ದಾವಣಗೆರೆ : ಸಾಲಿಗ್ರಾಮದ ಸರಸ್ವತಿ ದಾಸಪ್ಪ ಶೆಣೈ ಪ್ರತಿಷ್ಥಾನ ಪ್ರತೀ ವರ್ಷದಂತೆ 2027ನೇ ಸಾಲಿನಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಪ್ರತಿಭಾವಂತ ಉತ್ತಮ ಫಲಿತಾಂಶ ಬಂದ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಸರಸ್ವತಿ ಕನ್ನಡ ಮುಕುಟಮಣಿ” ಅಂತರಾಷ್ಟ್ರೀಯ ಪ್ರಶಸ್ತಿಗೆ ಆಹ್ವಾನಿಸಲಾಗಿದೆ ಎಂದು ಪ್ರತಿಷ್ಥಾನದ ಸಂಸ್ಥಾಪಕರಾದ ಸಾಲಿಗ್ರಾಮ ಗಣೇಶ್ ಶೆಣೈ ತಿಳಿಸಿದ್ದಾರೆ.
ದಿನಾಂಕ 4-4-2027ರಂದು ಭಾನುವಾರ ದಾವಣಗೆರೆಯ ಗಡಿಯಾರ ಗೋಪುರದ ಹತ್ತಿರವಿರುವ ಚನ್ನಗಿರಿ ವಿರೂಪಾಕ್ಷಪ್ಪ ಕಲ್ಯಾಣ ಮಂಟಪದಲ್ಲಿ ಅದ್ದೂರಿಯಾಗಿ ವಿಜೃಂಭಣೆಯಿAದ ಪ್ರಶಸ್ತಿ ಪ್ರಧಾನ ಮಾಡಲಾಗುವುದು ಎಂದು ಪ್ರತಿಷ್ಥಾನದ ಅಧ್ಯಕ್ಷರಾದ ಡಾ|| ನಾಗೇಶ್ ಸಂಜೀವ ಕಿಣಿ ಪ್ರಕಟಿಸಿದ್ದಾರೆ. ಪ್ರತೀ ಸಾಧಕರಿಗೆ ಕನ್ನಡ ತಿಲಕವಿಟ್ಟು, ಕನ್ನಡ ಕಂಕಣ ಕಟ್ಟಿ, ಕನ್ನಡಾರತಿ ಬೆಳಗಿ, ಪುಷ್ಪ ವೃಷ್ಟಿಯೊಂದಿಗೆ ಗೌರವಿಸಿ. ನಂತರ ಅವರದೇ ಭಾವಚಿತ್ರವಿರುವ ಸನ್ಮಾನ ಪತ್ರ ಮುದ್ರಿಸಿ, ಪ್ರೇಂ ಮಾಡಿ, ಪ್ರತ್ಯೇಕ ವೇದಿಕೆಯ ಸಿಂಹಾಸನದ ಮೇಲೆ ಕೂರಿಸಿ, ಕನ್ನಡ ಪೇಟಾದೊಂದಿಗೆ ಹಾರ, ಶಾಲು ಕನ್ನಡ ತಾಯಿ ಭುವನೇಶ್ವರಿಯ ಸ್ಮರಣಿಕೆ ನೀಡಿ ಪ್ರತಿಷ್ಠಾನದ ಮುತ್ತೆöÊದೆಯವರು ಆರತಿ ಬೆಳಗುತ್ತಾರೆ. ಹೆಚ್ಚಿನ ಮಾಹಿತಿಗೆ 9538732777 ಈ ಸನೀಹವಾಣಿಗೆ ಸಂಪರ್ಕಿಸಕಬೇಕಾಗಿ ಪ್ರತಿಷ್ಥಾನದ ಪ್ರಧಾನ ಕಾರ್ಯದರ್ಶಿ ಶ್ರೀಪತಿ ರಾಘವೇಂದ್ರ ಶೆಣೈಯವರು ವಿನಂತಿಸಿದ್ದಾರೆ.

