ಕಡಂದಲೆ : ಹಾಲು ಉತ್ಪಾದಕರ ಸಹಕಾರ ಸಂಘ ನಿ.ಇದರ 2025-26ನೇ ಸಾಲಿನ ವಾರ್ಷಿಕ ಸಾಮಾನ್ಯ ಸಭೆಯು ದಿನಾಂಕ 06-06-2026ರಂದು ಒಕ್ಕೂಟದ ನೀದರ್ಶಕರು, ಸಂಘದ ಅಧ್ಯಕ್ಷರಾದ ಕೆ.ಪಿ.ಸುಚರಿತ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ನಡೆಯಿತು. ಈ ಸಂಘವು ದಿನಾಂಕ 16-06-967 ರಂದು ಸಹಕಾರ ಸಂಘಗಳ ಸಹಾಯಕ ನಿಬಂಧಕರು ಮಂಗಳೂರು ಇವರಿಂದ ನೊಂದಣಿಗೊಂಡು ದಿನಾಂಕ 21-03-1967 ರಿಂದ ಕಾರ್ಯರಂಭ ಮಾಡಿ 59 ಸಹಕಾರಿ ವರ್ಷಗಳನ್ನು ಪೂರೈಸಿರುತ್ತದೆ. ಸಂಘದ ಕಾರ್ಯವ್ಯಾಪ್ತಿ ಕಡಂದಲೆ ಗ್ರಾಮಕ್ಕೆ ಸೀಮಿತವಾಗಿರುತ್ತದೆ.

ಸದ್ರಿ ಸಾಲಿನಲ್ಲಿ ನಿವ್ವಳರೂ.13,33,175.83 ಇತ್ತು. 25% ಪಾಲು ಮುನಾಫೆ ಘೋಷಿಸಲಾಯಿತು.ಪ್ರತಿ ಲೀಟರಿಗೆ 1.42ರಂತೆ ಉತ್ಪಾದಕರಿಗೆ ಬೋನಸ್ ರೂ.6,36,925, ವರದಿ ಸಾಲಿನಲ್ಲಿ ರೂ 61,944.ನ್ನು ಸಂಘ-ಸಂಸ್ಥೆಗಳಿಗೆ ಮತ್ತು ವ್ಯಕ್ತಿಗಳಿಗೆ ದೇಣಿಗೆ ನೀಡಲಾಗಿದೆ. 18 ಜನ ವಿದ್ಯಾಥಿಗಳಿಗೆ ರೂ26,000 ವಿದ್ಯಾರ್ಥಿವೇತನ ವಿತರಿಸಲಾಯಿತು.41ವರ್ಷ ಕಡಂದಲೆ ಗ್ರಾಮದಲ್ಲಿ ಅಂಚೆ ವಿತರಕರಾಗಿ ಸೇವೆ ಸಲ್ಲಿಸಿದ ಲಕ್ಷ್ಮಿನಾರಾಯಣ ಭಟ್ ಮತ್ತು ಸರಕಾರಿ ವೈದ್ಯರಾದ ಡಾ.ಅನಿಲ್ ಪಿಂಟೊ ಸನ್ಮಾನಿಸಲಾಯಿತು.

ವರದಿ ಸಾಲಿನಲ್ಲಿ ಒಕ್ಕೂಟದ ಯೋಜನೆಗಳಾದ ಹಸಿರು ಮೇವಿನ ತಾಕು 2ಜನ ಸದಸ್ಯರು, ಮಿನಿಡೈರಿ 2 ಜನ ಸದಸ್ಯರು,ರಬ್ಬರ್ ಮ್ಯಾಟ್ 5ಜನ ಸದಸ್ಯರು, ಕರುಸಾಕಾಣಿಕೆ 65 ಜನ ಸದಸ್ಯರು ಮಾಡಿರುತ್ತಾರೆ.35 ರಾಸುಗಳಿಗೆ ವಿಮೆ ಮಾಡಲಾಗಿದೆ.4ರಾಸುಗಳು ಮರಣ ಹೊಂದಿದೆ.ವಿಮಾ ಕಂಪೆನಿಯಿಂದ ರೂ 1,40,000.0ಂಪರಿಹಾರ ಬಂದಿದೆ.ಡೈರಿ ರೈತರ ಕಲ್ಯಾಣ ಟ್ರಸ್ಟ್ ನಿಂದ ರೂ 50,000ದಂತೆ 3ಜನ ಸದಸ್ಯರಿಗೆ ಮರಣ ಹೊಂದಿದ ಬಗ್ಗೆ ಪರಿಹಾರ ಬಂದಿರುತ್ತದೆ. ಒಕ್ಕೂಟದ ವ್ಯವಸ್ಥಾಪಕರಾದ ಡಾ.ರವಿರಾಜ ಉಡುಪ ಉಪವ್ಯವಸ್ಥಾಪಕರಾದ ಜಾನೆಟ್ ರೋಸಾರಿಯೋ ವಿಸ್ತಾರಣಾಧಿಕಾರಿಯಾದ ಸುಚಿತ್ರ ಮತ್ತು ಕು.ಸೌಂದರ್ಯ ಸಂಘದ ಸದಸ್ಯರು, ನಿರ್ದೇಶಕರು ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿಯಾದ ಶಿವರಾಮ ಶೇರಿಗಾರ್ ಹಾಗೂ ಸಿಬ್ಬಂದಿವರ್ಗದವರು ಉಪಸ್ಥಿತರಿದ್ದರು.

