ಮೂಡುಬಿದಿರೆ : ಆಶಕ್ತ ಹಿಂದೂ ಭಾಂದವ್ಯ ಸೇವಾ ನಿಧಿ ಮಹಿಳಾ ಘಟಕ ಇವರಿಂದ ದಿನಾಂಕ 7-06-2026 ನೇ ರವಿವಾರ ಅಪರಾಹ್ನ 4-00 ಗಂಟೆಗೆ ಸರಿಯಾಗಿ ಪಡುಮಾರ್ನಾಡು ಗ್ರಾಮ ಪಂಚಾಯತ್ ವ್ಯಾಪ್ತಿಯ ಬಸವನ ಕಜೆ ಎಂಬಲ್ಲಿಯ ಸತ್ಯಸಾರಮಣಿ ದೇವಸ್ಥಾನದ ವಠಾರದಲ್ಲಿ ಪರಿಶಿಷ್ಠ ಜಾತಿ ವರ್ಗದ ಮಕ್ಕಳಿಗೆ ಪುಸ್ತಕ,ಕೊಡೆ,ಬ್ಯಾಗ್ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷರಾದ ಮುಕಾಂಬಿಕ ಸಂಘದ ಉದ್ದೇಶದ ಬಗ್ಗೆ ವಿವರಿಸಿದರು. ಕಾರ್ಯದರ್ಶಿಯಾದ ಶಾಂತಭಂಡಾರಿಯವರು ಮಕ್ಕಳಿಗೆ ಹಿತವಚನ ಹೇಳಿದರು. ಕೋಶಾಧಿಕಾರಿ ಸುಕನ್ಯಾ ಸದಸ್ಯರು ವಸಂತಿ ಹಾಗೂ ಆಶಾಕಾರ್ಯಕರ್ತೆ ನಂದನ ಸಭೆಯಲ್ಲಿ ಉಪಸ್ಥಿತರಿದ್ದರು. ನವೀನ್ ಧನ್ಯಾವಾದಗಳನ್ನು ತಿಳಿಸಿದರು.

