ಚಾರ ಗಾಂಧಿನಗರ ಶಾಲೆಯಲ್ಲಿ .ಎಲ್ ಕೆ. ಜಿ, ಯು.ಕೆ..ಜಿ ತರಗತಿಗಳ ಉದ್ಘಾಟನಾ ಕಾರ್ಯಕ್ರಮ

0
84

ಹೆಬ್ರಿ : ಚಾರ ಗಾಂಧಿ ನಗರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 2026-27 ನೇ ಶೈಕ್ಷಣಿಕ ವರ್ಷದಲ್ಲಿ ನೂತನವಾಗಿ ಪ್ರಾರಂಭಿಸಿದ LKG ಮತ್ತು UKG ತರಗತಿಗಳ ಉದ್ಘಾಟನೆ ಹಾಗೂ ದಾನಿಗಳು ಕೊಡಮಾಡಿದ ಉಚಿತ ನೋಟ್ ಪುಸ್ತಕ,ಲೇಖನ ಸಾಮಾಗ್ರಿ,ಕೊಡೆ, LKG, & UKG ಮಕ್ಕಳಿಗೆ ಪಠ್ಯಪುಸ್ತಕ ಹಾಗೂ ಸಮವಸ್ತ್ರ ವಿತರಣಾ ಕಾರ್ಯಕ್ರಮವು ಜೂ. 20 ರಂದು ಜರುಗಿತು.

ಸಭೆಯ ಅಧ್ಯಕ್ಷತೆಯನ್ನು ಎಸ್ ಡಿ ಎಂ ಸಿ ಯ ಅಧ್ಯಕ್ಷರಾಗಿರುವಂತಹ ಚಂದ್ರ ಆಚಾರ್ ವಹಿಸಿಕೊಂಡಿದ್ದರು. ಸಭಾ ವೇದಿಕೆಯಲ್ಲಿ ಬಾಲ್ಯ ಫೌಂಡೇಶನ್ (ರಿ) ಬೆಂಗಳೂರು,ಇದರ ಸ್ಥಾಪಕ ಅಧ್ಯಕ್ಷರಾದ ನಾಗರಾಜ ಎಸ್ , ಪದಾಧಿಕಾರಿಯದ ಜೀವನ್, ಚಾರ ಗ್ರಾಮ ಪಂಚಾಯತ್ ನ ನಿಕಟಪೂರ್ವ ಅಧ್ಯಕ್ಷರಾದ ದಿನೇಶ್ ಶೆಟ್ಟಿ, ಗ್ರಾಮ ಪಂಚಾಯತ್ ನ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸುರೇಖಾ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವಲಯ ಅಧ್ಯಕ್ಷರಾದ ಜ್ಯೋತಿ ಉದಯಕುಮಾರ್, ಶಾಲಾ ಹಳೆ ವಿದ್ಯಾರ್ಥಿ ಕೃಷ್ಣಮೂರ್ತಿ ಭಂಡಾರಿ, ಶಾಲೆಯ ದಾನಿ ಕೃಷ್ಣ ನಾಯಕ್ ಇವರ ಧರ್ಮಪತ್ನಿ ಜಾನಕಿ, ಕಾರ್ಕಳ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯ ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ರವಿಚಂದ್ರ ಕಾರಂತ, ಶಾಲಾ ಎಸ್ ಡಿ ಎಂ ಸಿ ಯ ಉಪಾಧ್ಯಕ್ಷೆ ನಳಿನಿ ಇವರುಗಳು ಉಪಸ್ಥಿತರಿದ್ದರು.

ನೂತನವಾಗಿ ಆರಂಭಿಸಿದ LKG & UKG ತರಗತಿಯ ಉದ್ಘಾಟನೆಯನ್ನು ನೆರವೇರಿಸಲಾಯಿತು. ಬಾಲ್ಯ ಫೌಂಡೇಶನ್ (ರಿ) ಬೆಂಗಳೂರು ಹಾಗೂ ಚಂದ್ರ ಆಚಾರ್ ಇವರುಗಳು ಕೂಡ ಮಾಡಿದ ನೋಟ್ ಪುಸ್ತಕ ಹಾಗೂ ಲೇಖನ ಸಾಮಗ್ರಿಗಳ ವಿತರಣೆ, ಕೃಷ್ಣ ನಾಯ್ಕ್ ಉದ್ಯಮಿಗಳು ಚಾರ ಇವರು ಕೂಡ ಮಾಡಿದ ಕೊಡೆ ವಿತರಣೆ, ಸುಬ್ರಹ್ಮಣ್ಯ ಗಾಣಿಗ ಗಾಂಧಿನಗರ ಚಾರ ಇವರು LKG & UKG ಮಕ್ಕಳಿಗೆ ಕೊಡ ಮಾಡಿದ ಪಠ್ಯಪುಸ್ತಕ ವಿತರಣೆ, ರೋಹಿತ್ ಕುಮಾರ್ ಶೆಟ್ಟಿ, ಕೃಷ್ಣಮೂರ್ತಿ ಭಂಡಾರಿ, ಪ್ರೀತಮ್ ಆಚಾರ್ಯ ಚಾರ , ಕೃಷ್ಣ “ಬೆನಕ” ಚಾರ ಇವರುಗಳು ಕೊಡಮಾಡಿದ ಸಮವಸ್ತ್ರ ವಿತರಣೆ ಮಾಡಲಾಯಿತು.

ಈ ಸಂದರ್ಭದಲ್ಲಿ ಶಾಲೆಯ ಸಹಶಿಕ್ಷಕಿ ವಸಂತಿಯವರು 10 ಕುರ್ಚಿಗಳನ್ನು, ನಳಿನಿ ಯವರು 10 ಸಾವಿರ ರೂಪಾಯಿ, ಮತ್ತು ಜ್ಯೋತಿ ಉದಯ್ ಕುಮಾರ್ ರವರು 5,000 ರೂಪಾಯಿ ಶಾಲೆಯ ಅಭಿವೃದ್ಧಿ ಕಾರ್ಯಗಳಿಗಾಗಿ ದೇಣಿಗೆಯನ್ನು ನೀಡಿದರು. ಕೊಡುಗೆ ನೀಡಿದ ಎಲ್ಲಾ ದಾನಿಗಳಿಗೂ ಎಲ್ಲರ ಪರವಾಗಿ ಆತ್ಮೀಯ ಅಭಿನಂದನೆಗಳು. ಎಸ್ ಡಿ ಎಂ ಸಿ ಯ ಎಲ್ಲಾ ಸದಸ್ಯರು ಪೋಷಕರು ಶಾಲಾ ವಿದ್ಯಾಭಿಮಾನಿಗಳು, ಹಳೆ ವಿದ್ಯಾರ್ಥಿಗಳು ವಿದ್ಯಾರ್ಥಿ ವೃಂದ, ಶಾಲಾ ಅಧ್ಯಾಪಕವೃಂದವರು ಉಪಸ್ಥಿತರಿದ್ದರು.

ಶಾಲಾ ಮುಖ್ಯ ಶಿಕ್ಷಕ ಉಮಾಶಂಕರ್ ಸ್ವಾಗತಿಸಿದರು, ಸಹ ಶಿಕ್ಷಕಿ ರತ್ನಾವತಿ ಕಾರ್ಯಕ್ರಮ ನಿರೂಪಿಸಿ,ಸಹ ಶಿಕ್ಷಕಿ ವಸಂತಿ ವಂದಿಸಿದರು. ಅತಿಥಿ ಶಿಕ್ಷಕಿಯರಾದ ಕುಮಾರಿ ದೀಪಿಕಾ ಮತ್ತು ಕೋಮಲಾಕ್ಷಿ ಸಹಕರಿಸಿದರು.

LEAVE A REPLY

Please enter your comment!
Please enter your name here