ಹೊಸ್ಮಾರಿನ ಜನಪ್ರಿಯ ವ್ಯಾಪಾರಿ ‘ಅಣ್ಣಾಜೆರ್’ ನಿಧನ

0
46

ಹೊಸ್ಮಾರು: ಸುತ್ತಮುತ್ತಲಿನ ಪ್ರದೇಶದಲ್ಲಿ ‘ಅಣ್ಣಾಜೆರ್’ ಎಂದೇ ಜನಪ್ರಿಯರಾಗಿದ್ದ ಹಿರಿಯ ವ್ಯಾಪಾರಿ, ಕೃಷಿಕ ಹಾಗೂ ಸಮಾಜಸೇವಕ ಪ್ರೇಮ್ ಕುಮಾರ್ ಅವರು ಕಳೆದ ರಾತ್ರಿ ನಿಧನರಾಗಿದ್ದಾರೆ.

ಪ್ರೇಮ್ ಕುಮಾರ್ ಅವರು ವ್ಯಾಪಾರ ಕ್ಷೇತ್ರದ ಜೊತೆಗೆ ಸಾರ್ವಜನಿಕ ಬದುಕಿನಲ್ಲೂ ಸಕ್ರಿಯರಾಗಿದ್ದರು. ತಾಲೂಕು ಪಂಚಾಯತ್ ಸದಸ್ಯರಾಗಿ ಸೇವೆ ಸಲ್ಲಿಸಿದ್ದ ಅವರು ಕೃಷಿಕರಾಗಿಯೂ ಗುರುತಿಸಿಕೊಂಡಿದ್ದರು. ಸಾಮಾಜಿಕ ಮತ್ತು ಧಾರ್ಮಿಕ ಕ್ಷೇತ್ರಗಳಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದ ಅವರು ಅಶಕ್ತರು, ಬಡವರು ಹಾಗೂ ಅಸಹಾಯಕರ ನೆರವಿಗೆ ಸದಾ ಧಾವಿಸುತ್ತಿದ್ದರು.

ಸರಕಾರಿ ಶಾಲೆಗಳ ಅಭಿವೃದ್ಧಿಗೆ ವಿವಿಧ ರೀತಿಯ ಕೊಡುಗೆಗಳನ್ನು ನೀಡಿದ್ದ ಅವರು ಶಿಕ್ಷಣ, ಸಮಾಜಸೇವೆ ಮತ್ತು ಧಾರ್ಮಿಕ ಕಾರ್ಯಗಳಲ್ಲಿ ನಿರಂತರವಾಗಿ ತೊಡಗಿಸಿಕೊಂಡಿದ್ದರು. ಅವರ ಸರಳತೆ, ಮಾನವೀಯತೆ ಹಾಗೂ ಸಹಾಯ ಹಸ್ತದಿಂದ ಸಮಾಜದ ಸರ್ವ ಧರ್ಮೀಯರ ಪ್ರೀತಿ ಮತ್ತು ಗೌರವಕ್ಕೆ ಪಾತ್ರರಾಗಿದ್ದು, ಎಲ್ಲರೂ ಅವರನ್ನು ಆತ್ಮೀಯವಾಗಿ ‘ಅಣ್ಣಾಜೆರ್’ ಎಂದು ಕರೆಯುತ್ತಿದ್ದರು.

LEAVE A REPLY

Please enter your comment!
Please enter your name here