ಉಡುಪಿ : ಜೂನ್ 14ರಂದು ಉಡುಪಿ ಆನಲಪಾಡಿಯ ಶ್ರೀ ಜನಾರ್ದನ ಮಹಾಕಾಳಿ ದೇವಸ್ಥಾನದ ಭರೀಣಿ ಮಂಟಪದಲ್ಲಿ ನಡೆಯಲಿರುವ ಉಡುಪಿ ಜಿಲ್ಲಾ ವರ್ತಕರ ಸಂಘದ ಸಮಾವೇಶದ ಆಹ್ವಾನ ಪತ್ರಿಕೆಯನ್ನು ದೇವಸ್ಥಾನದ ಧರ್ಮದರ್ಶಿ ವಿಜಯ ಬಲ್ಲಾಳ ಅವರು ಬಿಡುಗಡೆಗೊಳಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ವಿಜಯ ಬಲ್ಲಾಳ ಅವರು, ಸಮಾವೇಶದ ಯಶಸ್ವಿ ಆಯೋಜನೆಗೆ ದೇವಸ್ಥಾನದ ವತಿಯಿಂದ ಸಂಪೂರ್ಣ ಸಹಕಾರ ನೀಡುವುದಾಗಿ ಭರವಸೆ ನೀಡಿದರು.
ಉಡುಪಿ ಜಿಲ್ಲಾ ವರ್ತಕರ ಸಂಘದ ಅಧ್ಯಕ್ಷ ಐರೋಡಿ ಸಹನಶೀಲ ಪೈ ಮಾತನಾಡಿ, ಈಗಾಗಲೇ ಅರ್ಜಿ ಸಲ್ಲಿಸಿರುವ ವಿದ್ಯಾರ್ಥಿಗಳಿಗೆ ಸಂಘದ ‘ವಿದ್ಯಾದಾನ’ ಯೋಜನೆಯಡಿ ಉಚಿತ ಪುಸ್ತಕ ವಿತರಣೆ ಮಾಡಲಾಗುವುದು ಎಂದು ತಿಳಿಸಿದರು. ಅಲ್ಲದೆ, ಮದುವೆ, ಉಪನಯನ, ಗೃಹಪ್ರವೇಶ ಹಾಗೂ ಅನಾರೋಗ್ಯದಂತಹ ಸಂದರ್ಭಗಳಲ್ಲಿ ಸದಸ್ಯರಿಗೆ ಆರ್ಥಿಕ ನೆರವು ನೀಡುವ ಯೋಜನೆಯೂ ಸಂಘದ ಮೂಲಕ ಮುಂದುವರಿಯಲಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸಂಘದ ಕಾರ್ಯದರ್ಶಿ ಪಾದೆಮಠ ನಾಗರಾಜ ಅಡಿಗ, ಸಂಪರ್ಕಾಧಿಕಾರಿ ಮಡಿ ವಿಶ್ವನಾಥ ಸೇರಿದಂತೆ ಹಲವರು ಉಪಸ್ಥಿತರಿದ್ದರು.

