ದಾವಣಗೆರೆಯ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯ ವತಿಯಿಂದ ಪ್ರತೀ ವರ್ಷದಂತೆ ಈ ವರ್ಷವೂ 71ನೇ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಕೇರಳ ರಾಜ್ಯದ ಕಾಸರಗೋಡಿನ ಡಾ|| ವಾಣಿಶ್ರೀಯವರನ್ನು “ಕರುನಾಡ ಕನ್ನಡ ಕಣ್ಮಣಿ” ರಾಜ್ಯ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಕಲಾಕುಂಚ ಸಾಂಸ್ಕೃತಿಕ ಸಂಸ್ಥೆ ಅಧ್ಯಕ್ಷರಾದ ವಾಸುದೇವ ಲಕ್ಷ್ಮಣ್ ರಾಯ್ಕರ್ ತಿಳಿಸಿದ್ದಾರೆ.
ಮಳಿಯಾಳ ಭಾಷೆಯ ಕೇರಳದಲ್ಲಿ ಕನ್ನಡ ಭಾಷೆಯನ್ನು ವೈಭವೀಕರಿಸಿ “ಗಡಿನಾಡ ಕನ್ನಡ ಸಾಹಿತ್ಯ ಸಾಂಸ್ಕೃತಿಕ ಸಂಸ್ಥೆ”ಯ ಸಂಸ್ಥಾಪಕರಾಗಿ ಕಲೆ, ಜನಪದ, ಸಾಹಿತ್ಯ, ಸಂಗೀತ, ನೃತ್ಯ, ಯಕ್ಷಗಾನ ಹೀಗೆ ಸಾಂಸ್ಕೃತಿಕ ಚಟುವಟಿಕೆಗಳೊಂದಿಗೆ ನಿರಂತರವಾಗಿ ಕಠಿಣ ಪರಿಶ್ರಮದಿಂದ ಮೂರುವರೆ ದಶಕಗಳಿಂದ ಸಾಧನೆ ಮಾಡಿ ವೈದ್ಯೆಯಾದರೂ ಸಂಸ್ಕಾರ, ಸಂಸ್ಕೃತಿಗಳ ಸಾಧನೆಗಳನ್ನು ಗುರುತಿಸಿ ಈ ರಾಜ್ಯ ಪ್ರಶಸ್ತಿಯನ್ನು ಡಾ|| ವಾಣಿಶ್ರೀಯವರಿಗೆ ವಿತರಿಸಲಾಗುವುದು ಎಂದು ಸಂಸ್ಥಾಪಕರಾದ ಸಾಲಿಗ್ರಾಮ ಗಣೇಶ್ ಶೆಣೈ ಪ್ರಕಟಿಸಿದ್ದಾರೆ.
“ಗಡಿನಾಡ ಕನ್ನಡ ಸಾಹಿತ್ಯ ಸಾಂಸ್ಕೃತಿಕ ಸಂಸ್ಥೆ” ಹಾಗೂ ಕಲಾಕುಂಚ ಸಂಸ್ಥೇಯ ಪದಾಧಿಕಾರಿಗಳು ಡಾ|| ವಾಣಿಶ್ರೀಯವರಿಗೆ ಅಭಿಮಾನದಿಂದ ಅಭಿನಂದಿಸಿದ್ದಾರೆ ಎಂದು ಕಲಾಕುಂಚದ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಕೆ.ಸಿ.ಉಮೇಶ್ ಶುಭ ಹಾರೈಸಿದ್ದಾರೆ.

