ಯುವಾ ಬ್ರಿಗೇಡ್ ಕುಂದಾಪುರ ,ಶ್ರೀ ಶಾರದಾ ಕಾಲೇಜು ಬಸ್ರೂರು ಹಾಗೂ ಬಸ್ರೂರು ಗ್ರಾಮಸ್ಥರ ಪರವಾಗಿ ವೃತ್ತಿಯಿಂದ ನಿವೃತ್ತಿ ಪಡೆದ ವೀರ ಯೋಧ ಕರುಣಾಕರ ಗಾಣಿಗ ಬಸ್ರೂರು ಇವರಿಗೆ ಬಸ್ರೂರು ನಾಗರೀಕ ಸನ್ಮಾನ ಕಾರ್ಯಕ್ರಮ ಶನಿವಾರ ಶ್ರೀ ಶಾರದಾ ಕಾಲೇಜು ನಲ್ಲಿ ನಡೆಯಿತು .

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅನುಪಮ ಎಸ್ ಶೆಟ್ಟಿ ಸಂಚಾಲಕಿ ಶ್ರೀ ಶಾರದಾ ಕಾಲೇಜು ಟ್ರಸ್ಟ ಬಸ್ರೂರು ವಹಿಸಿದ್ದರು.ಮುಖ್ಯ ಅತಿಥಿಗಳಾಗಿ ಡಾ.ದಯಾನಂದ ಎನ್.ಪ್ರಾಂಶಪಾಲರು ಶ್ರೀ ಶಾರದಾ ಕಾಲೇಜು ಬಸ್ರೂರು,ಸಂದೀಪ ಗಾಣಿಗ ಆಜ್ರಿ ಸಂಚಾಲಕರು ಯುವಾ ಬ್ರಿಗೇಡ್ ಕುಂದಾಪುರ,ವೇದಿಕೆಯಲ್ಲಿದ್ದರು.ವಿಶೇಷ ಉಪನ್ಯಾಸವಾಗಿ ಭಾರತೀಯ ಸೈನಿಕರ ಯಶೋಗಾಥೆ ಬಗ್ಗೆ ಪ್ರಖರ ವಾಗ್ಮಿ ಪ್ರಕಾಶ್ ಮಲ್ಪೆ ವಿಚಾರ ಹಂಚಿಕೊಂಡರು.
ಸಭಾ ಕಾರ್ಯಕ್ರಮಕ್ಕೂ ಮುನ್ನ ಕರುಣಾಕರ ಗಾಣಿಗ ಬಸ್ರೂರು ಇವರ ಮನೆಯಿಂದ ಅದ್ಧೂರಿ ತೆರೆದ ವಾಹನದ ಮೂಲಕ ಬರ ಮಾಡಿಕೊಳ್ಳಲಾಯಿತು .ಕಾಲೇಜಿನ ಎನ್.ಸಿ.ಸಿ ಘಟಕ ಘಟಕದವರಿಂದ ಗೌರವ ಸ್ವಾಗತಿಸಲಾಯಿತು.
ಈ ಸಮಯದಲ್ಲಿ ನಿವೃತ್ತ ಸೈನಿಕರು ಹಾಗೂ ಹಾಲಿ ಸೈನಿಕರು ಕಾರ್ಯಕ್ರಮಕ್ಕೆ ಆಗಮಿಸಿದ್ದರು.
ಕಾರ್ಯಕ್ರಮದಲ್ಲಿ ಪ್ರದೀಪ ಕುಮಾರ್ ಬಸ್ರೂರು,ಶ್ರೀನಾಗರಾಜ ಸಂತೆಕಟ್ಟೆ , ಚಂದ್ರ ಗಾಣಿಗ ಬಳ್ಕೂರು,ಕೃಷ್ಣ ಕಳಂಜೆ,ರಾಘವೇಂದ್ರ ಗಾಣಿಗ,ಅಶೋಕ್ ಕೆರೆಕಟ್ಟೆ,ಕಂದಾವರದ ರಾಜಶೇಖರ ,ಅಶೋಕ ಬಿ ಕೆ ಉಪಸ್ಥಿತರಿದ್ದರು.
ಈ ಸಮಯದಲ್ಲಿ ಬಸ್ರೂರು ಸ್ಪೋಟ್ಸ್ ಕ್ಲಬ್ ರಿ ಬಸ್ರೂರು ,ಕುಂದಾಪುರ ಹಾಗೂ ಬಸ್ರೂರು ಗಾಣಿಗ ಸಮಾಜ ,ಬಿಲ್ಲವ ಸಮಾಜ ಸೇವಾ ಸಂಘ ಬಸ್ರೂರು,ಕೊಂಕಣಿ ಖಾರ್ವಿ ಸಮಾಜ ಬಸ್ರೂರು,ನಿವೃತ್ತ ಹಾಗೂ ಹಾಲಿ ಸೈನಿಕರು ಕುಂದಾಪುರ ,ಶ್ರೀ ಶಾರದಾ ಕಾಲೇಜು ಬಸ್ರೂರು ಸಭಾ ವೇದಿಕೆಯಲ್ಲಿ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ನಿರೂಪಣೆಯನ್ನು ಅನೂಶ್ರೀ ಜಡ್ಕಲ್ ,ಧನ್ಯವಾದವನ್ನು ರಾಜೇಶ್ ಗಾಣಿಗ ಬಸ್ರೂರು ನಡೆಸಿದರು. ಪ್ರಾರ್ಥನೆಯನ್ನು ಕಾಲೇಜಿನ ವಿಧ್ಯಾರ್ಥಿನಿಯವರು ನಡೆಸಿದರು.ಕೊನೆಯಲ್ಲಿ ವಂದೇ ಮಾತರಂ ಗೀತೆಯನ್ನು ರೂಪಾ ಬಿ ಪೈ ಯವರು ಹಾಡಿ ಕಾರ್ಯಕ್ರಮ ಮುಕ್ತಾಯ ಗೊಳಿಸಿದರು.

