ಮಂಗಳೂರು: ಭಾರತ ದೇಶದ ಉದ್ದಗಲಕ್ಕು ಸುಮಾರು 5.69 ಲಕ್ಷ ಕೋಟಿ ವ್ಯವಹಾರ ಮಾಡುವ 5 ಲಕ್ಷ ಹೋಟೆಲ್ಗಳನ್ನು ಪ್ರತಿನಿಧಿಸುವ ಸರ್ವೋಚ್ಚ ಸಂಸ್ಥೆ ನ ಪಶ್ಚಿಮ ಕರ್ನಾಟಕ ಚಾಪ್ಟರ್ ಮಂಗಳೂರಿನಲ್ಲಿ ಪ್ರಾರಂಭವಾಗಿದೆ. ಹೋಟೆಲ್ ಅವತಾರ ನಲ್ಲಿ ಪ್ರಾರಂಭವಾಗಿರುವ ಈ ಸಂಸ್ಥೆ ಕರ್ನಾಟಕದ ಆಹಾರ ಸಂಸ್ಕೃತಿಯನ್ನು, ಆದಿತ್ಯ ಕ್ಷೇತ್ರವನ್ನು ಬಲಪಡಿಸುವಲ್ಲಿ, ಉತ್ತೇಜಿಸುವಲ್ಲಿ ಪ್ರಮುಖ ಮೈಲುಗಲ್ಲು. ಕರ್ನಾಟಕದ ಆಹಾರ ಮತ್ತು ಅತಿಥಿಯ ಪ್ರವಾಸೋದ್ಯಮದೊಂದಿಗೆ ಒಡಮೂಡಿಕೊಂಡು ಪ್ರಖ್ಯಾತವಾಗಿದೆ.
ಕರಾವಳಿ ಜಿಲ್ಲೆಗಳು ಸುಮಾರು 11 ಕೋಟಿಗೂ ಅಧಿಕ ಪ್ರವಾಸಿಗರನ್ನು ಆಕರ್ಷಿಸುತ್ತಿವೆ. ಆದುದರಿಂದ ಕೇಂದ್ರೀಕೃತ ಸಂಸ್ಥೆಯ ಅಡಿಗೆ ತರುವ ಉದ್ದೇಶದಿಂದ ಈ ಚಾಪ್ಟರನ್ನು ಪ್ರಾರಂಭಿಸಲಾಗಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ಪ್ರಶಾಂತ ರಾವ್ ಆರೂರು ಪ್ರಕಟಿಸಿದರು.
ಉದ್ಯಮಗಳ ಮಧ್ಯೆ ಸಹಕಾರ ಬಲವರ್ಧನೆ, ಉದ್ಯಮಿಗಳಿಗೆ ಪ್ರೋತ್ಸಾಹ, ಸವಾಲು ಎದುರಿಸಲು ಸಹಕಾರ ನೀಡಲಾಗುವುದು ಎಂದು ಸಂಸ್ಥೆಯ ನಿರ್ದೇಶಕ ಅನುರಾಗ ಕಟ್ರಿಯಾರ್ ತಿಳಿಸಿದರು. ಮಂಗಳೂರಿನ ಆಹಾರ ವೈಶಿಷ್ಟ್ಯವನ್ನು ದೇಶದಲ್ಲೆಡೆ ಪ್ರಸರಿಸುವ ಪ್ರಯತ್ನ ನಡೆಯುತ್ತಿದೆ ಎಂದು ಉಪಾಧ್ಯಕ್ಷ ಪ್ರಣವ್ ರುಂಗಟ ತಿಳಿಸಿದರು. ಎನ್ ಆರ್ ಎ ಐ ನಲ್ಲಿ ದೇಶದ 30ಕ್ಕೂ ಹೆಚ್ಚು ಹೋಟೆಲ್ ಮಾಲಕರನ್ನು ಸದಸ್ಯರನ್ನಾಗಿ ಹೊಂದಿದ್ದು ಅಂತರ್ದೇಶಿಯ ಆಹಾರ ಪಾನೀಯ ಬ್ರಾಂಡುಗಳನ್ನು ಕೂಡ ಪ್ರತಿನಿಧಿಸಲಾಗುತ್ತಿರುವುದು ವಿಶೇಷ.
ಪತ್ರಿಕಾಗೋಷ್ಠಿಯಲ್ಲಿ ಉಪಮುಖ್ಯಸ್ಥ ಡೇನ್ ಡಿಸೋಜ, ಕಾರ್ಯದರ್ಶಿ ಅಶ್ವಿನಿ ರೈ, ಜೊತೆ ಕಾರ್ಯದರ್ಶಿ ಶಿವಪ್ರಸಾದ್ ತಲ್ಲೂರು, ಕೋಶಾಧಿಕಾರಿ ಸುಧಾಕರ್ ಪೂಂಜ ಉಪಸ್ಥಿತರಿದ್ದರು.
ವರದಿ ರಾಯಿ ರಾಜ ಕುಮಾರ

