ಅಮೃತಭಾರತಿಯಲ್ಲಿ ಗುರುಪೂರ್ಣಿಮೆ ಕಾರ್ಯಕ್ರಮ

0
31

ಹೆಬ್ರಿ ಪಿ ಆರ್ ಎನ್ ಅಮೃತಭಾರತಿ ವಿದ್ಯಾಲಯ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಗುರುಪೂರ್ಣಿಮೆ ಆಚರಿಸಲಾಯಿತು.

ಭಗವಾಧ್ವಜಕ್ಕೆ ಪುಷ್ಪಾರ್ಚನೆ ಸಲ್ಲಿಸಿ, ಪ್ರಶಾಂತ ಅರೆ ಶಿರೂರು ಇವರು ಮುಖ್ಯ ಅತಿಥಿಗಳಾಗಿ ಮಾತನಾಡಿ, ಸಮಾಜದಲ್ಲಿ ಗುರುವಿನ ಸ್ಥಾನ ಅತ್ಯುತ್ಕೃಷ್ಟವಾದುದು, ಭಾರತೀಯ ಸಂಸ್ಕೃತಿಯಲ್ಲಿ ಗುರುಗಳು ಲೋಕಕಲ್ಯಾಣಕ್ಕಾಗಿ ದುಡಿಯುವವರು. ಆದ್ದರಿಂದ ಗುರುಗಳು ಮಾತ್ರ ಶಿಷ್ಯ ತನಗಿಂತ ಎತ್ತರಕ್ಕೆ ಬೆಳೆಯಬೇಕು ಎಂದು ಬಯಸುವವರು.  ಸಮಾಜದಲ್ಲಿ ಭಗವಾನ್ ವ್ಯಾಸರ ಮಹತ್ವವನ್ನು ತಿಳಿಸಿದರು.

ಈ ಸಮಾರಂಭದ  ಅಧ್ಯಕ್ಷತೆಯನ್ನು ಅಮೃತ ಭಾರತಿ ವಸತಿ ನಿಲಯದ ಸದಸ್ಯ ರಾಮಕೃಷ್ಣ ಆಚಾರ್ಯ ವಹಿಸಿ, ಗುರುವಿನ ಸ್ಥಾನದಲ್ಲಿ ತಂದೆ ತಾಯಿಯನ್ನು ಗೌರವಿಸಿ ಎಂದು ತಿಳಿಸಿದರು.

ವಿದ್ಯಾಲಯದ ಆಡಳಿತ ಮಂಡಳಿ ಅಧ್ಯಕ್ಷ ಶೈಲೇಶ್ ಕಿಣಿ, ಸಂಸ್ಥೆಯ ಮುಖ್ಯಸ್ಥರಾದ ಅಪರ್ಣಾ ಆಚಾರ್, ಶಕುಂತಲಾ , ಪಿ ಆರ್ ಓ ವಿಜಯಕುಮಾರ್ ಶೆಟ್ಟಿ ಮತ್ತು ವಿದ್ಯಾರ್ಥಿಗಳು, ಬೋಧಕ ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು. ಎಲ್ಲಾ ವಿದ್ಯಾರ್ಥಿಗಳು ಭಗವಾಧ್ವಜಕ್ಕೆ ವಂದಿಸಿ ಪುಷ್ಪಾರ್ಚನೆಗೈದರು. ಶಿಶು ಮಂದಿರದ ಪುಟಾಣಿ ವಿದ್ಯಾರ್ಥಿಗಳು ವ್ಯಾಸ ಮಹರ್ಷಿಗಳಾಗಿ ಸಭಿಕರ ಗಮನ ಸೆಳೆದರು.

ಕಾರ್ಯಕ್ರಮವನ್ನು ವಿದ್ಯಾರ್ಥಿನಿಯರಾದ ಗಗನ್ಯ ಮತ್ತು ಸ್ಮಿತಿ ನಿರೂಪಿಸಿ, ಪಲ್ಲವಿ ಸ್ವಾಗತಿಸಿ, ಯಾದ್ವಿ ಧನ್ಯವಾದವಿತ್ತರು.

LEAVE A REPLY

Please enter your comment!
Please enter your name here