ಜೈನ ಪ್ರೌಢಶಾಲೆಯಲ್ಲಿ ಜಿಲ್ಲಾ ಮಟ್ಟದ ಹಾಕಿ ಪಂದ್ಯಾಟ

0
3


ಮೂಡುಬಿದಿರೆ : ಮೂಡುಬಿದಿರೆ ಜೈನ ಪ್ರೌಢಶಾಲೆಯ ಆತಿಥ್ಯದಲ್ಲಿ 2025-26ನೇ ಸಾಲಿನ ಜಿಲ್ಲಾ ಮಟ್ಟದ ಹಾಕಿ ಪಂದ್ಯಾಟವು ಬೆಟ್ಕೇರಿ ಮೈದಾನದಲ್ಲಿ ಯಶಸ್ವಿಯಾಗಿ ಸಂಪನ್ನಗೊಂಡಿತು.
ಪಂದ್ಯಾಟದ ಉದ್ಘಾಟನೆಯನ್ನು ಸಂಸ್ಥೆ ಯ ಹಳೇವಿಧ್ಯಾರ್ಥಿ ಹಾಗೂ ಮಾಜಿ ಶಾಸಕರಾದ ಶ್ರೀಅಭಯ ಚಂದ್ರ ಜೈನ್ ಅವರು ನೆರವೇರಿಸಿ ಮಾತನಾಡುತ್ತಾ ತಮ್ಮ ಬಾಲ್ಯದ ಕ್ರೀಡಾ ದಿನಗಳನ್ನು ನೆನಪಿಸಿಕೊಂಡರು. ಕ್ರೀಡೆಯಲ್ಲಿ ಸೋಲು ಗೆಲುವು ಸಹಜ, ಸೋತವರು ನಿರಾಶರಾಗದೆ ಮುಂದಿನ ಸ್ಪರ್ಧೆಗಳಿಗೆ ಆತ್ಮವಿಶ್ವಾಸದಿಂದ ಸಿದ್ಧಾರಾಗಬೇಕು ಎಂದುಕಿವಿಮಾತು ಹೇಳೆದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಆಡಳಿತ ಮಂಡಳಿಯ ಗೌರವನ್ವಿತ ಅಧ್ಯಕ್ಷರಾದ ಶ್ರೀ ವೀರೇಂದ್ರ ಎಂ. ವಹಿಸಿದ್ಧರು. ಮುಖ್ಯ ಅಥಿತಿಗಳಾದ ಆಡಳಿತ ಮಂಡಳಿಯ ಗೌರವನ್ವಿತ ಸಂಚಾಲಕರಾದ ಶ್ರೀ ಕೆ ಹೇಮರಾಜ್ ರವರು ಮಾತನಾಡಿ ಪಂದ್ಯಾಟಗಳು ವಿದ್ಯಾರ್ಥಿಗಳಲ್ಲಿ ಕ್ರೀಡಾಸಕ್ತಿಯನ್ನು ಬೆಳೆಸುವುದರೊಂದಿಗೆ ಶಿಸ್ತು ಮತ್ತು ತಂಡ ಭಾವನೆಯನ್ನು ಬೆಳೆಸುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ ಎಂದು ಅಭಿಪ್ರಾಯ ಪಟ್ಟರು. ಜಿಲ್ಲಾ ದೈಹಿಕ ಪರಿವೀಕ್ಷಕರಾದ ಶ್ರೀ ವಿಷ್ಣು ಹೆಬ್ಬಾರ್ ರವರು ಸೂಕ್ತ ಮಾಗದರ್ಶನದೊಂದಿಗೆ ಪಂದ್ಯಾಟದ ವಿವಿದ ಹಂತಗಳ ನಿರ್ವಹಣೆಯನ್ನು ಮಾಡಿದರು ವೇದಿಕೆಯಲ್ಲಿ ಆಡಳಿತ ಮಂಡಳಿಯ ಗೌರವನ್ವಿತ ಕಾರ್ಯದರ್ಶಿಗಳಾದ ಶ್ರೀ ಅಭಿಜಿತ್ ಎಂ, ಅರ್ಹತ್ ಸ್ಪೋರ್ಟ್ಸ್ ಅಕಾಡೆಮಿಯ ಸ್ಥಾಪಕರು ಮತ್ತು ಶಾಲಾ ಆಡಳಿತಮಂಡಳಿಯ ಸದಸ್ಯರಾದ ಶ್ರೀ ಪ್ರಥ್ವಿರಾಜ್ ಶೆಟ್ಟಿಯವರು, ತಾಲೂಕು ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷರಾದ ಶ್ರೀ ಸುಧೀರ್ ರವರು, ಸಹ ಸಂಸ್ಥೆ ಗಳ ಮುಖ್ಯಸ್ಥರುಗಳಾದ ಡಾ!ಪ್ರಭಾತ್ ಬಲ್ನಾಡ್ ಮತ್ತು ಶ್ರೀಮತಿ ವೀಣಾ ಹಾಗೂ ಜೈನ ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀ ಶ್ಯಾಮ್ ಪ್ರಸಾದ್ರವರು ಉಪಸ್ಥಿತರಿದ್ದರು.
ಜಿಲ್ಲೆಯ ವಿವಿದ ವಿದ್ಯಾಸಂಸ್ಥೆ ಗಳ 12 ತಂಡಗಳು ಪಂದ್ಯಾಟದಲ್ಲಿ ಭಾಗವಹಿಸಿದ್ದವು.
ಸಮಾರೋಪ ಸಮಾರಂಭದಲ್ಲಿ
ವಿಜೇತರ ಪಟ್ಟಿಯನ್ನು ಹೋಲಿರೋಸರಿ ಶಾಲೆಯ ದೈಹಿಕ ಶಿಕ್ಷಕರಾದ ರಿತೇಶ್ ರ ವರು ವಾಚಿಸಿದರು. ಅತಿಥಿಗಳು ವಿಜೇತ ತಂಡಗಳನ್ನು ಬಹುಮಾನ ಮತ್ತು ಪ್ರಶಸ್ತಿ ಪತ್ರಗಳನ್ನು ನೀಡಿ ಅಭಿನಂದಿಸಿದರು
ಮೂಡಬಿದಿರೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳು ಪ್ರಥಮ ಚಿಕಿತ್ಸೆಯಲ್ಲಿ ಸಹಕರಿಸಿದರು.
ಜಿಲ್ಲಾ ಮಟ್ಟದ ಹಾಕಿ ಪಂದ್ಯಾಟ ಜೈನ ಪ್ರೌಢಶಾಲೆಯ ದೈಹಿಕ ಶಿಕ್ಷಣ ಶಿಕ್ಷಕರಾದ ವಿಕಾಸ್. ಎನ್ ಜೈನ್ ಇವರ ನೇತೃತ್ವದಲ್ಲಿ ಅದ್ಧೂರಿಯಾಗಿ ಸಂಪನ್ನಗೊಂಡಿತು.
ದಿನವಿಡೀ ನಡೆದ ರೋಚಕ ಹಾಗೂ ಪೈಪೋಟಿಯಿಂದ ಕೂಡಿದ ಜಿಲ್ಲಾ ಮಟ್ಟದ ಹಾಕಿ ಪಂದ್ಯಾಟದಲ್ಲಿ ವಿವಿಧ ವಿಭಾಗಗಳಲ್ಲಿ ವಿಜೇತರಾದ ತಂಡಗಳು
U14 ವರ್ಷದ ಬಾಲಕರ ವಿಭಾಗ
ಪ್ರಥಮ: ಜೈನ ಪ್ರೌಢಶಾಲೆ ಮೂಡಬಿದ್ರೆ
ದ್ವಿತೀಯ: ಸೈಂಟ್ ಜೋಸೆಫ್ ಜಾಯ್ಲೆಂಡ್ ಆಂಗ್ಲ ಮಾಧ್ಯಮ ಶಾಲೆ ಕೊಲ್ಯ.
ಬೆಸ್ಟ್ ಫಾರ್ವರ್ಡ್ ಆಟಗಾರ : ಜನೀಶ್ ಮೂಡುಬಿದಿರೆ
ಬೆಸ್ಟ್ ಆಲ್ ರೌಂಡರ್ : ಶಾನ್ ಮೂಡಬಿದಿರೆ
ಬೆಸ್ಟ್ ಡಿಪೆಂಡರ್ : ಗಗನ್. ಎಮ್ ಮಂಗಳೂರು ದಕ್ಷಿಣ
ಬೆಸ್ಟ್ ಗೋಲ್ ಕೀಪರ್ : ಶ್ರವಂತ್ ಮೂಡುಬಿದಿರೆ
U14 ವರ್ಷದ ಬಾಲಕಿಯರ ವಿಭಾಗ
ಪ್ರಥಮ: ಸೈಂಟ್ ಥೋಮಸ್ ಆಂಗ್ಲ ಮಾಧ್ಯಮ ಶಾಲೆ ಅಲಂಗಾರು. ದ್ವಿತೀಯ: ಸೈಂಟ್ ಜೋಸೆಫ್ ಜಾಯ್ಲೆಂಡ್ ಆಂಗ್ಲ ಮಾಧ್ಯಮ ಶಾಲೆ ಕೊಲ್ಯ.
ಬೆಸ್ಟ್ ಫಾರ್ವರ್ಡ್ ಆಟಗಾರ : ರಿಷಾ ಮೂಡುಬಿದಿರೆ
ಬೆಸ್ಟ್ ಆಲ್ ರೌಂಡರ್ :ಕೃತಿಕಾ ಮೂಡುಬಿದಿರೆ
ಬೆಸ್ಟ್ ಡಿಪೆಂಡರ್ : ಲಕ್ಷ್ಮೀ ಪ್ರಿಯಾ ಮಂಗಳೂರು ದಕ್ಷಿಣ
ಬೆಸ್ಟ್ ಗೋಲ್ ಕೀಪರ್ : ವೀಕ್ಷಾ ಮೂಡುಬಿದಿರೆ
U17 ವರ್ಷದ ಬಾಲಕರ ವಿಭಾಗ
ಪ್ರಥಮ:ಸೈಂಟ್ ಥೋಮಸ್ ಆಂಗ್ಲ ಮಾಧ್ಯಮ ಶಾಲೆ ಅಲಂಗಾರು. ದ್ವಿತೀಯ: NITK ಅನುದಾನಿತ ಕನ್ನಡ ಮಾಧ್ಯಮ ಪ್ರೌಢಶಾಲೆ ಶ್ರೀನಿವಾಸ ನಗರ ಸುರತ್ಕಲ್.
ಬೆಸ್ಟ್ ಫಾರ್ವರ್ಡ್ ಆಟಗಾರ :ರೀವ್ ಮೂಡುಬಿದಿರೆ
ಬೆಸ್ಟ್ ಆಲ್ ರೌಂಡರ್ : ದೀಕ್ಷಿತ್ ಮಂಗಳೂರು ಉತ್ತರ
ಬೆಸ್ಟ್ ಡಿಪೆಂಡರ್ : ಗಣೇಶ್ ಮೂಡುಬಿದಿರೆ
ಬೆಸ್ಟ್ ಗೋಲ್ ಕೀಪರ್ : ವಿಶ್ರುತ್ ಮೂಡುಬಿದಿರೆ
U17 ವರ್ಷದ ಬಾಲಕಿಯರ ವಿಭಾಗ
ಪ್ರಥಮ: NITK ಅನುದಾನಿತ ಕನ್ನಡ ಮಾಧ್ಯಮ ಪ್ರೌಢಶಾಲೆ ಶ್ರೀನಿವಾಸ ನಗರ ಸುರತ್ಕಲ್.
ದ್ವಿತೀಯ: ಜೈನ ಪ್ರೌಢಶಾಲೆ ಮೂಡಬಿದ್ರೆ
ಬೆಸ್ಟ್ ಫಾರ್ವರ್ಡ್ ಆಟಗಾರ :ಲಾಸ್ಯ ಮೂಡುಬಿದಿರೆ
ಬೆಸ್ಟ್ ಆಲ್ ರೌಂಡರ್ : ಗೀತಾ ಮಂಗಳೂರು ಉತ್ತರ
ಬೆಸ್ಟ್ ಡಿಪೆಂಡರ್ : ಪೂಜಾ ಮಂಗಳೂರು ಉತ್ತರ
ಬೆಸ್ಟ್ ಗೋಲ್ ಕೀಪರ್ : ಪ್ರಗತ ಮಂಗಳೂರು ಉತ್ತರ
ಶಾಲೆಯ ಮುಖ್ಯೋಪಾಧ್ಯಾಯಾರದ ಶಾಮ್ ಪ್ರಸಾದ್ ವಂದನಾರ್ಪಣೆಗೈದು ಪಂದ್ಯಾಟ ಯಶಸ್ವಿಗಾಗಿ ಸಹಕರಿಸಿದ, ಆಡಳಿತ ಮಂಡಳಿ, ಅತಿಥಿಗಳು, ಕ್ರೀಡಾಪಟುಗಳು, ಶಿಕ್ಷಕರು, ತಂಡ ವ್ಯವಸ್ಥಾಪಕರು, ತೀರ್ಪುಗಾರರು, ತರಬೇತುದಾರರು, ಶಾಲಾ ಸಿಬ್ಬಂದಿಗಳು, ಪೋಷಕರು, ಸ್ವಯಂ ಸೇವಕರು ಹಾಗೂ ಹಳೆ ವಿದ್ಯಾರ್ಥಿಗಳಿಗೆ ಕೃತಜ್ಞತೆ ಸಲ್ಲಿಸಿದರು. ಜೈನ ಪ್ರೌಢಶಾಲೆಯ ಶಿಕ್ಷಕರಾದ ನವೀನ್ ಬಂಗೇರ ಇವರು ಕಾರ್ಯಕ್ರಮ ನಿರೂಪಿಸಿದರು.