ಕನ್ನಾರಿನಲ್ಲಿ ವಿಶ್ವ ಯೋಗ ದಿನಾಚರಣೆ : ಉಚಿತ ಯೋಗ ಶಿಬಿರಕ್ಕೆ ಚಾಲನೆ

0
51

ಹೆಬ್ರಿ : ವಿಶ್ವ ಯೋಗ ದಿನಾಚರಣೆ ಪ್ರಯುಕ್ತ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ ಕನ್ನಾರು ಇಲ್ಲಿ” ಉತ್ತಮ ಆರೋಗ್ಯ ಉತ್ತಮ ಜೀವನ” ಎನ್ನುವ ನಿಟ್ಟಿನಲ್ಲಿ ಉಚಿತ ಯೋಗ ಅಭ್ಯಾಸ ಶಿಬಿರ ಪ್ರಾರಂಭಿಸಲಾಯಿತು.

ಶಿಬಿರದ ಉದ್ಘಾಟನೆ ಯನ್ನು ದೀಪ ಬೆಳಗಿಸುವುದರ ಮೂಲಕ ಶಾರದಾ ಪ್ರೌಢ ಶಾಲೆಯ ನಿವೃತ್ತ ಶಿಕ್ಷಕಿ, ಹಾಗೂ ಉತ್ತಮ ಯೋಗ ಶಿಕ್ಷಕಿಯೂ ಆಗಿರುವ ಧಮಯಂತಿ ಭಟ್ ರವರು ನೆರವೇರಿಸಿದರು.ಈ ಸಂದರ್ಭದಲ್ಲಿ ಯೋಗ ಶಿಕ್ಷಣ ವನ್ನು ಕಲಿಸಿ ಕೊಡಲಿರುವ, ಶ್ರೀಹರಿ, ರಂಗನಾಥ, ಹಾಗೂ ಆನಂದ ನಾಯ್ಕ ರವರು ಉಪಸ್ಥಿತರಿದ್ದರು.

ಜೊತೆ ಯಲ್ಲಿ ದೇವಸ್ಥಾನದ ಅಭಿವೃದ್ಧಿ ಸಮಿತಿಯ ನಟರಾಜ ಮಂಜ, ಹರೀಶ ಶೆಟ್ಟಿ, ಸಾಧು ಶೇರಿಗಾರ್ ಗಂಗಾಡಿ, ಅಶೋಕ ಮಡಿವಾಳ, ಕಮಲಾಕ್ಷ ಹೆಬ್ಬಾರ್, ಶ್ಯಾಮ ಪ್ರಸಾದ ಭಟ್, ವಿಶ್ವನಾಥ ಶೆಟ್ಟಿ, ಗೋಪಾಲ ಮರಕಾಲ ಮತ್ತು ಇತರರು ಸಹಕರಿಸಿದರು.

ಪ್ರಥಮ ದಿವಸ ಭಾಗವಹಿಸಿದ ಸರ್ವರಿಗೂ ದೇವಸ್ಥಾನದ ವತಿಯಿಂದ ಯೋಗಾ ಮ್ಯಾಟ್ ನ್ನು ಉಚಿತವಾಗಿ ನೀಡಲಾಯಿತು. ಇದೇ ಸಂದರ್ಭದಲ್ಲಿ ಗುರುಗಳೂ ಯೋಗಶಿಕ್ಷಕಿಯೂ ಆಗಿರುವ ಧಮಯಂತಿ ಭಟ್ ರವರನ್ನು ಕನ್ನಾರಮ್ಮನ ಪ್ರಸಾದ ನೀಡಿ ಶಾಲು ಹೊದಿಸಿ ಗೌರವಿಸಲಾಯಿತು.

ಪ್ರಥಮ ದಿವಸ ಸುಮಾರು 25 ಕ್ಕೂ ಹೆಚ್ಚು ಯೋಗ ಶಿಕ್ಷಣಾರ್ಥಿಗಳು ಆಗಮಿಸಿದ್ದು ವಿಶೇಷವಾಗಿತ್ತು. ಯೋಗಾ ನಂತರ ಉಪಹಾರ ದ ವ್ಯವಸ್ಥೆ ಮಾಡಲಾಗಿತ್ತು.
ಪ್ರತೀ ಆದಿತ್ಯವಾರ ಬೆಳಿಗ್ಗೆ 7 ಗಂಟೆ ಯಿಂದ 8 ಗಂಟೆ ವರೆಗೆ ಯೋಗಾಭ್ಯಾಸ ನಡೆಯಲಿರುವುದು. ಹೊಸದಾಗಿ ಬರುವವರಿಗೆ ಇನ್ನೂ ಅವಕಾಶ ಇದೆ.

LEAVE A REPLY

Please enter your comment!
Please enter your name here