ಚುನಾಯಿತ ಪ್ರಧಾನಿಯಾಗಿ ಪ್ರಧಾನಿ ಮೋದಿ ದಾಖಲೆಯ ಸುದೀರ್ಘ ಸೇವೆ

0
34

ಕಟೀಲು ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನದಲ್ಲಿ ವಿಶೇಷ ಪೂಜೆ

ಮೂಡುಬಿದಿರೆ : ಜಗತ್ತಿನಲ್ಲಿಯೇ ದಾಖಲೆಯ ಸುದೀರ್ಘಾವಧಿಯ ಯಶಸ್ವೀ ಮತ್ತು ಜನಪ್ರಿಯ ಆಡಳಿತ ನಡೆಸುತ್ತಿರುವ ಚುನಾಯಿತ ಪ್ರಧಾನಿ ನರೇಂದ್ರ ಮೋದಿಯವರ ದೀರ್ಘಾಯು ಪ್ರಾಪ್ತಿಗಾಗಿ ಮತ್ತು 2047 ರ ವಿಕಸಿತ ಭಾರತದ ಸಂಕಲ್ಪ ಸಾಧನೆಯ ಯಶಸ್ಸಿಗೆ ಕಟೀಲು ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನದಲ್ಲಿ ಅಧಿಕ ಮಾಸದ ಪುಣ್ಯ ಸಂದರ್ಭದಲ್ಲಿ ವಿಶೇಷ ಪೂಜೆ ನೆರವೇರಿಸಿ ಪ್ರಾರ್ಥಿಸಲಾಯ್ತು.

ಮುಲ್ಕಿ ಮೂಡುಬಿದಿರೆ ಮಂಡಲ ಭಾರತೀಯ ಜನತಾ ಪಾರ್ಟಿ ವತಿಯಿಂದ ಹಮ್ಮಿಕೊಳ್ಳಲಾದ ಈ ಕಾರ್ಯಕ್ರಮದಲ್ಲಿ ನೂರಾರು ಕಾರ್ಯಕರ್ತರು ,ಭಕ್ತರು ಪಾಲ್ಗೊಂಡರು.ಅರ್ಚಕರಾದ ವೆಂಕಟರಮಣ ಆಸ್ರಣ್ಣರು ಶ್ರೀ ದೇವಿ ಸನ್ನಿಧಿಯಲ್ಲಿ ಪ್ರಧಾನಿ ಮೋದಿಯವರಿಗೆ ಶ್ರೀದೇವಿಯು ದೀರ್ಘಾಯು ನೀಡುವುದರ ಜೊತೆಗೆ ಅವರ ಅವಧಿಯಲ್ಲಿ ಭಾರತವು ಅಭಿವೃದ್ಧಿ ಹೊಂದಿದ ವಿಕಸಿತ ಭಾರತವಾಗಲು ಅನುಗ್ರಹಿಸುವಂತೆ ಪ್ರಾರ್ಥಿಸಿದರು.

ಭಾರತೀಯ ಜನತಾ ಪಾರ್ಟಿಯ ಹಿರಿಯ ನಾಯಕರುಗಳಾದ ಸಹಕಾರೀ ಧುರೀಣ ಎಂ ದಯಾನಂದ ಪೈ ಪಡುಮಾರ್ನಾಡು,ಎಂ ಬಾಹುಬಲಿ ಪ್ರಸಾದ್,ಭುವನಾಭಿರಾಮ ಉಡುಪ,ಈಶ್ವರ ಕಟೀಲು,ಎಂ ಎಸ್ ಕೋಟ್ಯಾನ್, ಶಾಂತಿಪ್ರಸಾದ್ ಹೆಗ್ಡೆ,ಮೂಲ್ಕಿ ಮೂಡುಬಿದಿರೆ ಬಿಜೆಪಿ ಅಧ್ಯಕ್ಷ ದಿನೇಶ್ ಪುತ್ರನ್,ಸುನಿಲ್ ಆಳ್ವ,ಬೋಳ ವಿಶ್ವನಾಥ ಕಾಮತ್,ನಿರಂಜನ ರಾವ್,ಎಂ ರಾಘವೇಂದ್ರ ಭಂಡಾರ್ಕರ್, ಮಹಿಳಾ ಮೋರ್ಚಾ ಅಧ್ಯಕ್ಷೆ ಗೀತಾ ಲಕ್ಷ್ಮೀ ,ಬೇಬಿ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here