ಐಸಿಎಐ ಉಡುಪಿ ಶಾಖೆ (SIRC) ; ಹೊಸ ಕಾಯ್ದೆ ಬಗ್ಗೆ 2 ದಿನಗಳ ಕಾರ್ಯಾಗಾರ ಸಂಪನ್ನ

0
9

ಐಸಿಎಐ ಉಡುಪಿ ಶಾಖೆ (SIRC)ಯು 2025ರ ಆದಾಯ ತೆರಿಗೆ ಕಾಯ್ದೆ ಕುರಿತ ಎರಡು ದಿನಗಳ ಕಾರ್ಯಾಗಾರವನ್ನು ಮೇ 29 ಮತ್ತು 30, 2026 ರಂದು ಉಡುಪಿಯ ಓಷನ್ ಪರ್ಲ್ ಟೈಮ್ಸ್ ಸ್ಕ್ವೇರ್‌ನಲ್ಲಿ ಯಶಸ್ವಿಯಾಗಿ ಆಯೋಜಿಸಲಾಯಿತು. ಕಾರ್ಯಕ್ರಮವನ್ನು ಮಂಗಳೂರು ಆದಾಯ ತೆರಿಗೆ ಇಲಾಖೆಯ ಹೆಚ್ಚುವರಿ ಆಯುಕ್ತರಾದ ಸಿ. ಬಿ. ಸುರೇಶ್ ಕುಮಾರ್, ಐಆರ್‌ಎಸ್ ಉದ್ಘಾಟಿಸಿ, ಹೊಸ ಆದಾಯ ತೆರಿಗೆ ಕಾಯ್ದೆಯನ್ನು ಸಮಗ್ರವಾಗಿ ಅರ್ಥಮಾಡಿಕೊಳ್ಳುವ ಅಗತ್ಯತೆಯನ್ನು ಒತ್ತಿಹೇಳಿದರು.

ಈ ಕಾರ್ಯಾಗಾರದಲ್ಲಿ 100ಕ್ಕೂ ಹೆಚ್ಚು ಚಾರ್ಟರ್ಡ್ ಅಕೌಂಟೆಂಟ್‌ಗಳು ಹಾಗೂ ತೆರಿಗೆ ವೃತ್ತಿಪರರು ಭಾಗವಹಿಸಿದರು. ಹೊಸ ಕಾಯ್ದೆಯ ಪ್ರಮುಖ ಅಂಶಗಳ ಕುರಿತು ತಜ್ಞರು ಉಪನ್ಯಾಸ ನೀಡಿದರು.

ಐಸಿಎಐ ಉಡುಪಿ ಶಾಖೆ (SIRC)ಯು 2025ರ ಆದಾಯ ತೆರಿಗೆ ಕಾಯ್ದೆ ಕುರಿತ ಎರಡು ದಿನಗಳ ಕಾರ್ಯಾಗಾರವನ್ನು ಮೇ 29 ಮತ್ತು 30, 2026 ರಂದು ಉಡುಪಿಯ ಓಷನ್ ಪರ್ಲ್ ಟೈಮ್ಸ್ ಸ್ಕ್ವೇರ್‌ನಲ್ಲಿ ಯಶಸ್ವಿಯಾಗಿ ಆಯೋಜಿಸಲಾಯಿತು. ಕಾರ್ಯಕ್ರಮವನ್ನು ಮಂಗಳೂರು ಆದಾಯ ತೆರಿಗೆ ಇಲಾಖೆಯ ಹೆಚ್ಚುವರಿ ಆಯುಕ್ತರಾದ ಶ್ರೀ ಸಿ. ಬಿ. ಸುರೇಶ್ ಕುಮಾರ್, ಐಆರ್‌ಎಸ್ ಉದ್ಘಾಟಿಸಿ, ಹೊಸ ಆದಾಯ ತೆರಿಗೆ ಕಾಯ್ದೆಯನ್ನು ಸಮಗ್ರವಾಗಿ ಅರ್ಥಮಾಡಿಕೊಳ್ಳುವ ಅಗತ್ಯತೆಯನ್ನು ಒತ್ತಿಹೇಳಿದರು.

ಈ ಕಾರ್ಯಾಗಾರದಲ್ಲಿ 100ಕ್ಕೂ ಹೆಚ್ಚು ಚಾರ್ಟರ್ಡ್ ಅಕೌಂಟೆಂಟ್‌ಗಳು ಹಾಗೂ ತೆರಿಗೆ ವೃತ್ತಿಪರರು ಭಾಗವಹಿಸಿದರು. ಹೊಸ ಕಾಯ್ದೆಯ ಪ್ರಮುಖ ಅಂಶಗಳ ಕುರಿತು ತಜ್ಞರು ಉಪನ್ಯಾಸ ನೀಡಿದರು.

ಕಾರ್ಯಕ್ರಮದಲ್ಲಿ ಶಾಖೆಯ ಅಧ್ಯಕ್ಷರಾದ ಸಿಎ. ಎಂ. ರಾಘವೇಂದ್ರ ಮೊಗೆರಾಯ ಅವರು ಸಭೆಯನ್ನು ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕಾರ್ಯದರ್ಶಿ ಸಿಎ. ಕೆ. ಲಕ್ಷ್ಮೀಶ ರಾವ್ ಕಾರ್ಯಕ್ರಮ ನಿರ್ವಹಿಸಿದರು. ಉಪಾಧ್ಯಕ್ಷರಾದ ಸಿಎ. ಅಶ್ವತ್ ಜೆ. ಶೆಟ್ಟಿ, ಮಾಜಿ ಅಧ್ಯಕ್ಷೆ ಹಾಗೂ ಖಜಾಂಚಿಯಾದ ಸಿಎ. ಅರ್ಚನಾ ಆರ್. ಮೈಯ್ಯ ಮತ್ತು ಸದಸ್ಯರಾದ ಸಿಎ. ಸೋನಿತ್ ಎಸ್. ಶೆಟ್ಟಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here