ಮಂಗಳೂರು,: ರಂಗಭೂಮಿ ಕ್ಷೇತ್ರದಲ್ಲಿ ಸಲ್ಲಿಸಿರುವ ವಿಶಿಷ್ಟ ಸೇವೆಯನ್ನು ಗುರುತಿಸಿ ಖ್ಯಾತ ರಂಗಭೂಮಿ ಕಲಾವಿದ ಹಾಗೂ ನಿರೂಪಕ ಪರಪ್ಪಾಡಿ ಪ್ರಶಾಂತ್ ಶೆಟ್ಟಿ ಅವರಿಗೆ ‘ರಂಗ ಚಾಣಕ್ಯ’ ಬಿರುದು ನೀಡಿ ಗೌರವಿಸಲಾಯಿತು.
ತೆಲಿಕೆದ ತೆನಾಲಿ ಮತ್ತು ಬಂಡಿಮಠ ಫೌಂಡೇಶನ್ ಸಹಯೋಗದಲ್ಲಿ ಆಯೋಜಿಸಲಾದ ‘ತೆಲಿಕೆದ ಸಂಭ್ರಮ – 2026’ ಕಾರ್ಯಕ್ರಮದಲ್ಲಿ ಈ ಗೌರವ ಪ್ರದಾನ ನಡೆಯಿತು. ಸುನಿಲ್ ನೆಲ್ಲಿಗುಡ್ಡೆ ಅವರ ಮುಂದಾಳತ್ವದ ತೆಲಿಕೆದ ತೆನಾಲಿ ತಂಡವು ಪ್ರಶಾಂತ್ ಶೆಟ್ಟಿ ಅವರ ದೀರ್ಘಕಾಲದ ರಂಗಭೂಮಿ ಸೇವೆ, ಕಲಾ ಸಾಧನೆ ಹಾಗೂ ಸಮಾಜಮುಖಿ ಕೊಡುಗೆಗಳನ್ನು ಪರಿಗಣಿಸಿ ಈ ಬಿರುದನ್ನು ನೀಡಿ ಸನ್ಮಾನಿಸಿತು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಗಣ್ಯರು ಪ್ರಶಾಂತ್ ಶೆಟ್ಟಿ ಅವರ ಕಲಾ ಪಯಣವನ್ನು ಶ್ಲಾಘಿಸಿ ಅಭಿನಂದಿಸಿದರು. ರಂಗಭೂಮಿ ಮತ್ತು ನಿರೂಪಣಾ ಕ್ಷೇತ್ರದಲ್ಲಿ ಅವರು ಸಲ್ಲಿಸಿರುವ ಸೇವೆ ಯುವ ಕಲಾವಿದರಿಗೆ ಪ್ರೇರಣೆಯಾಗಿದ್ದು, ಅವರ ಸಾಧನೆಯನ್ನು ಗುರುತಿಸಿ ನೀಡಲಾದ ‘ರಂಗ ಚಾಣಕ್ಯ’ ಬಿರುದು ಮತ್ತಷ್ಟು ಗೌರವವನ್ನು ತಂದಿದೆ ಎಂದು ಅಭಿಪ್ರಾಯಪಟ್ಟರು.

