಿಸಿ ಫಲ ಪುಷ್ಪ , ಸ್ಮರಣಿಕೆ ನೀಡಿ ಗೌರವಿಸಲಾಯಿತು.
ದಾಂಪತ್ಯ ಜೀವನದ ಸುವರ್ಣ ಮೊಹೋತ್ಸವದ ದಂಪತಿಗಳನ್ನು ಈ ಸಂದರ‍್ಭದಲ್ಲಿ ಗೌರವಿಸಲಾಯಿತು ಮಹಿಳಾ ವಲಯದ ಅಧ್ಯಕ್ಷರಾದ ಡಾ ಉಷಾ ಚಡಗ , ವಿಜಯಲಕ್ಷ್ಮಿ ಕಿರಣ್ , ಬೃಂದಾ ರಾಜೇಂದ್ರ , ಉಮಾ ಸುರೇಶ್ , ಸುಧಾ ಶ್ರೀಕಾಂತ್ , , ಕೋಶಾಧಿಕಾರಿ ಶ್ರೀಕಾಂತ್ ಭಟ್ ವಿವಿಧ ಪದಾಧಿಕಾರಿಗಳು ನೂರಾರು ಸಮಾಜ ಬಾಂದವರು ಉಪಸ್ಥಿತರಿದ್ದರು .
ಅಧ್ಯಕ್ಷ ಎಂ.ಎನ್. ರಾಜೇಂದ್ರ ಸ್ವಾಗತಿಸಿ ,ಕಾರ್ಯದರ್ಶಿ ಮಂಚಿ ಸುರೇಶ್ ರಾವ್ ವರ‍್ಷಿಕ ವರದಿ ವಾಚಿಸಿದರು , ಸುರ‍್ಶನ ಆಚರ‍್ಯ ವರ‍್ಷಿಕ ಲೆಕ್ಕ ಪತ್ರ ಮಂಡಿಸಿ , ಸಂಯುಕ್ತ ಕರ್ನಾಟಕ ಉಡುಪಿ ಜಿಲ್ಲಾ ವರದಿಗಾರ ಕಿರಣ್ ಮಂಜನ ಬೈಲ್ ಕಾರ‍್ಯಕ್ರಮ ನಿರೂಪಿಸಿ , ವಂದಿಸಿದರು ಸಂಘದ ಸದಸ್ಯರಿಂದ ಮನೋರಂಜನಾ ಕಾರ‍್ಯಕ್ರಮ ನೆಡೆಯಿತು.

