ಉಪ್ಪೂರಿನಲ್ಲಿ ಬೀದಿ ನಾಯಿ ಶೆಲ್ಟರ್‌ಗೆ ಭಾರೀ ವಿರೋಧ; ಗ್ರಾಮಸ್ಥರಿಂದ ಹೋರಾಟದ ಎಚ್ಚರಿಕೆ

0
47

ಉಪ್ಪೂರು: ಗ್ರಾಮದ ಸರ್ಕಾರಿ ಜಾಗದಲ್ಲಿ ಬೀದಿ ನಾಯಿಗಳಿಗಾಗಿ ಶೆಲ್ಟರ್ ನಿರ್ಮಿಸಲು ಉದ್ದೇಶಿಸಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರ ಸಭೆಯು ಶುಕ್ರವಾರ ಕೊಳಲಗಿರಿ ಸೇಕ್ರೆಡ್ ಹಾರ್ಟ್ ಚರ್ಚ್ ಸಭಾಭವನದಲ್ಲಿ ನಡೆಯಿತು. ಸಭೆಯಲ್ಲಿ ಗ್ರಾಮಸ್ಥರು ಹಾಗೂ ವಿವಿಧ ಸಂಘಟನೆಗಳ ಮುಖಂಡರು ಯೋಜನೆಗೆ ತೀವ್ರ ವಿರೋಧ ವ್ಯಕ್ತಪಡಿಸಿದರು.

ಸಾರ್ವಜನಿಕರ ಪರವಾಗಿ ಮಾತನಾಡಿದ ಉಪ್ಪೂರು ಗ್ರಾಮ ಪಂಚಾಯಿತಿಯ ಮಾಜಿ ಸದಸ್ಯ ರಮೇಶ್ ಕರ್ಕೇರ, ಉಪ್ಪೂರಿನ ಸರ್ಕಾರಿ ಜಾಗದಲ್ಲಿ ಬೀದಿ ನಾಯಿ ಶೆಲ್ಟರ್ ನಿರ್ಮಿಸುವ ಬದಲು ಜನೋಪಯೋಗಿ ಯೋಜನೆಗಳನ್ನು ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು. ಗ್ರಾಮಸ್ಥರ ಅಭಿಪ್ರಾಯವನ್ನು ಪರಿಗಣಿಸದೆ ಏಕಪಕ್ಷೀಯವಾಗಿ ಶೆಲ್ಟರ್ ನಿರ್ಮಾಣಕ್ಕೆ ಮುಂದಾದರೆ ಸಾರ್ವಜನಿಕರ ಪ್ರಬಲ ವಿರೋಧ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಮಾಜಿ ಸದಸ್ಯ ಅಶ್ವಿನ್ ರೋಚ್ ಮಾತನಾಡಿ, ಶೆಲ್ಟರ್ ನಿರ್ಮಾಣಕ್ಕೆ ಗ್ರಾಮಸ್ಥರ ತೀವ್ರ ವಿರೋಧವಿದೆ. ಶೆಲ್ಟರ್‌ಗೆ ಗುರುತಿಸಿರುವ ಜಾಗದ ಪಕ್ಕದಲ್ಲೇ ಜನವಸತಿ ಪ್ರದೇಶವಿದ್ದು, ಭವಿಷ್ಯದಲ್ಲಿ ರೋಗರುಜಿನ ಹಾಗೂ ಆರೋಗ್ಯ ಸಮಸ್ಯೆಗಳು ಉಂಟಾಗುವ ಸಾಧ್ಯತೆಯಿದೆ ಎಂದು ಹೇಳಿದರು. ಈ ಸ್ಥಳದಲ್ಲಿ ಕಾಮಗಾರಿ ಆರಂಭಿಸಿದರೆ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷೆ ನಳಿನಿ ಪ್ರದೀಪ್ ರಾವ್ ಮಾತನಾಡಿ, ಶೆಲ್ಟರ್ ನಿರ್ಮಾಣಕ್ಕೆ ಆಯ್ಕೆ ಮಾಡಿರುವ ಜಾಗ ಎತ್ತರ ಪ್ರದೇಶದಲ್ಲಿದ್ದು, ಅಲ್ಲಿಂದ ಹರಿಯುವ ತ್ಯಾಜ್ಯ ನೀರು ಕೆಳಭಾಗದ ಬೆಳ್ಳಾರು ತೋಡಿಗೆ ಸೇರುವ ಸಾಧ್ಯತೆಯಿದೆ. ಇದರಿಂದ ಸುತ್ತಮುತ್ತಲಿನ ಮನೆಗಳ ಬಾವಿ ನೀರು ಕಲುಷಿತಗೊಳ್ಳುವ ಅಪಾಯವಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಸಭೆಗೆ ಉಪ್ಪೂರು ಗ್ರಾಮ ಪಂಚಾಯಿತಿ ಆಡಳಿತಾಧಿಕಾರಿ ಸುಧೀರ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ರಾಮದಾಸ್, ನಗರಸಭೆಯಲ್ಲಿ ಅಧಿಕಾರಿ ರವಿಪ್ರಕಾಶ್, ಮಾಂತೇಶ್‌ ಆಯುಕ್ತರು ನಗರಸಭೆ ಉಡುಪಿ, ಕಂದಾಯ ನಿರೀಕ್ಷಕ ರಾಜು, ರಮಾನಂದ ಪುರಾಣಿಕ, ಗ್ರಾಮ ಕರಣಿಕ ಪ್ರಮೋದ್ ಹಾಗೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಆದರ್ಶ ಶೆಟ್ಟಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ತುಳುನಾಡ ರಕ್ಷಣಾ ವೇದಿಕೆಯ ಉಡುಪಿ ಜಿಲ್ಲಾಧ್ಯಕ್ಷರಾದ ಫ್ರ್ಯಾಂಕಿ ಡಿಸೋಜ ಕೊಳಲಗಿರಿ ಅವರು, ಸರ್ವೆ ನಂಬರ್ 293/1 ರಲ್ಲಿ 3 ಎಕ್ರೆ 20 ಸೆಂಟ್ಸ್ ಜಾಗವನ್ನು ನಿವೇಶನಕ್ಕೆ ಕಾಯ್ದಿರಿಸಲಾಗಿದೆ ಅದರ ಹಂಚಿಕೆ ಆಗಬೇಕು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಹಕ್ಕು ಪತ್ರಗಳನ್ನು ನೀಡಲು ಬಾಕಿ ಇದ್ದು, ಅದನ್ನು ಬಿಟ್ಟು ಏಕಾಏಕಿ ಸಾರ್ವಜನಿಕರಿಗೆ ವಿರುದ್ಧವಾದ ಬೀದಿನಾಯಿ ಶೆಲ್ಟರ್ ನಿರ್ಮಾಣ ಮಾಡು ತ್ತಿರುವುದು ಖೇದಕರ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಸಭೆಯಲ್ಲಿ ಭಾಗವಹಿಸಿದ್ದ ಉಡುಪಿ ನಗರಸಭೆ ಪೌರಾಯುಕ್ತ ಮಹಂತೇಶ್ ಅವರು ನಾಯಿ ಶೆಲ್ಟರ್ ನಿರ್ಮಾಣದ ಉದ್ದೇಶ ಮತ್ತು ಅಗತ್ಯತೆ ಕುರಿತು ಸಾರ್ವಜನಿಕರಿಗೆ ಮನವರಿಕೆ ಮಾಡಲು ಪ್ರಯತ್ನಿಸಿದರು. ಆದರೆ ಗ್ರಾಮಸ್ಥರು ಅಧಿಕಾರಿಗಳ ವಿವರಣೆಯನ್ನು ಒಪ್ಪಲಿಲ್ಲ. ಬಳಿಕ ಮಾತನಾಡಿದ ಅವರು, ಸಾರ್ವಜನಿಕರ ಅಭಿಪ್ರಾಯವನ್ನು ವರದಿ ರೂಪದಲ್ಲಿ ಮೇಲಧಿಕಾರಿಗಳಿಗೆ ಸಲ್ಲಿಸಲಾಗುವುದು ಎಂದು ತಿಳಿಸಿದರು.

ಗುರುರಾಜ್ ರಾವ್ ಮಾಜಿ ಅಧ್ಯಕ್ಷರು ಅರೋರ್ ಗ್ರಾಮ್ ಪಂಚಾಯತ್ , ಸಮಾಜ ಸೇವಕ ಸತೀಶ್ ಪೂಜಾರಿ ಕೀಳಂಜೆ, ಮಾಜಿ ತಾಲೂಕು ಪಂಚಾಯತ್ ಸದಸ್ಯರಾದ ಸಂಜೀವ ಮಾಯಾಡಿ, ಮಾಜಿ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಸತೀಶ್ ಪೂಜಾರಿ, ಮಾಜಿ ಗ್ರಾಮ ಪಂಚಾಯತ್ ಸದಸ್ಯರಾದ ರಾಜಶ್ರೀ ಮಸ್ಕರೇನಸ್, ಮಹೇಶ್ ಕೋಟ್ಯಾನ್, ಪೀಟರ್ ಸಾಲ್ಮರ, ಪ್ರಶಾಂತ್ ಮಾಯಾಡಿ, ಅವಿನಾಶ್ ಶೆಟ್ಟಿ, ಉಪ್ಪೂರ್ ಪಂಚಾಯತ್ ಮಾಜಿ ಅಧ್ಯಕ್ಷರಾದ ಸುನಿಲ್ ಶೆಟ್ಟಿ, ಮಹೇಶ್‌ ಕೋಟ್ಯಾನ್‌ ಮಾಜಿ ಉಪಾಧ್ಯಕ್ಡರು ಉಪ್ಪೂರು ಗ್ರಾ.ಪಂ. , ಉಮೇಶ್ ಶೆಟ್ಟಿ ಬಣಬೆಟ್ಟು ಉಪಾಧ್ಯಕ್ಷರು ತುಳುನಾಡು ರಕ್ಷಣ ವೇದಿಕೆ , ರೊಟೇರಿಯನ್ ವಿಜಯ್ ಮಾಯಾಡಿ, ಉದ್ಯಮಿಗಳಾದ ದೋಗು ಪೂಜಾರಿ, ಭಾಸ್ಕರ್ ಶೆಟ್ಟಿ ಅಮ್ಮುಂಜೆ, ಜಯಕರ್, ಡಿಕ್ಸನ್ ಮಸ್ಕೆರೇನಸ್, ಪೀಟರ್ ಕೊಳಲಗಿರಿ, ರತ್ನಾಕರ್ ಮೊಗವೀರ ಪ್ರಧಾನ್ ಕಾರ್ಯದರ್ಶಿ ಹಣ್ಣು ತರಕಾರಿ ದಿನಸಿ ವರ್ತಕರ ಸಂಘ ಆದಿಉಡುಪಿ, ಅಜಯ್, ಯೋಗೀಶ್, ರವೀಂದ್ರ, ಪುಷ್ಪಲತಾ ಕೇಶವ್, ಫಾತಿಮಾ., ನ್ಯಾನ್ಸಿ, ಜೆಸಿಂತ, ಹಾಗೂ ಸ್ಥಳೀಯ ಮಹಿಳಾ ಸಂಘಟನೆಗಳು, ಹಾಗೂ ಸಂಘಸಂಸ್ಥೆಗಳ ನಾಯಿ ಶೆಲ್ಟರ್ ಆದರೆ ಆಗುವ ತೊಂದರೆಯ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡರು.

ಸಭೆಗೆ ಉಪ್ಪೂರು ಗ್ರಾಮ ಪಂಚಾಯಿತಿ ಆಡಳಿತಾಧಿಕಾರಿ ಸುಧೀರ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ರಾಮದಾಸ್, ನಗರಸಭೆಯಲ್ಲಿ ಅಧಿಕಾರಿ ರವಿಪ್ರಕಾಶ್, ಮಾಂತೇಶ್‌ ಆಯುಕ್ತರು ನಗರಸಭೆ ಉಡುಪಿ, ಕಂದಾಯ ನಿರೀಕ್ಷಕ ರಾಜು, ರಮಾನಂದ ಪುರಾಣಿಕ, ಗ್ರಾಮ ಕರಣಿಕ ಪ್ರಮೋದ್ ಹಾಗೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಆದರ್ಶ ಶೆಟ್ಟಿ ,ಫ್ರಾನ್ಸಿಸ್‌,ಶ್ರೀನಿವಾಸ ಕೆ.ಜಿ.ರೋಡ್‌,ಜಯಕರ್‌ ಆಚಾರ್‌,ಸುಂದರ್‌ ಪೂಜಾರಿ,ಪ್ರಭಕರ್‌,ಅಲ್ವಿನ್‌ ಜಾನ್‌ ಸೇರಿದಂತೆ ಹಲವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here