‘ಮಧ್ಯಮ ವರ್ಗದಜನರಿಗೆ ಶಿಕ್ಷಣ ನೀಡುವಉದ್ದೇಶದಿಂದ 60 ವರ್ಷಗಳ ಹಿಂದೆ ಸ್ಥಾಪನೆಯಾದ ಶ್ರೀ ಮಹಾವೀರಕಾಲೇಜು ಇಂದಿಗೂ ಸಮಾಜಮುಖಿಯಾಗಿ ಕಾರ್ಯನಿರ್ವಹಿಸುತ್ತಿದೆ.
ಸ್ವಾಭಿಮಾನಿಯಾಗಿ ಬದುಕಬೇಕೆಂಬ ಮಹತ್ವಾಕಾಂಕ್ಷೆಯಿಂದ ಯಾವುದೇ ಲಾಭದ ಉದ್ದೇಶವಿಲ್ಲದೆ ಸ್ಥಾಪನೆಯಾದ ಈ ಕಾಲೇಜುಉತ್ತಮ ಶಿಕ್ಷಣ ನೀಡುತ್ತಾ ಬಂದಿದೆ.ಶ್ರಮಜೀವನದಿಂದ ಮಾತ್ರಯಶಸ್ಸು ಸಾಧ್ಯಎನ್ನುವುದನ್ನುಎಲ್ಲರೂಅರಿಯಬೇಕು. ಶಿಕ್ಷಣವೇ ಆಸ್ತಿಯಾಗಬೇಕು.ಎಲ್ಲರೂ ವಿದ್ಯಾವಂತರಾಗಿಆರ್ಥಿಕವಾಗಿ ಸ್ಥಿತಿವಂತರಾದಾಗ ಮಾತ್ರದೇಶದಅಭಿವೃದ್ಧಿ ಸಾಧ್ಯ.ಸಾಮಾನ್ಯ ವರ್ಗಕ್ಕೆ ಶಿಕ್ಷಣವೇ ಬೆನ್ನೆಲುಬು.
ಶಿಕ್ಷಣ ಪಡೆದಾಗ ಮಾತ್ರ ಸಮಾಜದದಲ್ಲಿಉನ್ನತ ಸ್ಥಾನ ಗಳಿಸಲು ಸಾಧ್ಯ.ಕಾಲೇಜಿನ ಸೌಲಭ್ಯಗಳ ಸದುಪಯೋಗ ಪಡೆದುಕಾಲೇಜು ಸ್ಥಾಪನೆಗೊಂಡ ಧ್ಯೇಯವನ್ನು, ಸಂಸ್ಥಾಪಕರ ಕನಸನ್ನು ನನಸಾಗಿಸಿ’ಎಂದು ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಕೆ. ಅಭಯಚಂದ್ರಜೈನ್ ತಿಳಿಸಿದರು.
ಪ್ರಥಮ ಪದವಿ ಪೂರ್ವತರಗತಿಯ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಳ್ಳಲಾದ ‘ಎಲೆವೇಟ್ 2026’ಓರಿಯೆಂಟೇಶನ್ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಪದವಿ ಕಾಲೇಜಿನ ಪ್ರಾಂಶುಪಾಲ ಡಾ.ರಾಧಾಕೃಷ್ಣ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.
ಪದವಿ ಪೂರ್ವಕಾಲೇಜಿನ ಪ್ರಾಂಶುಪಾಲೆ ಲೆಫ್ಟಿ ನೆಂಟ್ ವಿಜಯಲಕ್ಷ್ಮೀ ಕಾಲೇಜಿನ ನೀತಿ ನಿಯಮಗಳ ಬಗ್ಗೆ ತಿಳಿಸಿದರು. ವೇದಿಕೆಯಲ್ಲಿ ಆಡಳಿತ ಮಂಡಳಿಉಪಾಧ್ಯಕ್ಷ ಸಂಪತ್ ಸಾಮ್ರಾಜ್ಯ ಉಪಸ್ಥಿತರಿದ್ದರು.
ಉಪನ್ಯಾಸಕಿಯರಾದಅರ್ಚನಾ ಸ್ವಾಗತಿಸಿ, ಸುಪ್ರೀತಾ ವಂದಿಸಿದರು.ಅಶ್ವಿತಾ ಕಾರ್ಯಕ್ರಮ ನಿರೂಪಿಸಿದರು.

