ಎಂಟು ಜ್ಞಾನಪೀಠ ಪ್ರಶಸ್ತಿ ಪಡೆದ ನಮ್ಮ ಹೆಮ್ಮೆಯ ಭಾಷೆ ಕನ್ನಡ : ಬಿ.ವಾಮದೇವಪ್ಪ ಕರೆ

0
5

ದಾವಣಗೆರೆ : ನಮ್ಮ ಕನ್ನಡ ನಾಡಿಗೆ 2ಸಾವಿರ ವರ್ಷಗಳ ಇತಿಹಾಸ, ಭವ್ಯ ಪರಂಪರೆ ಇದೆ. ಲಿಪಿ, ಸಾಹಿತ್ಯ, ಅಕ್ಷರ ತನ್ನದೇ ಆದಂತಹ ಕಲೆ ಇದೆ. ಕನ್ನಡ ಭಾಷೆ ಶಾಸ್ತಿçÃಯ ಭಾಷೆಎಂದು ಕೇಂದ್ರ ಸರ್ಕಾರ ಗುರುತಿಸಿದೆ. ಪ್ರಾದೇಶಿಕ ಭಾಷೆಗೆ ಭಾಷೆಗೆ ಎಂಟು ಜ್ಞಾನಪೀಠ ಪ್ರಶಸ್ತಿಗಳು ಬಂದಿವೆ ಎಂದರೆ ಅದು ನಮ್ಮ ಕನ್ನಡ ಭಾಷೆಗೆ. ವಿಶ್ವದ ಲಿಪಿಗಳಲ್ಲಿ ಅತ್ಯಂತ ಸುಂದರವಾಗಿ ರಾಣಿಯಂತೆ ಕಾಣುವ ಭಾಷೆ ಕನ್ನಡ ಭಾಷೆ ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಬಿ.ವಾಮದೇವಪ್ಪ ಹೇಳಿದರು.

ನಗರದ ಶಾಮನೂರು ಶಿವಶಂಕರಪ್ಪ ಪಾರ್ವತಮ್ಮ ಸಮುದಾಯ ಭವನದಲ್ಲಿ ಶನಿವಾರ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆ ವತಿಯಿಂದ ಆಯೋಜಿಸಿದ ಎಸ್ಸೆಸ್ಸೆಲ್ಸಿಯಲ್ಲಿ ಅತೀ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಕನ್ನಡ ಕೌಸ್ತುಭ, ಸರಸ್ವತಿ ಪುರಸ್ಕಾರ, ಕನ್ನಡ ಕುವರ, ಕನ್ನಡ ಕುವರಿ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಈ ಕಲಾಕುಂಚ ಸಂಸ್ಥೆ 35 ವರ್ಷಗಳಿಂದ ಸುಮಾರು 39 ಸಾವಿರ ಮಕ್ಕಳಿಗೆ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಕನ್ನಡ ವಿಷಯದಲ್ಲಿ 125ಕ್ಕೆ 125 ಹಾಗೂ 120ಕ್ಕೂ ಮೇಲ್ಪಟ್ಟು ಅಂಕಗಳಿಸಿದ ಇಡೀ ರಾಜ್ಯಮಟ್ಟದಲ್ಲಿ ಗುರುತಿಸಿ ಅವರಿಗೆ ಪ್ರಶಸ್ತಿಯನ್ನು ಸಾಲಿಗ್ರಾಮ ಗಣೇಶ ಶೆಣೈ ನೇತೃತ್ವದಲ್ಲಿ ಪ್ರದಾನ ಮಾಡುತ್ತಾ ಬಂದಿದೆ. ಕಲೆ, ಸಾಹಿತ್ಯ, ಸಂಸ್ಕೃತಿ, ಸಂಗೀತ, ಶಿಕ್ಷಣ ಈ ಮುಖ್ಯಾಂಶಗಳನ್ನು ಇಟ್ಟುಕೊಂಡು 1989ರಲ್ಲಿ ಈ ಸಂಸ್ಥೆ ಸ್ಥಾಪನೆಯಾಗಿದೆ. ಅಂದಿನಿAದ ಇಂದಿನವರೆಗೆ ಹಲವಾರು ಕಾರ್ಯಕ್ರಮಗಳನ್ನು ಆಯೋಜನೆ ಮಾಡಿಕೊಂಡು ಬಂದಿರುವುದು ಶ್ಲಾಘನೀಯ.

ಮುತ್ತು-ರತ್ನಗಳನ್ನು ಸೇರುಗಳಲ್ಲಿ ಅಳೆದು ಮಾರುವಂತೆ ವಿಜಯನಗರ ಸಾಮ್ರಾಜ್ಯ ಕಂಡAತ ನಾಡು ನಮ್ಮದು. ಇಂದಿನ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ರಾಜ್ಯದ ಬೇರೆ ಬೇರೆ ಜಿಲ್ಲೆಗಳಿಂದ ಮಧ್ಯ ಕರ್ನಾಟಕದ ಈ ದಾವಣಗೆರೆಗೆ ಆಗಮಿಸಿದ್ದೀರಿ. ಕನ್ನಡದಲ್ಲಿ 125ಕ್ಕೆ 125ಕ್ಕೆ ಅಂಕಗಳಿಸುವುದು ಎಂದರೆ ನಿಮ್ಮ ಬುದ್ದಿಮತ್ತೆಯ ಸಾರ್ಥಕತೆ. ಇನ್ನೂ ಉನ್ನತ ಮಟ್ಟದಲ್ಲಿ ಹೆಸರು ಕೀರ್ತಿ ಗಳಿಸುವಂತಾಗಿರಿ ಎಂದು ಹಾರೈಸಿದರು.

ಕೇರಳ ರಾಜ್ಯದ ಮಂಗಲ್ಪಾಡಿಯ ಕಲಾಕುಂಚ ಸಂಸ್ಥೆ ಸಂಸ್ಥಾಪಕರಾದ ಜಯಲಕ್ಷಿö್ಮ ಶ್ರೀರಾಮ ಕಾರಂತ್ ಮಾತನಾಡಿ, ಮಕ್ಕಳು ನೀವು ವಿದ್ಯೆ ಮಾತ್ರ ಕಲಿತು ಏನೂ ಪ್ರಯೋಜನವಿಲ್ಲ. ಅದರ ಜೊತೆಗೆ ಉತ್ತಮ ಸಂಸ್ಕಾರ ಬೆಳೆಸಿಕೊಳ್ಳಿ. ಅದು ನಮ್ಮ ಕಲಾಕುಂಚದ, ನಮ್ಮ ನಾಡಿನ, ಹಿರಿಯರ ಬೇಡಿಕೆಯಾಗಿದೆ. ನೀವು ಇದನ್ನು ಪೂರೈಸಿದರೆ ನೀವು ಇಲ್ಲಿ ಪಡೆದುಕೊಂಡ ಪುರಸ್ಕಾರಕ್ಕೆ ಖಂಡಿತವಾಗಿ ಗೌರವ ಕೊಡುತ್ತದೆ. ನಿಮಗೆ ಬದುಕಿನಲ್ಲಿ ಒಳ್ಳೆಯದು ಕಾಣುವುದು ಕಷ್ಟ. ಅದು ಇದೆ.

ಅದನ್ನು ಹದ್ದಿನ ದೃಷ್ಠಿಯಂತೆ ನೋಡಿ ಅದನ್ನು ಹೆಕ್ಕಿಕೊಳ್ಳಿ. ಅದು ನಿಮ್ಮ ಸ್ವಾತಂತ್ರö್ಯಕ್ಕೆ ಸರಿಯಾದ ಉತ್ತರವಾಗುವುದು. ಯಾವುದೇ ವಿಷಯದಲ್ಲಿ ಇರಲಿ, ಎಲ್ಲಿ, ಏನು ಒಳ್ಳೆಯದು ಇದೆಯೋ ಅದನ್ನು ಸ್ವೀಕರಿಸಿ. ನೀವು ಬೇರೆ ಬೇರೆ ಮುಖಗಳಿಗೆ ಗಮನಹರಿಸದೇ ಓದಿನ ಕಡೆಗೆ ಮಾತ್ರ ಗಮನಹರಿಸಿ. ನಿಮ್ಮ ತಂದೆ, ತಾಯಿ, ಶಿಕ್ಷಕರಿಗೆ ತಲೆಬಾಗಿ. ನೀವು ನಿಜವಾದ ಸಮಾಜದ ಕಣ್ಣುಗಳು. ಈ ಕಣ್ಣುಗಳು ಸರಿ ಇದ್ದರೆ ಸಮಾಜ ಸರಿ ಇರುತ್ತದೆ ಎಂದು ಆಶಿಸಿದರು.

ಕಲಾಕುಂಚ ಸಂಸ್ಥೆ ಅಧ್ಯಕ್ಷ ವಾಸುದೇವ ರಾಯ್ಕರ್ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿ, ನೀವು ನಿಮ್ಮ ಕಠಿಣ ಪರಿಶ್ರಮದಿಂದ ವಿದ್ಯಾಭ್ಯಾಸ ಮಾಡಿ ಇಂದು ಗೌರವ ಸ್ವೀಕರಿಸುತ್ತಿದ್ದೀರಿ. ಮಕ್ಕಳು 125ಕ್ಕೆ 125, 625ಕ್ಕೆ 625 ಅಂಕಗಳಿಸುವುದು ಸುಲಭದ ಮಾತಲ್ಲ. ಇದು ನಿಮಗೆ ನಿಮ್ಮ ತಂದೆ, ತಾಯಿ ಶಿಕ್ಷಕರು ಕೊಟ್ಟ ಬಳುವಳಿ. ನೀವೆಲ್ಲರೂ ಒಂದು ಕಲ್ಲಿದ್ದಂತೆ. ನಿಮ್ಮ ಪೋಷಕರು, ಶಿಕ್ಷಕರು ನೈಜ ಬೆಂಭಲವನ್ನು, ಕೌಶಲ್ಯವನ್ನು ಕೊಟ್ಟು ನಿಮ್ಮನ್ನು ರೂಪಿಸುತ್ತಾರೆ. ರೂಪಗೊಂಡ ಮಾದರಿಯೇ ಇಡೀ ದೇಶಕ್ಕೆ ಬೇಕಾದ ಶಿಲ್ಪಿಗಳು ನೀವು. ಎಸ್ಸೆಸ್ಸೆಲ್ಸಿ ಇಷ್ಟಕ್ಕೇ ಸಾಮರ್ಥ್ಯ ಮುಗಿಯಲ್ಲ. ಇದರ ನಂತರ ನಿಮ್ಮ ಸಾಮರ್ಥ್ಯ ಇಡೀ ಭಾರತಕ್ಕೆ ಗೊತ್ತಾಗುತ್ತದೆ. ಬಾಲ್ಯದಲ್ಲಿ ಕಳೆದ ಕ್ಷಣಗಳು ಮತ್ತೆ ಸಿಗಲ್ಲ. ನಿಮಗೆ ತಂದೆ, ತಾಯಿ, ಪೋಷಕರು, ನಿಮಗೆ ಮಾದರಿಯಾಗಿರುತ್ತಿದ್ದರು.

ಅಂಕಗಳ ಹಿಂದೆ ಹೋಗಬೇಡಿ. ತಮ್ಮ ಕೌಶಲ್ಯ ಯಾವುದರಲ್ಲಿ ಆಸಕ್ತಿ ಇದೆಯೋ, ಅದರ ಕಡೆಗೆ ಗಮನಹರಿಸಿ. ಒಲವುಕೊಡಿ. ಆಗ ಜೀವನದಲ್ಲಿ ಮುಂದೆ ಬರಲು ಸಾಧ್ಯ. ತಂದೆ ತಾಯಿ, ಪೋಷಕರ ಮಾತನ್ನು ನಿರ್ಲಕ್ಷö್ಯ ಮಾಡಬೇಡಿ. ಅಂಕದ ಜೊತೆಗೆ ಅನುಭವವೂ ಬೇಕು. ಈಗಾಗಲೇ ಕಲಾಕುಂಚ ಸಂಸ್ಥೆಯಿAದ ಸುಮಾರು 39 ಸಾವಿರ ಮಕ್ಕಳಿಗೆ ಗೌರವಿಸಿದ್ದೇವೆ. ಇದು ಕೋಟಿಯಾಗಲಿ ನಾವು ಗೌರವಿಸಿ ಪುರಸ್ಕರಿಸಲು ಸಿದ್ದರಿದ್ದೇವೆ ಎಂದರು.

ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯ ಸಂಸ್ಥಾಪಕ ಸಾಲಿಗ್ರಾಮ ಗಣೇಶ ಶೆಣೈ ಪ್ರಾಸ್ತಾವಿಕವಾಗಿ ಮಾತನಾಡಿ, ನಮ್ಮ ಸಂಸ್ಥೆಗೆ ಯಾವುದೇ ಸರ್ಕಾರದ, ಇಲಾಖೆಯ ಅನುದಾನ, ದೇಣಿಗೆ ಇಲ್ಲ. ಇದು ಸ್ವತಂತ್ರ ಸಂಸ್ಥೆಯಾಗಿದೆ. ನಮ್ಮ ಸಂಸ್ಥೆ ಪದಾಧಿಕಾರಿಗಳು, ಸದಸ್ಯರು ಆರ್ಥಿಕವಾಗಿ ನೀಡಿದ ದೇಣಿಗೆಯಿಂದ ಈ ಕಾರ್ಯಕ್ರಮ ನಡೆಯುತ್ತಿದೆ. ಪ್ರತಿವರ್ಷ ಜಿಲ್ಲೆಯಾದ್ಯಂತ ಶಾಲೆಗಳಿಗೆ ಪರೀಕ್ಷ ಪೂರ್ವಭಾವಿ ಸಿದ್ದತಾ ಕಾರ್ಯಕ್ರಮ ಮಾಡುತ್ತಾ ಬಂದಿದ್ದೇವೆ.ಈ ಕಾರ್ಯಕ್ರಮಕ್ಕೆ ರಾಯಚೂರು, ಬೆಂಗಳೂರು, ಮೈಸೂರು, ಬೀದರ್, ಉಡುಪಿ ಸೇರಿದಂತೆ ವಿವಿಧೆಡೆಯಿಂದ ಬಂದಿದ್ದಾರೆ. ಇಂತಹ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಲು ಎಲ್ಲಾ ಸದಸ್ಯರ ಸಹಕಾರವೇ ಕಾರಣ ಎಂದರು.

ಕಾರ್ಯಕ್ರಮದಲ್ಲಿ ಕಲಾಕುಂಚ ಸಂಸ್ಥೆ ಗೌರವಾಧ್ಯಕ್ಷ ಕೆ.ಎಚ್.ಮಂಜುನಾಥ, ಪ್ರಧಾನ ಕಾರ್ಯದರ್ಶಿ ಕೆ.ಸಿ.ಉಮೇಶ, ಮಹಿಳಾ ವಿಭಾಗದ ಸಂಸ್ಥಾಪಕರಾದ ಜ್ಯೋತಿ ಗಣೇಶ ಶೆಣೈ, ಗೌರವಾಧ್ಯಕ್ಷೆ ವಸಂತಿ ಮಂಜುನಾಥ, ಮಹಿಳಾ ವಿಭಾಗದ ಅಧ್ಯಕ್ಷೆ ಹೇಮಾ ಶಾಂತಪ್ಪ ಪೂಜಾರಿ ಸೇರಿದಂತೆ ಪದಾಧಿಕಾರಿಗಳು ಇದ್ದರು. ಸುಪ್ರಜಾ ಆರುಶಿ ರಾವ್ ಪ್ರಾರ್ಥಿಸಿದರೆ, ಕುಸುಮ ಲೋಕೇಶ ಸ್ವಾಗತಿಸಿದರು. ಲಲಿತಾ ಕಲ್ಲೇಶ ವಂದಿಸಿದರು. ಶೈಲಾ ವಿನೋದ ದೇವರಾಜ ಕಾರ್ಯಕ್ರಮ ನಿರೂಪಿಸಿದರು.