ದಕ್ಷಿಣ ಕನ್ನಡದ ನಾಲ್ವರು ಸಾಧಕರಿಗೆ ಪ್ರತಿಷ್ಠಿತ ‘ವಿಕಾಸ’ ಪ್ರಶಸ್ತಿಗಳ ಗರಿ!

0
80

​ಗುಬ್ಬಿಯ ಪಾವನ ಕ್ಷೇತ್ರವಾದ ಚಿದಂಬರ ಆಶ್ರಮದಲ್ಲಿ ಜರುಗಿದ ‘ವಿಕಾಸ’ ಸಂಸ್ಥೆಯ ದಶಮಾನೋತ್ಸವ ಸಂಭ್ರಮದಲ್ಲಿ, ದಕ್ಷಿಣ ಕನ್ನಡ ಜಿಲ್ಲೆಯ ನಾಲ್ವರು ಅಪ್ರತಿಮ ಸಾಧಕರಿಗೆ ಪ್ರತಿಷ್ಠಿತ ಪ್ರಶಸ್ತಿಗಳನ್ನು ಪ್ರದಾನ ಮಾಡಿ ಗೌರವಿಸಲಾಯಿತು.

ವಿಕಾಸ ಸಮಾನಮನಸ್ಕ ಮಾಧ್ಯಮ ಮಿತ್ರರ ವೇದಿಕೆಯ ರಾಜ್ಯ ಉಪಾಧ್ಯಕ್ಷ ಮಂದಾರ ರಾಜೇಶ್ ಭಟ್ ಹಾಗೂ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಪತ್ರಕರ್ತ ಹರೀಶ್ ಕೆ. ಆದೂರು ಅವರ ಶಿಫಾರಸಿನ ಮೇರೆಗೆ ಕರಾವಳಿಯ ಈ ಸಾಧಕರಿಗೆ ಪ್ರಶಸ್ತಿಗಳು ಒಲಿದು ಬಂದಿವೆ.

​ಸುಮನ ಪ್ರಸಾದ್:- ಭರತನಾಟ್ಯ ಹಾಗೂ ರಂಗಭೂಮಿ ಕಲಾ ಸಂಘಟನೆಯ ಸಾಧನೆಗಾಗಿ “ವಿಕಾಸ ಕಲಾರಂಗ ಭೂಷಣ ಪ್ರಶಸ್ತಿ-2026” ನೀಡಿ ಗೌರವಿಸಲಾಯಿತು.

​ಡಾ|| (hc) ಸೋಮಶೇಖರ ಮಯ್ಯ:- ಸಂಗೀತ ವಿದ್ವಾಂಸರು ಹಾಗೂ ಸಮಾಜ ಸಂಘಟಕರಾದ ಇವರಿಗೆ “ವಿಕಾಸ ಸಮನ್ವಯ ಭೂಷಣ ಪ್ರಶಸ್ತಿ-2026” ನೀಡಿ ಸತ್ಕರಿಸಲಾಯಿತು.

​ಪದ್ಮಶ್ರೀ ಭಟ್ ನಿಡ್ಡೋಡಿ:- ಸಾಂಸ್ಕೃತಿಕ ಸಂಘಟನೆ ಹಾಗೂ ನಿಸ್ವಾರ್ಥ ಸಮಾಜ ಸೇವೆಗಾಗಿ ಇವರಿಗೆ “ವಿಕಾಸ ಸಮಾಜ ಭೂಷಣ ಪ್ರಶಸ್ತಿ-2026” ಮುಡಿಗೇರಿಸಲಾಯಿತು.

​ವೇದಾವತಿ ಅರವಿಂದ ಭಟ್ ಕೇಮಾರು:- ಭಾಷಾ ಪ್ರಚಾರ ಹಾಗೂ ಅಕ್ಯುಪಂಚರ್ ತಜ್ಞರಾದ ಇವರಿಗೆ “ವಿಕಾಸ ಅಕ್ಷರ-ಆರೋಗ್ಯ ಭೂಷಣ ಪ್ರಶಸ್ತಿ-2026” ಸಮರ್ಪಿಸಲಾಯಿತು.

​ಈ ಸುವರ್ಣ ಕ್ಷಣಕ್ಕೆ ವಿಕಾಸ ಸಂಸ್ಥೆಯ ಗೌರವಾಧ್ಯಕ್ಷ ಬಿ. ಎಲ್. ಹನುಮಂತ ರಾವ್, ಅಧ್ಯಕ್ಷ ಶ್ರೀನಾಥ ಜೋಶಿ, ಕಾರ್ಯದರ್ಶಿ ಹನುಮೇಶ ಯಾವಗಲ್, ರಾಜ್ಯ ಉಪಾಧ್ಯಕ್ಷ ಮಂದಾರ ರಾಜೇಶ್ ಭಟ್ ಹಾಗೂ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಹರೀಶ್ ಕೆ. ಆದೂರು ಸೇರಿದಂತೆ ಅಪಾರ ಕಲಾಭಿಮಾನಿಗಳು ಸಾಕ್ಷಿಯಾಗಿ ಸಾಧಕರನ್ನು ಹರಸಿದರು.

LEAVE A REPLY

Please enter your comment!
Please enter your name here