ವಿದ್ಯಾರ್ಥಿಗಳು ಸಮಯ ಪಾಲನೆ, ಉತ್ತಮ ಸಂಸ್ಕಾರ ಮತ್ತು ಹೆತ್ತವರಿಗೆ ಶಿಕ್ಷಕರಿಗೆ ಗೌರವ ನೀಡಿ ಸಮಾಜದ ಬಗ್ಗೆ ಕಾಳಜಿಯನ್ನು ಬೆಳೆಸಿಕೊಳ್ಳಬೇಕು ಎಂದು ಫಾರ್ಮರ್ ಹೆಡ್ ಡಿಪಾರ್ಟ್‌ಮೆಂಟ್ ಆಫ್ ಕೆಮಿಸ್ಟ್ರಿ ಎನ್.ಐ.ಟಿ.ಕೆ ಸುರತ್ಕಲ್ ಇದರ ಪ್ರೊಫೆಸರ್ ಅರುಣ್ ಎಮ್.ಇಸ್ಲೂರು ಅವರು ಹೇಳಿದರು
ಅವರು ಮುಕ್ಕದ ಮಿತ್ರಪಟ್ಣ ಮೊಗವೀರ ಸಂಘ ಇದರ ವತಿಯಿಂದ ಭಾನುವಾರ ನಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ವಿದ್ಯಾರ್ಥಿವೇತನ ವಿತರಣಾ ಕಾಯ೯ಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ವಿದ್ಯಾರ್ಥಿಗಳು ಆತ್ಮವಿಶ್ವಾಸವನ್ನು ರೂಢಿಸಿಕೊಂಡು ತಮ್ಮಲ್ಲಿನ ಪ್ರತಿಭೆಯನ್ನು ಗುರಿಸಾಧನೆಯ ಹಾದಿಯನ್ನು ಕಂಡುಕೊಳ್ಳಲು ಮುನ್ನಡೆಯಬೇಕು ಎಂದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಗೋವಿಂದದಾಸ್ ಕಾಲೇಜ್ ಸುರತ್ಕಲ್ ಇಲ್ಲಿನ ನಿವೃತ್ತ ಕನ್ನಡ ಮತ್ತು ಸಂಸ್ಕೃತ ಉಪನ್ಯಾಸಕಿ ಶ್ರೀಮತಿ ವಿಲಾಸಿನಿ ಎನ್.ಭಟ್ ಮಾತನಾಡಿ ಹೆತ್ತವರು ಮಕ್ಕಳಿಗೆ ಒಳ್ಳೆಯ ಸಂಸ್ಕಾರ ನೀಡಿ ದೇಶಕ್ಕೆ ಒಳ್ಳೆಯ ಪ್ರಜೆಗಳನ್ನಾಗಿ ರೂಪಗೊಳ್ಳುವಲ್ಲಿ ಹೆತ್ತವರ ಪಾತ್ರ ಮುಖ್ಯವಾಗಿದೆ ಎಂದು ಹೇಳಿದರು.
2025-2026ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ರಾಜ್ಯ ಮಟ್ಟದಲ್ಲಿ ತೃತೀಯ ಸ್ಥಾನ ಪಡೆದ ವೈಭವಿ ಎಸ್. ಕರ್ಕೇರ ಹಾಗೂ 11ನೇ ಸ್ಥಾನ ಪಡೆದ ವೈಷ್ಣವಿ ಎಸ್. ಕರ್ಕೇರ, ನೀತಿ ಎನ್.ಕರ್ಕೇರ, ಧೃತಿ ಎಸ್.ಕಾಂಚನ್,ಸೃಜನ್ ಎಲ್.ಪುತ್ರನ್, ಸುಮಂತ್ ಕುಂದರ್
ಎಸ್.ಎಸ್.ಎಲ್.ಸಿ ಯಲ್ಲಿ ರಿತ್ವೀಕ್ ಎಸ್.ಕರ್ಕೇರ, ಧೃತಿ ಪಿ.ಶ್ರೀಯಾನ್, ಯಶ್ ಮನೋಹರ್ ಇವರಿಗೆ ಪ್ರತಿಭಾ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಬ್ಯಾಚುಲರ್ ಆಫ್ ವಿಷುಯಲ್ ಆಟ್ಸ್ (ಬಿ.ವಿ.ಎ) ದೃಶ್ಯ ಕಲೆಯಲ್ಲಿ ಪದವಿ ಪಡೆದ ತುಷಾರ್ ಸುವರ್ಣ ಮತ್ತು ವೈದ್ಯಕೀಯ ಕ್ಷೇತ್ರದಲ್ಲಿ(ಬಿ.ಎ.ಎಮ್.ಎಸ್)
ಪದವಿ ಪಡೆದ ಡಾ.ಪ್ರಥಮ್ ಪಿ. ಸುವರ್ಣ ಅವರನ್ನು ಸನ್ಮಾನಿಸಲಾಯಿತು.
ಸುಮಾರು 65 ವಿದ್ಯಾಥಿಗಳಿಗ ವಿದ್ಯಾರ್ಥಿವೇತನ ವಿತರಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಿತ್ರಪಟ್ಣ ಮೊಗವೀರ ಸಂಘದ ಅಧ್ಯಕ್ಷ ಸುರೇಶ್ ಕರ್ಕೇರ ವಹಿಸಿದ್ದರು.
ಈ ಸಂದರ್ಭದಲ್ಲಿ ಮಂಗಳೂರು ಮಹಾನಗರ ಪಾಲಿಕೆ ನಿಕಟಪೂರ್ವ ಸದಸ್ಯೆ ಶ್ರೀಮತಿ ಶೋಭಾ ರಾಜೇಶ್, ಮೊಗವೀರ ಸಂಘದ ಉಪಾಧ್ಯಕ್ಷ ಪುರಂದರ ಬಂಗೇರ, ಶ್ರೀರಾಮ ಭಜನಾ ಮಂದಿರ ಅಧ್ಯಕ್ಷ ಪ್ರದೀಪ್ ಕುಂದರ್, ದ.ಕ ಜಿಲ್ಲಾ ಮಹಿಳಾ ಮಹಾಜನ ಸಂಘ ಇದರ ಅಧ್ಯಕ್ಷೆ ಕವಿತಾ ಶರತ್, ಮಿತ್ರಪಟ್ಣ ಮೀನುಗಾರರ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ವಸಂತ ಸುವರ್ಣ,ಗಂಗಾಧರ ಗುರಿಕಾರ,ಯಶವಂತ ಪೂಜಾರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಂಘದ ಕೋಶಾಧಿಕಾರಿ ಯಶ್ ರಾಜ್ ಕರ್ಕೇರ ಜೊತೆ ಕೋಶಾಧಿಕಾರಿ ರಾಜ್ ಕುಮಾರ್ ಕರ್ಕೇರ ಸದಸ್ಯರಾದ
ಪುರುಷೋತ್ತಮ ಸುವರ್ಣ,ವಿಜಯ ಕುಮಾರ್, ರಾಜೇಶ್ ಸುವರ್ಣ,ಶೈಲೇಶ್ ಸುವರ್ಣ,ಪುಷ್ಪರಾಜ್ ಕರ್ಕೇರ,ಲಕ್ಷ್ಮಣ್ ಪುತ್ರನ್,ಪ್ರಶಾಂತ್ ಪುತ್ರನ್,ಕಿಶೋರ್ ಕುಮಾರ್, ಮೊದಲಾದವರು ಭಾವಹಿಸಿದ್ದರು.
ಸಂಘದ ಪ್ರಧಾನ ಕಾರ್ಯದರ್ಶಿ ರಾಜೇಶ್ ಆರ್ ಸ್ವಾಗತಿಸಿ, ಪ್ರಸ್ತಾಪಿಸಿದರು, ಕು. ನಿವೇದಿತಾ ಕಾರ್ಯಕ್ರಮ ನಿರೂಪಿಸಿದರು. ಕಿಶೋರ್ ಪುತ್ರನ್ ವಂದಿಸಿದರು.

