ಪುತ್ತೂರು : ಉಡುಪಿ ಎಲ್. ವಿ. ಪಿ. ಹಿರಿಯ ಪ್ರಾಥಮಿಕ ಶಾಲಾ ಪ್ರಾರಂಭೋತ್ಸವದಲ್ಲಿ ನಯಂಪಳ್ಳಿ ಶ್ರೀ ಮಡಿ ಮಲ್ಲಿಕಾರ್ಜುನ ದೇವಸ್ಥಾನದ ಭಜನಾ ಮಂಡಳಿ ವತಿಯಿಂದ ಶಾಲೆಯ ಸುಮಾರು 250 ವಿದ್ಯಾರ್ಥಿಗಳಿಗೆ, ಸಮವಸ್ತ್ರ ವಿತರಣಾ ಕಾರ್ಯವನ್ನು ನಡೆಸಿಕೊಟ್ಟರು.
ಇದೇ ವೇದಿಕೆಯಲ್ಲಿ ಪುತ್ತೂರಿನ ಸಮಾಜ ಸೇವಕರಾದ ದಿನೇಶ್ ಪೈ ಅವರ ಬಳಗದವರಿಂದ ಎಲ್ಲಾ ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕ ವಿತರಣಾ ಮಾಡಲಾಯಿತು. ಭಜನಾ ಮಂಡಳಿಯ ಗೌರವಾಧ್ಯಕ್ಷರಾದ ಗಣೇಶ್ ಕೋಟ್ಯಾನ್, ಅಧ್ಯಕ್ಷರಾದ ಪುಷ್ಪರಾಜ್, ಪ್ರಭಾಕರ ಶೆಟ್ಟಿಗಾರ್, ಶ್ರೀನಿವಾಸ ,ರಾಜೇಶ್ ಶೇಟ್,ರಾಮನಾಥ ಶೆಣೈ, ದಿನೇಶ್ ಪೈ ಉಮೇಶ್ ಶೆಟ್ಟಿ ,ರಾಮಕೃಷ್ಣ, ಸುಧೀಶ್,ಸತೀಶ್ ನಾಯ್ಕ ಭಜನಾ ಮಂಡಳಿಯ ಪಧಾದಿಕಾರಿಗಳು ಉಪಸ್ಥಿತರಿದ್ದರು.
ಶಾಲಾ ವತಿಯಿಂದ ದಾನಿಗಳನ್ನು , ಶಾಲು ಹೊದಿಸಿ , ಸ್ಮರಣಿಕೆ ನೀಡಿ ಗೌರವಿಸಲಾಯಿತು.
ಶಾಲಾ ಮುಖ್ಯಪಾಧ್ಯಾಯನಿ ಕುಮಾರಿ ಲೂಸಿ ಸೋಜಾ ಸ್ವಾಗತಿಸಿದರು . ಸಹ ಶಿಕ್ಷಕಿ ಶ್ಯಾಮಲಾ ಕಾರ್ಯಕ್ರಮ ನಿರೊಪಿಸಿದರು , ಸಂತೋಷ್ ಕುಮಾರ್ ಶೆಟ್ಟಿ ವಂದಿಸಿದರು.

