ಸಜೀಪ ಮಾಗಣೆಯಲ್ಲಿ ನೂತನ ತರವಾಡು ಮನೆ ನಿರ್ಮಾಣಕ್ಕೆ ಶಿಲಾನ್ಯಾಸ

0
39

ಬಂಟ್ವಾಳ : ಸಜೀಪ ಮಾಗಣೆ ಶ್ರೀ ನಡಿಯೇಳು ದೈವಂಗಳು ಶ್ರೀ ಉಳ್ಳಾ ಲ್ದಿ, ಶ್ರೀ ನಾಲ್ಕೈತಾಯ ದೈವಗಳ ನೂತನ ಆರೂಡ ಮಾಡದಾರು ಗುತ್ತು ನೂತನ ತರವಾಡುಮನೆ ವಾಸ್ತು ಪ್ರಕಾರ ಪುನರ್ ನಿರ್ಮಾಣ ಮಾಡಲು ಶಿಲಾನ್ಯಾಸ ಹಾಗೂ ಭೂಮಿ ಪೂಜೆ ಧಾರ್ಮಿಕ ವಿಧಿ ವಿಧಾನಗಳನ್ನು ಸಜೀಪ ಮಾಗಣೆ ತಂತ್ರಿ ಎಂ ಸುಬ್ರಹ್ಮಣ್ಯ ಭಟ್ ನೆರವೇರಿಸಿದರು.

ಬಿಜಂದಾರು ಗುತ್ತು ಶಿವರಾಮ ಭಂಡಾರಿ, ಮಾಡದಾರು ಗುತ್ತು ಗಡಿ ಪ್ರಧಾನರಾದ ಶಶಿಧರ ರೈ ಯಾನೆ ನಾರಣ ಆಳ್ವ, ಸಜೀಪ ಗುತ್ತು ಗಡಿ ಪ್ರಧಾನರಾದ ಮುತ್ತಣ್ಣ ಶೆಟ್ಟಿ ಯಾನೆ ಕಾಳ ಶೆಟ್ಟಿ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಕೆ ರಾಧಾಕೃಷ್ಣ ಆಳ್ವ, ಯಶೋಧರರೈ ,ಸತೀಶ ಶೆಟ್ಟಿ, ಯಶವಂತ ಪೂಜಾರಿ ದೇರಾಜೆಗುತ್ತು, ಶಂಕರ ಪೂಜಾರಿ ಯಾನೆ ಕೋಚು ಪೂಜಾರಿ, ಕು 0ಜ್ಞಪೂಜಾರಿ ಯಾನೆ ದಯಾನಂದ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here