ಮುಲ್ಕಿ: ತುಳುನಾಡಿನ ಸಂಸ್ಕಾರ ಮತ್ತು ಸಂಸ್ಕೃತಿಯನ್ನು ಉಳಿಸಬೇಕಾಗಿದೆ-ಡಾ. ಹರೀಶ್ಚಂದ್ರ ಪಿ ಸಾಲ್ಯಾನ್“ಅಪ್ಪೆ ಬೇರ್ ದ ತುಳುನಾಡ್” ಕಾರ್ಯಕ್ರಮದ ಯಶಸ್ಸಿಗೆ ಅಭಿನಂದನಾ ಸಮಾರಂಭ

0
8

ಮುಲ್ಕಿ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರೀ ಕ್ಷೇತ್ರದಲ್ಲಿ ಯಶಸ್ವಿಯಾಗಿ ನಡೆದ “ಅಪ್ಪೆ ಬೇರ್ ದ ತುಳುನಾಡ್ – ರಾಷ್ಟ್ರೀಯ ತುಳು ವಿಚಾರಗೋಷ್ಠಿ” ಕಾರ್ಯಕ್ರಮದ ಯಶಸ್ಸಿಗೆ ಕಾರಣಕರ್ತರಾದ ಕಾರ್ಯಕರ್ತರು ಹಾಗೂ ಸಂಘಟಕರಿಗೆ ಅಭಿನಂದನೆ ಸಲ್ಲಿಸುವ ಸಮಾರಂಭವು ಮುಲ್ಕಿ ಲಯನ್ಸ್ ಕ್ಲಬ್ ಸಭಾಂಗಣದಲ್ಲಿ ಶನಿವಾರ ನಡೆಯಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ಸಾಹಿತಿ ಡಾ.ಹರೀಶ್ಚಂದ್ರ ಸಾಲ್ಯಾನ್ ಅವರು, “ಅಪ್ಪೆ ಬೇರ್ ದ ತುಳುನಾಡ್ ಕಾರ್ಯಕ್ರಮದ ಯಶಸ್ಸು ಮುಲ್ಕಿಯ ಗಡಿಯನ್ನು ದಾಟಿ ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಸ್ಪಂದನೆ ಪಡೆಯುವಂತಾಗಿದೆ. ಇದು ಕೇವಲ ಒಂದು ಕಾರ್ಯಕ್ರಮದ ಯಶಸ್ಸಲ್ಲ, ತುಳುನಾಡಿನ ಮಾತೃಮೂಲ ಸಂಸ್ಕೃತಿ, ಜೀವನಮೌಲ್ಯಗಳು ಹಾಗೂ ಪರಂಪರೆಯ ಪುನರ್ಜಾಗೃತಿಯ ಸಂಕೇತವಾಗಿದೆ” ಎಂದರು
ಅವರು ಮಾತನಾಡಿ “ನಾವೆಲ್ಲರೂ ಇನ್ನಷ್ಟು ಜಾಗೃತರಾಗಿ ತುಳುನಾಡಿನ ಸಂಸ್ಕಾರ ಮತ್ತು ಸಂಸ್ಕೃತಿಯನ್ನು ಉಳಿಸಬೇಕಾಗಿದೆ. ಮಾತೃಮೂಲ ಪದ್ಧತಿಯ ಮೌಲ್ಯಗಳನ್ನು ಅರ್ಥಮಾಡಿಕೊಂಡು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ನಮ್ಮ ಪೂರ್ವಜರು ಕಟ್ಟಿಕೊಟ್ಟ ಪ್ರಾಚೀನ ಕುಟುಂಬ ವ್ಯವಸ್ಥೆ, ಸಾಮಾಜಿಕ ಸಂಬಂಧಗಳು ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಉಳಿಸುವುದು ಯುವ ಪೀಳಿಗೆಯ ಜವಾಬ್ದಾರಿಯಾಗಿದೆ” ಎಂದು ಅಭಿಪ್ರಾಯಪಟ್ಟರು.
ತುಳುವರ್ಡ್ಇಂಟರ್ನ್ಯಾಶನಲ್ನ ಸ್ಡಾಪಕ ಡಾ.ರಾಜೇಶ್ ಆಳ್ವ ಮಾತನಾಡಿ ಕಾರ್ಯಕ್ರಮವು ತುಳುನಾಡಿನ ಮಾತೃಮೂಲ ಸಂಸ್ಕೃತಿಯ ಕುರಿತಾಗಿ ಜನರಲ್ಲಿ ಹೊಸ ಚಿಂತನೆ ಮತ್ತು ಜಾಗೃತಿಯನ್ನು ಮೂಡಿಸಿದೆ ಹಾಗೂ
ಕಾರ್ಯಕ್ರಮ ಯಶಸ್ಸಿಗೆ ಪ್ರಮುಖ ಪಾತ್ರ ವಹಿಸಿದ ಅಪ್ಪೆಬೇರು ತುಳುನಾಡಿನ ಪ್ರಧಾನ ಸಂಚಾಲಕ ಸುನಿಲ್ ಆಳ್ವ ಹಾಗೂ ಅವರ ತಂಡದ ಸಹಯೋಗ, ಸಹಕಾರವನ್ನು ಶ್ಲಾಘಿಸಿ ಧನ್ಯವಾದ ಅರ್ಪಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ತುಳುವ ಮಹಾಸಭೆ ಇಂಟರ್ನ್ಯಾಷನಲ್ ನ ಪ್ರಧಾನ ಸಂಚಾಲಕಿ
ಭಾನುಮತಿ ಶೆಟ್ಟಿ ಕಕ್ವಗುತ್ತು ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ತುಳುವರ್ಲ್ಡ್ ಫೌಂಡೇಶನ್ ನ ಹರಿಪ್ರಸಾದ್ ರೈ, ವಸಂತ್ ರೈ, ಅರವಿಂದ ಬೆಲ್ಚಡ, ಮುಲ್ಕಿ ಬಂಟರ ಸಂಘದ ಅಧ್ಯಕ್ಷ ಅಶೋಕ್ ಕುಮಾರ್ ಶೆಟ್ಟಿ,ಮುಲ್ಕಿ ಲಯನ್ಸ್ ಕ್ಲಬ್ ಅಧ್ಯಕ್ಷ ಹರ್ಷರಾಜ್ ಶೆಟ್ಟಿ ಜಿ. ಯಮ್. ಸರಕಾರಿ ಪದವಿಪೂರ್ವ ಕಾಲೇಜು ಪ್ರಾಂಶುಪಾಲ ಡಾ.ವಾಸುದೇವ ಬೆಳ್ಳೆ, ವಾಸು ಪೂಜಾರಿ ಚಿತ್ರಾಪು, ಉದಯ್ ಕುಮಾರ್ ಶೆಟ್ಟಿ,ಅಪ್ಪೆಬೇರು ತುಳುನಾಡು ಸಮಿತಿಯ ಸರೋಜಿನಿ ಸುವರ್ಣ, ಶಶಿಕಲಾ ಯದೀಶ್ ಅಮೀನ್, ಲತಾ ಶೇಖರ್, ಗೀತಾ ಗಣೇಶ್, ಜಯಪಾಲ್ ಶೆಟ್ಟಿ, ಪ್ರಶಾಂತ್ ಶೆಟ್ಟಿ, ಅಮೂಲ್ಯ ಶೆಟ್ಟಿ, ಚಂದ್ರಕಲಾ ಶೆಟ್ಟಿ, ವಕೀಲರಾದ ರವೀಶ್ ಕಾಮತ್, ಸಾಧು ಅಂಚನ್ ಮಟ್ಟು,ಪ್ರೀತಿ ಅಮೀನ್ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here