ತುಳುನಾಡ ರಕ್ಷಣಾ ವೇದಿಕೆ ( ರಿ.) ಉಡುಪಿ ಜಿಲ್ಲಾ ಘಟಕ ವತಿಯಿಂದ ಅಮಾವಾಸ್ಯೆದ ಮರ್ದು ಪಟ್ಟುನ ಲೇಸ್ ಪಾಲೆ ಕತ್ತೆ ಕಷಾಯ ಪರ್ಕ ಇಂದು ಮುಂಜಾನೆ ಉಡುಪಿ ಕ್ಲಾಕ್ ಟವರ್ ಹತ್ತಿರ ಮುಂಜಾನೆ, 4:30ಕ್ಕೆ ವಿಲ್ಸನ್ ಫರ್ನಾಂಡಿಸ್. ಪೆರ್ನಾಂಡಿಸ್ ಗ್ರೂಪಿನ ಚೇರ್ಮೆನರು ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿ ತುಳುನಾಡ ರಕ್ಷಣಾ ವೇದಿಕೆ 17 ವರ್ಷದಿಂದ ನಡೆದು ಬಂದ ಸಂಪ್ರದಾಯವನ್ನು ಇಂದಿನ ಪೀಳಿಗೆಗೆ ಪರಿಚಯಿಸುವುದರಲ್ಲಿ ತುಳುನಾಡ ರಕ್ಷಣಾ ವೇದಿಕೆ ಪಾತ್ರ ಮಹತ್ವದ್ದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಾತನಾಡಿದ ತುಳುನಾಡ ರಕ್ಷಣಾ ವೇದಿಕೆ ಉಡುಪಿ ಜಿಲ್ಲಾಧ್ಯಕ್ಷರಾದ ಫ್ರ್ಯಾಂಕಿ ಡಿಸೋಜ ರವರು ಮಾತನಾಡಿ ತುಳುನಾಡ ರಕ್ಷಣಾ ವೇದಿಕೆ ವತಿಯಿಂದ ಪ್ರತಿವರ್ಷದಂತೆ ಈ ವರ್ಷವೂ ನಾವು ಆಟಿ ಅಮಾವಾಸ್ಯೆ ಯಂದು ಪಾಲೆ ಕೆತ್ತೆ ಕಷಾಯವನ್ನು ಉಡುಪಿ ಹೃದಯ ಭಾಗದ ಸಾರ್ವಜನಿಕರಿಗೆ ವಿತರಿಸುತ್ತಿದ್ದು ಸಾರ್ವಜನಿಕರಿಂದ ನಮಗೆ ಉತ್ತಮ ಸ್ಪಂದನೆ ದೊರೆಯುತ್ತಿದೆ ಎಂದು ಹೇಳಿ ತುಳುನಾಡಿನ ನೆಲ, ಜಲ, ಸಂಸ್ಕೃತಿ, ಆಚಾರ ವಿಚಾರದ ಬಗ್ಗೆ ತುಳುನಾಡ ರಕ್ಷಣಾ ವೇದಿಕೆಯ ಮಹತ್ವದ ಬಗ್ಗೆ ಹೇಳಿದರು ತದನಂತರ ತುಳುನಾಡ ರಕ್ಷಣಾ ವೇದಿಕೆ ಉಡುಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾದ ಸುರೇಂದ್ರ ಪೂಜಾರಿಯವರು ಮಾತನಾಡಿ ಆಟಿ ಅಮಾವಾಸ್ಯೆ ಹಾಗೂ ಪಾಲೆ ಕೆತ್ತೆ ಕಷಾಯ ಇದರ ಮಹತ್ವದ ಬಗ್ಗೆ ಹೇಳಿದರು .

ಈ ಸಂದರ್ಭದಲ್ಲಿ ತುಳುನಾಡ ರಕ್ಷಣಾ ವೇದಿಕೆಯ ಮಹಿಳ ಜಿಲ್ಲಾಧ್ಯಕ್ಷರಾದ ನಾಗಲಕ್ಷ್ಮಿ ಸುಬ್ರಮಣ್ಯ ನಗರ, ತುಳುನಾಡ ರಕ್ಷಣಾ ವೇದಿಕೆಯ ವೈದ್ಯರ ಘಟಕದ ಅಧ್ಯಕ್ಷರಾದ ಡಾಕ್ಟರ್ ಸಂದೀಪ್ ಸನಿಲ್, ತುಳುನಾಡ ರಕ್ಷಣಾ ವೇದಿಕೆಯ ಕಾಪು ತಾಲೂಕ್ ಅಧ್ಯಕ್ಷರಾದ ನಿತಿನ್ ಕುಮಾರ್ ಶೆಟ್ಟಿ, ಬ್ರಹ್ಮಾವರ ತಾಲೂಕ ಅಧ್ಯಕ್ಷರಾದ ಶರತ್ ರಾಜ್ ಆರುರೂ , ಬೈರಂಪಳ್ಳಿ ಘಟಕದ ಅಧ್ಯಕ್ಷರಾದ ಕೃಷ್ಣಾನಂದ ನಾಯಕ್, ತುಳುನಾಡ ರಕ್ಷಣಾ ವೇದಿಕೆಯ ಕಾಪು ತಾಲೂಕ ಘಟಕದ ಪ್ರಧಾನ ಕಾರ್ಯದರ್ಶಿಯಾದ ಕಾರ್ತಿಕ್ ಕುಲಾಲ್, ಉಡುಪಿ ಜಿಲ್ಲಾ ಕಟಕದ ಸಂಘಟನಾ ಸಹ ಕಾರ್ಯದರ್ಶಿಯಾದ ಕೃಷ್ಣ ಮಾರ್ಪಲ್ಲಿ, ಪ್ರೀತಮ್, ಡಿಕೋಸ್ಟ ಜಿಲ್ಲಾ ಜೊತೆ ಕಾರ್ಯದರ್ಶಿ, ಜಿಲ್ಲಾ ಉಪಾಧ್ಯಕ್ಷರಾದ ಮನೋಜ್ ಪೂಜಾರಿ, ಜಿಲ್ಲಾ ಸಂಘಟನಾ ಕಾರ್ಯದರ್ಶಿಯಾದ ಶಂಕರ್, ಹಾಗೂ ಮುಖಂಡರುಗಳಾದ ಗೋಪಾಲ್ ನಾಯ್ಕ್, ರವಿ, ಅಜಯ್ ಕುಲಾಲ್ ಹಾಗೂ ವಿವಿಧ ಘಟಕದ ಮುಖಂಡರು ಉಪಸ್ಥಿತರಿದ್ದರು. ಇಂದಿನ ಈ ಕಷಾಯ ವಿತರಣೆಯ ಕಾರ್ಯಕ್ರಮದಲ್ಲಿ ಮೂರು ಸಾವಿರಕ್ಕೂ ಹೆಚ್ಚಿನ ಜನರು ಪಾಲೆದ ಕೆತ್ತೆದ ಕಷಾಯವನ್ನು ಸೇವಿಸಿದರು.

