ಶ್ರೀ ಕೃಷ್ಣ ಯುವಕ ಮಂಡಲದಿಂದ ಸಹಾಯ ಧನ ವಿತರಣೆ

0
11


ಪುತ್ತೂರು ತಾಲೂಕು ಯುವಜನ ಇಲಾಖೆ ಪ್ರಶಸ್ತಿ ಪುರಸ್ಕೃತ. ಶ್ರೀ ಕೃಷ್ಣ ಯುವಕ ಮಂಡಲ (ರಿ)ಸಿಟಿಗುಡ್ಡೆ ಪುತ್ತೂರು , ಸೇವಾ ಸಂಸ್ಥೆಯ 73ನೇ ಸಹಾಯ ಯೋಜನೆ ಮೇ ತಿಂಗಳ ಸಹಾಯ ಧನವನ್ನು ಕಾಸರಗೋಡು ಜಿಲ್ಲೆಯ ಬಂದ್ಯೋಡು ಅಡ್ಕ ಎಂಬಲ್ಲಿ ನೆಲೆಸಿರುವ ಗಣೇಶ್ ಹಾಗೂ ಗೌತಮಿ ಎಂಬ ಬಡ ಕುಟುಂಬದವರ ಪುತ್ರಿಯಾದ ಸಾನ್ವಿ ಹತ್ತು ವರ್ಷದ ಮಗುವಿನ ಚಿಕಿತ್ಸೆಗಾಗಿ ನೀಡಲಾಯಿತು.ಸಾನ್ವಿ ಮಾರಕ ರೋಗ ಕ್ಯಾನ್ಸರ್‌ನಿಂದ ಬಳಲುತ್ತಿದ್ದಾಳೆ. ಇದುವರೆಗೂ ಹಾಸ್ಪಿಟಲ್ ಚಿಕಿತ್ಸಾ ವೆಚ್ಚ 6 ಲಕ್ಷ ರೂಪಾಯಿ ಖರ್ಚು ಮಾಡಿದ್ದಾರೆ. ಪೈಂಟಿಂಗ್ ಕೆಲಸ ಮಾಡುವ ಗಣೇಶ್ ಅವರು, ಇನ್ನು ಮುಂದಿನ ಟ್ರೇಟ್‌ಮೆಂಟ್‌ ಗೆ ಹಣ ಹೊಂದಿಸಲು ಸಾಧ್ಯವಿಲ್ಲದ ಕಾರಣ ಮನವಿ ನೀಡಿ ಸಹಾಯ ಯಾಚಿಸಿ ದ್ದರು, ಇವರಿಗೆ ತಂಡದ ಸಹೃದಯಿ ದಾನಿಗಳಿಂದ ಸಂಗ್ರಹಿಸಿದ ಮೂವತ್ತೈದು ಸಾವಿರದ ಇನ್ನೂರು ರೂಪಾಯಿಯನ್ನು (35,200) ಮಗುವಿನ ತಂದೆ ಗಣೇಶ್ ರವರಿಗೆ ದಿನಾಂಕ 07..06..2026ರಂದು ನೀಡಲಾಯಿತು.ಈ ಸಂದರ್ಭದಲ್ಲಿ ಡಾ. ಶಾಂತಾ ಪುತ್ತೂರು ಶಿಕ್ಷಕರು, ನವೀನ್ ನಗರ ಸಿಟಿಗುಡ್ಡೆ ಪುತ್ತೂರು,ಮನೋಹರ್ , ಹರಿಣಾಕ್ಷಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here