ಶ್ರೀ ಬಾಲ ಗಣಪತಿ ದೇವಸ್ಥಾನ ಅನ್ನಪಾಡಿ ಸಜೀಪ ಮೂಡ ಶ್ರೀ ಕ್ಷೇತ್ರದ ವಟಾರದಲ್ಲಿ 28 .6 .2026. ಭಾನುವಾರದಂದು ಕೆಸರು ಗದ್ದೆ ಕ್ರೀಡಾಕೂಟ ನಡೆಸುವ ಬಗ್ಗೆ ಪೂರ್ವಭಾವಿ ಸಿದ್ಧತಾ ಸಭೆ ಆಡಳಿತ ಸಮಿತಿ ಅಧ್ಯಕ್ಷ ಯಶವಂತ ಪೂಜಾರಿ ದೇರಾ ಜೆಗು ತ್ತು ಅಧ್ಯಕ್ಷತೆಯಲ್ಲಿ ಜರಗಿತ್ತು ಗಣೇಶ ಚತುರ್ಥಿಯ ಪ್ರಯುಕ್ತ ಭಕ್ತರಿಗೆ ಬತ್ತದಕದಿರು (ತೆನೆ,) ವಿತರಿಸಲು ಅನುಕೂಲವಾಗುವಂತೆ ದೇವಾಲಯದ ಗದ್ದೆಯಲ್ಲಿ ಪಾರಂಪರಿಕ ರೀತಿಯಲ್ಲಿ ಭತ್ತದ ಕೃಷಿ ಕಾರ್ಯ ಹಮ್ಮಿಕೊಳ್ಳಲು ಸಾಮೂಹಿಕವಾಗಿ ಬತ್ತದ ನಾಟಿ ನಡೆಸುವ ಬಗ್ಗೆ ಕೃಷಿ ಪರಂಪರೆ ಮುಂದಿನ ಜನಾಂಗಕ್ಕೆ ತಿಳಿಸುವ ನಿಟ್ಟಿನಲ್ಲಿ ಸಾರ್ವಜನಿಕರಿಗೆ ಕೆಸರುಗದ್ದೆ ಕ್ರೀಡಾಕೂಟ ಹಮ್ಮಿಕೊಳ್ಳಲು ಸಂಕಲ್ಪ ಮಾಡಲಾಗಿದ್ದುಎಲ್ಲಾ ಭಗವದ್ಭಕ್ತರು ಸಹಕರಿಸಿ ಕ್ರೀಡಾಕೂಟವನ್ನು ಯಶಸ್ವಿಗೊಳಿಸಿ ಕೃಷಿ ಕಾರ್ಯಕ್ಕೆ ಪ್ರೋತ್ಸಾಹ ನೀಡುವಂತೆ ಸಜೀಪ ಮಾಗಣೆತಂತ್ರಿ ಎಂ ಸುಬ್ರಹ್ಮಣ್ಯ ಭಟ್ ಪ್ರಾಸ್ತಾವಿಕವಾಗಿ ಮಾತನಾಡಿದರು ಶ್ರೀ ಸದಾಶಿವ ದೇವಸ್ಥಾನ ಈಶ್ವರ ಮಂಗಳ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಗಿರೀಶ್ ಕುಮಾರ್ ಪೆರ್ವ, ಸಜಿ ಪಮೂಡ ಸರಕಾರಿ ಪದವಿ ಪೂರ್ವ ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷ ಎಸ್ ಶ್ರೀಕಾಂತ ಶೆಟ್ಟಿ, ನೇತಾಜಿ ಯುವಕ ಸಂಘ ಅಧ್ಯಕ್ಷ ನಿತಿನ್ ಅರಸ, ಪಂಚಾಯಿತಿ ಮಾಜಿ ಅಧ್ಯಕ್ಷ ವಿಶ್ವನಾಥ ಬೆಳ್ಚಡ, ಮಾಜಿ ಪಂಚಾಯತಿ ಸದಸ್ಯ ಭಾಸ್ಕರ, ಒಡಿಯೋರು ಗ್ರಾಮಾಭಿವೃದ್ಧಿ ಯೋಜನೆ, ಸಂಯೋಜಕಿಸರಸ್ವತಿ ಶೆಟ್ಟಿ,, ಮಹಿಳಾ ಸಮಿತಿ ಅಧ್ಯಕ್ಷ ವಿಜಯ ದೋಟ, ಕಾರ್ಯದರ್ಶಿ ಸುಜಾತ, ರಮೇಶ ಅನ್ನ ಪಾಡಿ, ಮನ್ವಿತು, ಸುರೇಶ್ ಬಂಗೇರ, ಪ್ರೇಮನಾಥದೇರಾಜೆ, ಪ್ರಮೋದ್ ಸಾನದ ಮನೆ, ಲಿಂಗಪ್ಪ ದೋಟ, ಪುರುಷೋತ್ತಮ ಕಾರಾಜೆ, ರಾಜೇಶ ಕೇಪಳ ಗುಡ್ಡೆ, ಮೊದಲಾದವರು ಸೂಕ್ತ ಸಲಹೆ ಸೂಚನೆ ನೀಡಿದರು.
ದೇವಾಲಯದ ಪ್ರಬಂಧ ಕಪ್ರಶಾಂತ್ ಕುಮಾರ್ ಸರ್ವರನ್ನು ಸ್ವಾಗತಿಸಿ ವ೦ದಿಸಿದರು ಕ್ರೀಡಾಕೂಟದ ಅಂಗವಾಗಿ ಬಾಲಕರಿಗೆ ಬಾಲಕಿಯರಿಗೆ ಪುರುಷರಿಗೆ ಮಹಿಳೆಯರಿಗೆ ವಿವಿಧ ಆಟೋಟ ಸ್ಪರ್ಧೆಗಳನ್ನು ಏರ್ಪಡಿಸಿ ಪ್ರಮಾಣ ಪತ್ರದೊಂದಿಗೆಬಹುಮಾನಗಳನ್ನು ನೀಡಲು ನಿರ್ಧರಿಸಲಾಯಿತು. ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಅತ್ಯಧಿಕ ಅಂಕಗಳನ್ನು ಗಳಿಸಿದ ವಿದ್ಯಾರ್ಥಿಗಳನ್ನು ಕಾರ್ಯಕ್ರಮದ೦ದು ಪುರಸ್ಕರಿಸಲು ತೀರ್ಮಾನಿಸಲಾಯಿತು.

