ಬಿಳಿನೆಲೆ: ಶ್ರೀ ಸುಬ್ರಹ್ಮಣ್ಯ ಮಠ ಎಜುಕೇಶನ್ ಸೊಸೈಟಿ (ರಿ.), ಸುಬ್ರಹ್ಮಣ್ಯ ಇದರ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವ ಶ್ರೀ ಗೋಪಾಲಕೃಷ್ಣ ಪ್ರೌಢಶಾಲೆ, ಬಿಳಿನೆಲೆ, ಶ್ರೀ ವೇದವ್ಯಾಸ ವಿದ್ಯಾಲಯ, ಬಿಳಿನೆಲೆ ಹಾಗೂ ತುಳುವರ್ಲ್ಡ್ ಫೌಂಡೇಶನ್, ಕಟೀಲು ಇವರ ಒಟ್ಟು ಸೇಲಿಗೆಯಲ್ಲಿ 2026 ಜೂನ್ 20ರಂದು ಶನಿವಾರ ಮಧ್ಯಾಹ್ನ 1:30 ಗಂಟೆಗೆ ಶ್ರೀ ಗೋಪಾಲಕೃಷ್ಣ ಪ್ರೌಢಶಾಲೆ, ಬಿಳಿನೆಲೆಯಲ್ಲಿ “ತುಳು ಯಕ್ಷ ಪ್ರಸಂಗೊದ ಸಾಹಿತ್ಯೊ” ವಿಷಯದ ಕುರಿತು ಉಪನ್ಯಾಸ ಮತ್ತು ಪ್ರದರ್ಶನ ಕಾರ್ಯಕ್ರಮ ನಡೆಯಲಿದೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಸಂಚಾಲಕರಾದ ಶ್ರೀ ಸುದರ್ಶನ ಜೋಯಿಸ್ ವಹಿಸಲಿದ್ದು, ಶ್ರೀ ಸುಬ್ರಹ್ಮಣ್ಯ ಮಠ ಎಜುಕೇಶನ್ ಸೊಸೈಟಿಯ ಕಾರ್ಯದರ್ಶಿ ಶ್ರೀ ಕೃಷ್ಣಶರ್ಮ ಪಿ. ಅವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ.
ಉಪ ತಹಶೀಲ್ದಾರರಾದ ಶ್ರೀ ಗೋಪಾಲ ಕೆ. ಹಾಗೂ ತುಳುವರ್ಲ್ಡ್ ಫೌಂಡೇಶನ್ ನಿರ್ದೇಶಕರಾದ ಡಾ. ರಾಜೇಶ್ ಕೃಷ್ಣ ಆಳ್ವ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಖ್ಯಾತ ಸಾಹಿತಿ ಹಾಗೂ ಯಕ್ಷಗಾನ ಅರ್ಥಧಾರಿಗಳಾದ ಶ್ರೀ ವೆಂಕಟ್ರಮಣ ಭಟ್, ಸುಳ್ಯ ಅವರು “ತುಳು ಯಕ್ಷ ಪ್ರಸಂಗೊದ ಸಾಹಿತ್ಯೊ” ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಲಿದ್ದಾರೆ.
ಶ್ರೀ ಗೋಪಾಲಕೃಷ್ಣ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀ ಸತ್ಯಶಂಕರ ಭಟ್ ಹಾಗೂ ಶ್ರೀ ವೇದವ್ಯಾಸ ವಿದ್ಯಾಲಯದ ಶ್ರೀ ಪ್ರಶಾಂತ್ ಬಿ. ಅವರು ಶುಭ ಹಾರೈಸಲಿದ್ದಾರೆ.
ಇದೇ ಸಂದರ್ಭದಲ್ಲಿ “ಬರವುದ ಬಿಲೆ” (ಕವಿರತ್ನ ಕಾಳಿದಾಸ) ಯಕ್ಷಗಾನ ಪ್ರದರ್ಶನ ನಡೆಯಲಿದ್ದು, ಪ್ರಶಾಂತ್ ರೈ (ಪುತ್ತೂರು), ಪ್ರಶಾಂತ್ ಸಿ.ಕೆ., ಪ್ರಜ್ವಲ್ ಕುಮಾರ್ (ಗುರುವಾಯನಕೆರೆ), ಸುಂದರ ಬಂಗಾಡಿ, ರಾಜೇಶ್ ನಿಟ್ಟೆ, ಭುವನ್ (ಮಂಗಳೂರು), ವಿಶ್ವನಾಥ ಪದ್ಮುಂಜ ಹಾಗೂ ಇತರ ಕಲಾವಿದರು ಭಾಗವಹಿಸಲಿದ್ದಾರೆ.
ವಿದ್ಯಾರ್ಥಿಗಳು, ಯಕ್ಷಗಾನಾಸಕ್ತರು, ಸಾಹಿತ್ಯಾಭಿಮಾನಿಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸುವಂತೆ ಆಯೋಜಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

