ಸಿದ್ಧಾಪುರ : ಮೂರು ದಿನಗಳ ಸ್ವದೇಶಿ ಮತ್ತು ಆಹಾರ ಮೇಳ

0
107

ಸಿದ್ಧಾಪುರ : ಯಕ್ಷನುಡಿಸಿರಿ ಬಳಗ (ರಿ.) ಸಿದ್ದಾಪುರ, ರೋಟರಿ ಕ್ಲಬ್ ಸಿದ್ಧಾಪುರ–ಹೊಸಂಗಡಿ, ಶ್ರೀ ಬ್ರಾಹ್ಮ ಎಲೆಕ್ಟ್ರಾನಿಕ್ಸ್‌ & ಫರ್ನಿಚರ್, ಬ್ರಾಹ್ಮ ಯುವಕ ಮಂಡಲ (ರಿ.), ಸಿದ್ಧಾಪುರ, ಸಿದ್ಧಾಪುರ ಬುಕ್ ಹೌಸ್ ಹಾಗೂ ಬೆನಕ ಇವೆಂಟ್ಸ್ ಕುಂದಾಪುರ ಇವರ ಆಶ್ರಯದಲ್ಲಿ ಸ್ವದೇಶಿ ಮತ್ತು ಆಹಾರ ಮೇಳ ಆಯೋಜಿಸಲಾಗಿದೆ.

ಆಗಸ್ಟ್ 14, 15 ಮತ್ತು 16ರಂದು ಸಿದ್ಧಾಪುರದ ಶಂಕರನಾರಾಯಣ ರಸ್ತೆಯ ರಂಗನಾಥ ಸಭಾ ಭವನದಲ್ಲಿ ಮೇಳ ನಡೆಯಲಿದೆ. ಬೆಳಿಗ್ಗೆ 10ರಿಂದ ರಾತ್ರಿ 9.30ರವರೆಗೆ ಮೇಳ ಸಾರ್ವಜನಿಕರಿಗೆ ತೆರೆದಿರಲಿದ್ದು, ಉಚಿತ ಪ್ರವೇಶ ಇರಲಿದೆ.

ಮೇಳದಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಸ್ವದೇಶಿ ಉತ್ಪನ್ನಗಳು ಹಾಗೂ ವಿಶೇಷ ಮಾರಾಟಗಾರರು ಆಗಮಿಸಲಿದ್ದು, ನೂರಾರು ಮಳಿಗೆಗಳು ಪ್ರಮುಖ ಆಕರ್ಷಣೆಯಾಗಲಿವೆ. ವಿವಿಧ ಬಗೆಯ ತಿನಿಸುಗಳು, ಹಣ್ಣಿನ ಐಸ್‌ಕ್ರೀಂ, ಹಲಸಿನ ಹಣ್ಣಿನ ಹೋಳಿಗೆ, ವಿವಿಧ ಹಣ್ಣುಗಳು, ತರಕಾರಿ ಬೀಜಗಳು, ಹಣ್ಣಿನ ಉತ್ಪನ್ನಗಳು, ಆಯುರ್ವೇದಿಕ್ ಹಾಗೂ ಗೃಹ ತಯಾರಿಕಾ ಉತ್ಪನ್ನಗಳು, ಗೃಹೋಪಯೋಗಿ ಸಾಮಗ್ರಿಗಳು, ವಿವಿಧ ತಳಿಯ ಹೂವಿನ ಮತ್ತು ಹಣ್ಣಿನ ಕಸಿ ಗಿಡಗಳು ಸೇರಿದಂತೆ ಹಲವು ಉತ್ಪನ್ನಗಳು ಲಭ್ಯವಿರಲಿವೆ.

ವಿಶೇಷವಾಗಿ ಹಲಸಿನ ಹಣ್ಣಿನ ಜಾಮ್, ದ್ರಾಕ್ಷಿ ಜಾಮ್, ಮಾವಿನ ಹಣ್ಣಿನ ಜಾಮ್ ಹಾಗೂ ಹಲಸಿನ ಬೀಜದ ಬಿಸ್ಕೆಟ್‌ಗಳು ಮೇಳದ ಪ್ರಮುಖ ಆಕರ್ಷಣೆಯಾಗಿವೆ. ಮನೆಯಲ್ಲೇ ತಯಾರಿಸಿದ ಉಡುಪಿ ಉಪ್ಪಿನಕಾಯಿ, ಹಪ್ಪಳ ಸೇರಿದಂತೆ ಹಲವು ಆಹಾರ ಉತ್ಪನ್ನಗಳೂ ದೊರೆಯಲಿವೆ.

ಮೇಳದ ಅಂಗವಾಗಿ ಸೆಲ್ಫಿ ಸ್ಟ್ಯಾಂಡ್‌ನಲ್ಲಿ ಫೋಟೋ ತೆಗೆದು ವಾಟ್ಸಾಪ್ ಸ್ಟೇಟಸ್ ಹಾಕುವವರಿಗೆ ವಿಶೇಷ ಸ್ಪರ್ಧೆ ಆಯೋಜಿಸಲಾಗಿದೆ. ಅತಿ ಹೆಚ್ಚು ವೀಕ್ಷಣೆ ಪಡೆದ ಮೂರು ವಾಟ್ಸಾಪ್ ಸ್ಟೇಟಸ್‌ಗಳಿಗೆ ಗುಣಮಟ್ಟದ ಇಳಕಲ್ ಸೀರೆ ಬಹುಮಾನವಾಗಿ ನೀಡಲಾಗುವುದು. ಸ್ಟೇಟಸ್‌ನ ಸ್ಕ್ರೀನ್‌ಶಾಟ್‌ ಅನ್ನು 8105279767 ಸಂಖ್ಯೆಗೆ ವಾಟ್ಸಾಪ್ ಮೂಲಕ ಕಳುಹಿಸಬೇಕು. ಸ್ಟೇಟಸ್ ಹಾಕಿದ ಪ್ರತಿಯೊಬ್ಬರಿಗೂ ಸದ್ಗುರು ಆಯುರ್ವೇದ ವತಿಯಿಂದ ಆಕರ್ಷಕ ಬಹುಮಾನ ನೀಡಲಾಗುವುದು.

ಸಣ್ಣ ಉದ್ಯಮಿಗಳು ಹಾಗೂ ಗೃಹ ಉತ್ಪನ್ನ ತಯಾರಕರಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಆಯೋಜಿಸಿರುವ ಈ ಮೇಳಕ್ಕೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡಿ ಸ್ಥಳೀಯ ಉದ್ಯಮಿಗಳಿಗೆ ಸಹಕಾರ ನೀಡುವಂತೆ ಆಯೋಜಕರು ಮನವಿ ಮಾಡಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ ಭಾಸ್ಕರ ಪೂಜಾರಿ – 8105279767, ಸಂದೇಶ್ ಪುತ್ರನ್ – 9880391657 ಅವರನ್ನು ಸಂಪರ್ಕಿಸಬಹುದು.

LEAVE A REPLY

Please enter your comment!
Please enter your name here