ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್‌ನಲ್ಲಿ “ಅನಿಕ” ನೂತನ ಸಂಗ್ರಹ ಅನಾವರಣ

0
16

ಮಲಬಾರ್ ಗೋಲ್ಡ್ & ಡೈಮಂಡ್ ನಲ್ಲಿ ಮೈನ್ ಡೈಮಂಡ್ಸ್ ಸಬ್ ಬ್ರಾಂಡ್ ಇದರ ನೂತನ ಸಂಗ್ರಹ ಅನಿಕ ವನ್ನು ಶನಿವಾರ ಮಳಿಗೆಯಲ್ಲಿ ಅನಾವರಣ ಮಾಡಲಾಯಿತು.

ಭಾರತ್ ಸ್ಕೌಟ್ಸ್ ಅಂಡ್ ಗೈಡ್ ಸಂಸ್ಥೆಯ ರಾಜ್ಯ ಪುರಸ್ಕಾರ ಪ್ರಶಸ್ತಿ ಪುರಸ್ಕೃತರಾದ ದಿವ್ಯ ರಾಣಿ ಅನಾವರಣ ಮಾಡಿ ಅನಿಕ ಸಂಗ್ರಹ ಭಕ್ತಿಪೂರ್ವಕ ಸಂಕೇತಗಳನ್ನು ಮತ್ತು ಸೂಕ್ಷ್ಮ ವಜ್ರದ ಕರಕುಶಲತೆಯನ್ನು ಸಮ್ಮಿಲನಗೊಳಿಸುತ್ತದೆ. ಇದು ಕೇವಲ ಆಭರಣವಲ್ಲ, ಬದಲಿಗೆ ಶ್ರದ್ದೆ ಮತ್ತು ಸಂಪ್ರದಾಯದ ಪ್ರತಿಬಿಂಬವಾಗಿದೆ ಎಂದು ತಮ್ಮ ಮಾತುಗಳಿಂದ ಸಂಗ್ರಹದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

 ಮಣಿಪಾಲ ಗ್ರೂಪ್ ನಲ್ಲಿ ಲೀಗಲ್ & ಸೆಕ್ರೆಟರಿ ವಿಭಾಗದಲ್ಲಿ ಅಸಿಸ್ಟೆಂಟ್ ಮ್ಯಾನೇಜರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ದ್ಯುತಿ ದಿವಾಕರ್ ರಾಜ್ ಕಾರ್ಯಕ್ರಮದಲ್ಲಿ ಮಾತನಾಡಿ ಅನೀಕ ಸಂಗ್ರಹದ ವಿನ್ಯಾಸಗಳು ಸಾಂಸ್ಕೃತಿಕ ಶ್ರೀಮಂತಿಕೆ, ಪರಂಪರೆ ಮತ್ತು ದೈವಿಕತೆಯನ್ನು ಬಿಂಬಿಸುತ್ತವೆ ಎಂದು ಸಂಗ್ರಹದ ಬಗ್ಗೆ ವರ್ಣಿಸುತ್ತಾ ಮಲಬಾರ್ ಗೋಲ್ಡ್ ನ ಸಾಮಾಜಮುಖಿ ಕಾರ್ಯಕ್ರಮದ ಬಗ್ಗೆ ಶ್ಲಾಗಿಸಿದರು.

ಕಾರ್ಯಕ್ರಮದಲ್ಲಿ ನಝರ್ ಅಹಮ್ಮದ್ ಉಪ ಶಾಖಾ ಮುಖ್ಯಸ್ಥರು, ರಘುರಾಮ್ ಬ್ರಾಂಚ್ ಮ್ಯಾನೇಜರ್, ಗಿರೀಶ್ ರೈ ಸೇಲ್ಸ್ ಮ್ಯಾನೇಜರ್, ಶೇಕ್ ಫಾರ್ಹನ್ ಮಾರ್ಕೆಟಿಂಗ್ ಮ್ಯಾನೇಜರ್ ಮತ್ತು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here