ಮಾರ್ಕೋ ಗ್ಲೊಸಿಯಾ..!

0
119

ನಾಲಗೆ ನಮ್ಮ ದೇಹದ ಅವಿಭಾಜ್ಯ ಅಂಗ. ನಮಗೆ ಮಾತನಾಡಲು, ಆಹಾರ ಜೀರ್ಣ ಮಾಡಲು ಪೂರಕವಾಗಿ ಆಹಾರ ಪಚನ ಮಾಡಲು ಮತ್ತು ನಮ್ಮ ವಿಚಾರಗಳನ್ನು ಸರಿಯಾಗಿ ಅಭಿವ್ಯಕ್ತಿಸಲು ನಾಲಗೆ ಅತೀ ಅಗತ್ಯ. ಕಾರಣಾಂತರಗಳಿಂದ ನಾಲಗೆಯೂ ತನ್ನ ಗಾತ್ರಕ್ಕಿಂತ ದೊಡ್ಡದಾಗುವುದನ್ನು ‘ಮಾರ್ಕೋ ಗ್ಲೊಸಿಯಾ’ ಎಂದು ಕರೆಯಲಾಗುತ್ತದೆ. ಹಾಗೇ ನಾಲಗೆಯೂ ದೊಡ್ಡದಾಗಲು ಹತ್ತು ಹಲವು ಕಾರಣಗಳು ಇದೆ.

ಹೆಚ್ಚಾಗಿ ಮಕ್ಕಳಲ್ಲಿ ಈ ಸಮಸ್ಯೆ ಹೆಚ್ಚು ಕಂಡು ಬರುತ್ತದೆ. ಅತಿಯಾದ ಕೊಬ್ಬು ನಾಲಗೆಯ ಸ್ನಾಯಗಳ ನಡುವೆ ಶೇಖರಣೆಯಾಗುವುದು ಅಥವಾ ಇನ್ನಾವುದೇ ಪ್ರೋಟಿನ್ ನಾಲಗೆಯ ಒಳಭಾಗದಲ್ಲಿ ಅನಗತ್ಯವಾಗಿ ಶೇಖರಣೆಗೊಳ್ಳುವುದರಿಂದ ನಾಲಗೆಯ ಗಾತ್ರ ದೊಡ್ಡದಾಗುತ್ತದೆ. ಹೀಗೆ ನಾಲಗೆಯ ಗಾತ್ರ ಬಾಯಿಯ ಗಾತ್ರಕ್ಕಿಂತ ದೊಡ್ಡದಾದಲ್ಲಿ ಮಾತನಾಡಲು, ಉಸಿರಾಡಲು ಮತ್ತು ತಿನ್ನಲು ಕಷ್ಟವಾಗುತ್ತದೆ. ಅದೇ ರೀತಿ ಎಂಜಲು ಬಾಯಿಯಿಂದ ಸೋರಿ ಹೋಗಬಹುದು ಮತ್ತು ಉಸಿರಾಡುವಾಗ ಗೊರ ಗೊರ ಶಬ್ದ ಬರಲು ಸಾಧ್ಯತೆ ಇರುತ್ತದೆ. ಸಾಮಾನ್ಯವಾಗಿ ನಾಲಗೆ ಬಾಯಿಯಿಂದ ಹೊರಗೆ ಕಾಣುವುದಿಲ್ಲ.

ಹಲ್ಲುಗಳ ನಡುವೆ ಬಾಯಿಯಲ್ಲಿ ತನ್ನ ಪಾಡಿಗೆ ತಾನು ಇರುತ್ತದೆ. ಯಾವಾಗ ನಾಲಗೆಯ ಗಾತ್ರ ದೊಡ್ಡದಾಗುತ್ತದೊ, ಆವಾಗ ನಾಲಗೆ ಹಲ್ಲುಗಳ ನಡುವಿನಿಂದ ಬಾಯಿಯಿಂದಲೂ ಹೊರಗೆ ಕಂಡು ಬರುತ್ತದೆ. ಇದು ನೋಡಲು ಅಸಹ್ಯವಾಗಿ ಇರುತ್ತದೆ.

ಕಾರಣಗಳು ಏನು?

ಡೌನ್ ಸಿಂಡ್ರೋಮ್ ಎಂಬ ರೋಗದಿಂದ ಬಳಲುವ ಮಕ್ಕಳ ನಾಲಗೆ ದೊಡ್ಡದಾಗಿರುತ್ತದೆ. ಹುಟ್ಟುವಾಗಲೇ ಈ ಸಮಸ್ಯೆ ಜನ್ಮಜಾತವಾಗಿ ಬಂದಿರುತ್ತದೆ.

ಹರ್ಲರ್ ಸಿಂಡ್ರೋಮ್ ಆಥವಾ ಹಂಟರ್ ಸಿಂಡ್ರೋಮ್ ಇದು ಹತ್ತು ಹಲವು ರೋಗಗಳ ಗುಚ್ಚವಾಗಿದ್ದು, ಈ ರೋಗ ಇರುವವರಿಗೆ “ಪಾಲಿಸಾಬರೈಡ್” ಎಂಬ ಸಕ್ಕರೆಯ ಕಾಂಪ್ಲೇಕ್ಸ್ ಜೀರ್ಣವಾಗದೆ ನಾಲಗೆ ನಡುವೆ ಸೇರಿಕೊಂಡು ನಾಲಗೆ ದೊಡ್ಡದಾಗುತ್ತದೆ.

ಬೇಕ್‍ವಿತ್-ವೀಡರ್ ಮ್ಯಾನ್ ಸಿಂಡ್ರೋಮ್:- ಇದು ಬೆಳವಣಿಗೆಗೆ ಸಂಭಂದಿಸಿದ ಸಿಂಡ್ರೋಮ್ ಆಗಿದ್ದು ದೇಹದ ಗಾತ್ರ ದೊಡ್ಡದಾಗಿರುತ್ತದೆ. ಹೆಚ್ಚಿನ ಎಲ್ಲಾ ಅಂಗಗಳು ನಿಗಧಿತ ಗಾತ್ರಕ್ಕಿಂತ ಜಾಸ್ತಿ ಬೆಳೆಯುತ್ತದೆ. 90% ಮಂದಿಯಲ್ಲಿ ನಾಲಗೆ ಗಾತ್ರ ದೊಡ್ಡದಾಗಿರುತ್ತದೆ.

ಅಮೈ ಲೈಡೋಸಿಸ್ ಇದೊಂದು ಪ್ರೋಟೀನ್ ಚಯಪಚಾಯ ಕ್ರೀಯೆಗೆ ಸಂಭಂಧಿಸಿದ ರೋಗವಾಗಿದ್ದು, ಪ್ರೋಟೀನ್ ಮೆಟಾಬಾಲಿಸಮ್ ತೊಂದರೆಯಿಂದಾಗಿ, ನಾಲಗೆಯಲ್ಲಿ ಅಮೈಲಾಯ್ಡ ಎಂಬ ಪ್ರೋಟೀನ್ ಶೇಖರಣೆಯಾಗಿ ನಾಲಗೆಯ ಗಾತ್ರ ತೀವ್ರವಾಗಿ ಬೆಳೆಯುತ್ತದೆ.

ಹೈಪೋ ಥೈರಾಡಿಸಮ್:- ಇದೊಂದು ಗುರಾಣಿ ಗ್ರಂಥಿಗೆ ಸಂಭಂದಿಸಿದ ರೋಗವಾಗಿದ್ದು ದೇಹದ ಜೀವ ಕೋಶಗಳ ಜೈವಿಕ ಕ್ರಿಯೆ, ಥೈರಾಯ್ಡ್ ರಸದೂತಗಳ ಅಲಭ್ಯತೆಯಿಂದ ನಿಧಾನವಾಗುತ್ತದೆ. ಮತ್ತು ನಾಲಗೆಯ ಗಾತ್ರ ದೊಡ್ಡದಾಗುತ್ತದೆ. ಮಕ್ಕಳಲ್ಲಿ ಈ ಸಮಸ್ಯೆ ಹೆಚ್ಚಿರುತ್ತದೆ.

ಡಿಪ್ತೀರಿಯಾ :- ಇದೊಂದು ಅತೀ ವಿರಳ ಬ್ಯಾಕ್ಟೀರಿಯ ಸೋಂಕು ಆಗಿದ್ದು ನಾಲಗೆ ಗಾತ್ರ ಹಿಗ್ಗುತ್ತದೆ.

ಅಕ್ರೋಮೆಗಾಲೆ :- ಇದೊಂದು ಬೆಳವಣಿಗೆಗೆ ಸಂಬಂಧಿಸಿದ ರಸದೂತಗಳ ಅತಿಯಾದ ಸ್ರವಿಸುವಿಕೆಯಿಂದ ಉಂಟಾಗುವ ಖಾಯಿಲೆಯಾಗಿರುತ್ತದೆ. ನಾಲಗೆ ಗಾತ್ರ ಕೂಡ ಅತಿಯಾಗಿ ಹಿಗ್ಗುತ್ತದೆ.

ವಿಟಮಿನ್ ಕೊರತೆ :- ವಿಟಮಿನ್ B12 ಕೊರತೆಯಿಂದ ನಾಲಗೆಯ ಉರಿಯೂತ ಉಂಟಾಗಿ ನಾಲಗೆ ಗಾತ್ರ ದೊಡ್ಡದಾಗುತ್ತದೆ.

ನಾಲಗೆ ಕ್ಯಾನ್ಸರ್ – ಲಿಂಪÉೂೀಮಾ, ಹೆಮಾಂಜಿಯೋಮ ಲಿಂಪಾಂಜಿಯೊಮಾ ಮುಂತಾದ ಕ್ಯಾನ್ಸರ್ ಗಳಲ್ಲಿ ನಾಲಗೆ ಗಾತ್ರ ದೊಡ್ಡದಾಗಿರುತ್ತದೆ.

ನಾಲಗೆ ಸೋಂಕು :- ನಾಲಗೆಯಲ್ಲಿ ಸೋಕು ಉಂಟಾಗಿ ಕೀವು ತುಂಬಿದಾಗಲೂ ನಾಲಗೆಯ ಗಾತ್ರ ದೊಡ್ಡದಾಗುತ್ತದೆ.

ನಾಲಗೆಗೆ ಗಾಯ ಉಂಟಾದಾಗ :- ಆಕ್ಸಿಡೆಂಟ್ ಸಂಧರ್ಭಗಳಲ್ಲಿ ನಾಲಗೆಗೆ ತೀರ್ವ ಗಾಯವಾಗಿ ನಾಲಗೆ ಊದಿಕೊಂಡು ಗಾತ್ರ ಹಿಗ್ಗುವ ಸಾಧ್ಯತೆ ಇದೆ.

    ಪತ್ತೆ ಖಚ್ಚುವುದು ಹೇಗೆ?

    ರೋಗಿಯ ರೋಗದ ಚರಿತ್ರೆ, ವಯಸ್ಸು ಮತ್ತು ದೈಹಿಕ ಪರೀಕ್ಷೆ ಮಾಡಲಾಗುತ್ತದೆ. ಅಗತ್ಯವಿದ್ದಲ್ಲಿ ಸಿಟಿ ಸ್ಕ್ಯಾನ್ ಮತ್ತು ಎಮ್‍ಆರ್‍ಐ ಸ್ಕ್ಯಾನ್ ಮಾಡಲಾಗುತ್ತದೆ. ರಕ್ತ ಪರೀಕ್ಷೆ ಕೂಡ ಕೆಲವೊಮ್ಮೆ ಅಗತ್ಯವಿರುತ್ತದೆ. ಎಲ್ಲವನ್ನು ತಾಳೆ ಹಾಕಿ ವೈದ್ಯರು ರೋಗದ ನಿರ್ಣಯಕ್ಕೆ ಬರುತ್ತಾರೆ.

    ಚಿಕಿತ್ಸೆ : ಸಾಮಾನ್ಯವಾಗಿ ಯಾವ ಕಾರಣಕ್ಕೆ ನಾಲಗೆ ಗಾತ್ರ ದೊಡ್ಡದಾಗುತ್ತದೆ ಎಂಬುದನ್ನು ತಿಳಿಯಲಾಗುತ್ತದೆ. ನಾಲಗೆ ಗಾತ್ರ ದೊಡ್ಡದಾಗಲು ಕಾರಣವಾದ ಅಂಶಗಳನ್ನು ಗುರುತಿಸಿ ಅದಕ್ಕೆ ಚಿಕಿತ್ಸೆ ನೀಡಲಾಗುತ್ತದೆ. ಉದಾಹರಣೆ ಉರಿಯೂತದಿಂದ ನಾಲಗೆ ಗಾತ್ರ ಹಿಗ್ಗಿದಲ್ಲಿ ಸ್ಟಿರಾಯ್ಡ್ ನೀಡಿ ಸರಿಪಡಿಸಲಾಗುತ್ತದೆ. ಹೈಪೋಥೈರಾಯ್ಡ್ ಸಮಸ್ಯೆ ಇದ್ದಲ್ಲಿ ಅದಕ್ಕೆ ಚಿಕಿತ್ಸೆ ನೀಡಲಾಗುತ್ತದೆ. ಇನ್ನು ನಾಲಗೆ ಗಾತ್ರ ಅತಿಯಾಗಿ, ನಾಲಗೆ ಬಾಯಿಯಿಂದ ಹೊರಗೆ ಬಂದಾಗ ಸರ್ಜರಿ ಅಗತ್ಯವಿರುತ್ತದೆ. ಮಾತಾನಾಡಲು, ಊಟ ಮಾಡಲು ಮತ್ತು ಉಸಿರಾಡಲು ಕಷ್ಟವಾದಲ್ಲಿ ಸರ್ಜರಿ ಮಾಡಿ ನಾಲಗೆಯ ಗಾತ್ರವನ್ನು ಚಿಕ್ಕದು ಮಾಡಲು ಸಾಧ್ಯವಿದೆ.

    ಡಾ|| ಮುರಳಿ ಮೋಹನ್‍ಚೂಂತಾರು

    LEAVE A REPLY

    Please enter your comment!
    Please enter your name here