ದುಬೈನಲ್ಲಿ ಅಪಘಾತದಿಂದ ಗಾಯಾಳುವಾಗಿ ಚಿಕಿತ್ಸೆ ಪಡೆಯುತ್ತಿದ್ದ ಪುನರೂರು ಯುವತಿ ಸಾವು..!

0
85

ಮುಲ್ಕಿ : ದುಬೈನಲ್ಲಿ ನಡೆದ ಅಪಘಾತದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಪುನರೂರು ಬಳಿಯ ಯುವತಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ ಮೃತ ಯುವತಿಯನ್ನು ಪುನರೂರು ನಿವಾಸಿ ಪ್ರತಿಭಾನ್ವಿತ ಕಲಾವಿದೆ ಶ್ರೀಲತಾ ತಂತ್ರಿ(22ವರ್ಷ)ಎಂದು ಗುರುತಿಸಲಾಗಿದೆ.

ಮೃತ ಯುವತಿ ಶ್ರೀಲತಾ ಕಟೀಲು, ಮೂಡುಬಿದ್ರೆ ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾಭ್ಯಾಸ ಮುಗಿಸಿ, ಉದ್ಯೋಗಕ್ಕಾಗಿ2025 ರ ಜುಲೈನಲ್ಲಿ ದುಬೈಗೆ ಹೋಗಿದ್ದು ಕಳೆದ ನವೆಂಬರ್‌ನಲ್ಲಿ ನಡೆದ ವಾಹನ ಅಪಘಾತದಲ್ಲಿ ತಲೆಗೆ ಗಾಯವಾಗಿ ಕೋಮಾ ಸ್ಥಿತಿಯಲ್ಲಿದ್ದರು. ಕಂಪನಿಯವರೇ ಚಿಕಿತ್ಸಾ ವೆಚ್ಚವನ್ನು ನೋಡಿಕೊಂಡಿದ್ದು, ಪರಿಸ್ಥಿತಿ ಸುಧಾರಣೆ ಕಾಣದೆ, ಮೂರು ದಿನಗಳ ಹಿಂದೆ ಮಂಗಳೂರಿನ ಆಸ್ಪತ್ರೆಗೆ ಕರೆತರಲಾಗಿತ್ತು.

ಮೃತರು ತಾಯಿ ಮತ್ತು ಅಕ್ಕನನ್ನು ಅಗಲಿದ್ದಾರೆ. ಶಾಲಾಕಾಲೇಜು ದಿನಗಳಲ್ಲಿ ನೃತ್ಯಗಾರ್ತಿಯಾಗಿ, ರಾಜ್ಯಮಟ್ಟದ ಕ್ರೀಡಾಪಟುವಾಗಿ, ಕಲಿತ ಶಿಕ್ಷಣ ಸಂಸ್ಥೆಗಳಲ್ಲಿ ಅತ್ಯುತ್ತಮ ವಿದ್ಯಾರ್ಥಿನಿ ಎಂದು ಬಹುಮಾನಿತೆಯಾಗಿದ್ದರು.

LEAVE A REPLY

Please enter your comment!
Please enter your name here