ನಿರಂತರ 14 ವರ್ಷಗಳಿಂದ ಶಾಲಾ ವಿದ್ಯಾರ್ಥಿಗಳಿಗೆ ಪುಸ್ತಕ, ಸಾಮಗ್ರಿ ವಿತರಿಸುತ್ತಿರುವ ವನಜಾಕ್ಷಿ ಚಾರಿಟೇಬಲ್ ಟ್ರಸ್ಟ್

0
40

ಮೂಡುಬಿದಿರೆಯ ವನಜಾಕ್ಷಿ ಜಾರಿ ಟೇಬಲ್ ಟ್ರಸ್ಟ್ ನವರು ಗಳಿಗೆ 14 ವರ್ಷಗಳಿಂದ ಮೂಡುಬಿದಿರೆಯ ಕನ್ನಡ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳಿಗೆ ಪುಸ್ತಕ ಇತ್ಯಾದಿ ಸಾಮಗ್ರಿಗಳನ್ನು ವಿತರಿಸುತ್ತಿದ್ದಾರೆ. ಪ್ರಾಂತ್ಯ ಶಾಲೆಯ ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗೆ ಜೂನ್ 6 ರಂದು ಪುಸ್ತಕಗಳನ್ನು ವಿತರಿಸಿ ಮಾತನಾಡಿದ ಟ್ರಸ್ಟ್ ನ ಅಧ್ಯಕ್ಷ ಧನಲಕ್ಷ್ಮಿ ಉದ್ಯಮಿ ಶ್ರೀಪತಿ ಭಟ್ ಉತ್ತಮ ಆದರ್ಶಗಳನ್ನು ಮೈಗೂಡಿಸಿಕೊಂಡು ಕಲಿಕೆಯಲ್ಲಿ ಸಾಕಷ್ಟು ಪ್ರಗತಿಯನ್ನು ಸಾಧಿಸಿ ಎಂದು ಹಾರೈಸಿದರು.

ಟ್ರಸ್ಟ್ ನ ದೀಪ್ತಿ ಭಟ್ ಪುಸ್ತಕಗಳಿಗೆ ಉತ್ತಮ ರೀತಿಯ ಬೈಂಡ್ಗಳನ್ನು ಹಾಕಿ, ಒಳ್ಳೆಯ ಅಂಶಗಳನ್ನು ಬರೆದುಕೊಂಡು ಬದುಕಿನಲ್ಲಿ ಸಾಧನೆಯನ್ನು ಮಾಡಿ ಎಂದು ಹಾರೈಸಿದರು.

ಇದೇ ಸಂದರ್ಭದಲ್ಲಿ ಇನ್ನರ್ ವೀಲ್ ಮೂಡುಬಿದಿರೆ ಅಧ್ಯಕ್ಷೆ ನಿಶ್ಮಿತಾ ಹಾಗೂ ಸುಷ್ಮಾ ಪೈ ಪರಿಸರ ಸ್ನೇಹಿ ಬಟ್ಟೆ ಚೀಲಗಳನ್ನು ಶಿಕ್ಷಕರುಗಳಿಗೆ ವಿತರಿಸಿದರು. ಕಾರ್ಯಕ್ರಮದಲ್ಲಿ ಮಾತನಾಡಿದ ಲಯನ್ಸ್ ಕ್ಲಬ್ ಅಧ್ಯಕ್ಷ ಶಿವಪ್ರಸಾದ್ ಹೆಗ್ಡೆ ಮಾಧ್ಯಮಕ್ಕಿಂತ ಒಳ್ಳೆಯ ರೀತಿಯಲ್ಲಿ ಕಲಿಯುವುದು ಮುಖ್ಯವಾಗಿದೆ. ಉತ್ತಮ ಕಲಿಕೆಯಿಂದ ವಿದ್ಯಾರ್ಥಿಗಳು ಬೆಳೆದು, ಬೆಳಗಲು, ಕೀರ್ತಿವಂತರಾಗಲು ಸಾಧ್ಯವಿದೆ ಎಂದು ತಿಳಿಸಿದರು. ಘನ ತ್ಯಾಜ್ಯ ವಿಲೇವಾರಿಯ ಬಗ್ಗೆ ಪುರಸಭೆಯ ಶಿಲ್ಪ ಮಾಹಿತಿಯನ್ನು ನೀಡಿದರು.

ವೇದಿಕೆಯಲ್ಲಿ ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಕರುಣಾಕರ, ಮಾಜಿ ಅಧ್ಯಕ್ಷ ಭಾಸ್ಕರ, ಹಳೆ ವಿದ್ಯಾರ್ಥಿ ಸಂಘದ ಗಣೇಶ ರಾವ್, ರಿಚರ್ಡ್ ಕರ್ಡೋಜಾ, ವಿಲಿಯಂ ಮಿನೇಜೆಸ್, ಆಶಾ, ಸುಜಾತಾ ಹಾಜರಿದ್ದರು.

ಶಾಲಾ ಮುಖ್ಯೋಪಾಧ್ಯಾಯ ಸುಧಾಕರ ಸಾಲ್ಯಾನ್ ಸ್ವಾಗತಿಸಿದರು. ಶಿಕ್ಷಕಿ ಮಲ್ಲಿಕಾ ಕಾರ್ಯಕ್ರಮ ನಿರ್ವಹಿಸಿದರು.

ವರದಿ ರಾಯಿ ರಾಜ ಕುಮಾರ

LEAVE A REPLY

Please enter your comment!
Please enter your name here