ಉಡುಪಿ : ಬಹಳ ಪುರಾತನ ಕಾಡಬೆಟ್ಟು ಶ್ರೀ ಅಬ್ಬಗದಾರಗ ವೀರಭದ್ರ ಸಪರಿವಾರ ಶನೈಶ್ಚರ ದೇವಳದ ಬ್ರಹ್ಮಕುಂಭಾಭಿಷೇಕ ಮಹೋತ್ಸವ 2027ರ ಫೆ.7ರಂದು ಭಾನುವಾರ ನಡೆಯಲಿದೆ ಎಂದು ಕೃಷ್ಣಾಪುರ ಮಠಾಧೀಶ ಶ್ರೀ ವಿದ್ಯಾಸಾಗರತೀರ್ಥ ಶ್ರೀಪಾದರು ಉದ್ಘೋಷಿಸಿದರು.
ದೇವಳದ ಸಮಗ್ರ ಜೀಣರ್ೋದ್ಧಾರಕ್ಕೆ ಸಂಕಲ್ಪಿಸಿರುವ ಹಿನ್ನೆಲೆಯಲ್ಲಿ ಶನಿತ್ರಯೋದಶಿ ಶುಭದಿನವಾದ ಶನಿವಾರ ಕ್ಷೇತ್ರದ ತಂತ್ರಿಗಳಾದ ಕೊರಂಗ್ರಪಾಡಿ ಕುಮಾರಗುರು ತಂತ್ರಿ ನೇತೃತ್ವದಲ್ಲಿ ಸಾಮೂಹಿಕ ಶನಿಶಾಂತಿ, ಕ್ಷೇತ್ರದ ಎಲ್ಲಾ ದೇವರಿಗೆ ವಿಶೇಷ ಪೂಜೆ, ಸನ್ನಿಧಿಯಲ್ಲಿ ಸಮೂಹಿಕ ಪ್ರಾರ್ಥನೆ ನಡೆಸಿ ತರುವಾಯ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಬ್ರಹ್ಮಕಲಶಾಭಿಷೇಕದ ದಿನಾಂಕವನ್ನು ಶ್ರೀಗಳು ಪ್ರಕಟಿಸಿದರು.

ಬಳಿಕ ಆಶೀರ್ವಚನ ನೀಡಿದ ಶ್ರೀಪಾದರು ದೇವರು ದೀಪ ವಿದ್ದಂತೆ ನಮ್ಮ ಮನಸ್ಸಿನ ಕತ್ತಲನ್ನು ತೊಲಗಿಸುತ್ತಾನೆ , ಆದಕಾರಣ ದೇವರಲ್ಲಿ ನಿಶ್ಚಲವಾದ ಭಕ್ತಿ ಇರಿಸಿಕೊಂಡಲ್ಲಿ ನಮ್ಮೆಲ್ಲ ಸಂಕಷ್ಟಗಳು ದೂರವಾಗುತ್ತವೆ. ಶನೀಶ್ಚರ ಕಷ್ಟಕೊಡುವ ದೇವರು ಎಂಬ ತಪ್ಪು ಕಲ್ಪನೆ ಇದೆ. ಅದು ಸರಿಯಲ್ಲ. ಕಷ್ಟ ಕೊಡುವ ಮೂಲಕ ಭಕ್ತಿ ಮಾರ್ಗದಲ್ಲಿ ಮುನ್ನಡೆಯಲು ಪ್ರೇರೇಪಿಸುವ ಶನೀಶ್ಚರ ಭಕ್ತರ ಸಕಲಾಭೀಷ್ಟಗಳನ್ನು ಕರುಣಿಸುವ ದೇವರಾಗಿದ್ದು, ಶನೀಶ್ಚರನ ಆರಾಧನೆಯಿಂದ ಶ್ರೇಯಸ್ಸು ಸಾಧ್ಯ ಎಂದರು.ಮುಂದೆ ಇದು ದೊಡ್ಡ ಕ್ಷೇತ್ರ ವಾಗಿ ಬೆಳೆಯುತ್ತದೆ ಅನುಗ್ರಹಸಿದರು ದೇವಳದ ವತಿಯಿಂದ ಶ್ರೀಪಾದರನ್ನು ಗೌರವಿಸಲಾಯಿತು .
ಜೀರ್ಣೋಧ್ದಾರ ಮತ್ತು ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಕೆ.ಉದಯಕುಮಾರ್ ಶೆಟ್ಟಿ, ಹೊಸ ದೇವಾಲಯ ನಿಮರ್ಾಣ ಮಾಡುವುದಕ್ಕಿಂತ ಹಳೆ ದೇವಾಲಯದ ಜೀಣರ್ೋದ್ಧಾರ ಶ್ರೇಯಸ್ಕರ. ಊರಿನ ದೇವಳದ ಜೀಣರ್ೋದ್ಧಾರದಿಂದ ಸಮಸ್ತರಿಗೂ ಒಳ್ಳೆಯದಾಗುತ್ತದೆ ಎಂಬ ನಂಬಿಕೆ ಇದೆ. ಆ ಹಿನ್ನೆಲೆಯಲ್ಲಿ ಸರ್ವರ ಸಹಕಾರ ಅಗತ್ಯ ಎಂದರು.
ಶಾಸಕ ಯಶಪಾಲ್ ಸುವರ್ಣ ಮಾತನಾಡಿ ನನ್ನ ವಯ್ವಕ್ತಿಕ ಹಾಗೂ ಶಾಸಕ ನೆಲೆಯಲ್ಲಿ ಸಹಕಾರ ನೀಡುವೆ ನೆರೆದ ಭಕ್ತರೊ ಶ್ರೀದೇವರ ಕಾರ್ಯಕ್ಕೆ ಕೈ ಜೋಡಿಸುವಂತೆ ವಿನಂತಿಸಿದರು. ಕ್ಷೇತ್ರದ ತಂತ್ರಿಗಳಾದ ಕೊರಂಗ್ರಪಾಡಿ ಕುಮಾರಗುರು ತಂತ್ರಿ, ಮಾತನಾಡಿ ಬ್ರಹ್ಮಕಲಶೋತ್ಸವ ದ ಧಾರ್ಮಿಕ ಹಿನ್ನಲೆ ಅದರ ಮಹತ್ವ ವಿವರಿಸಿದರು , ವಿಧಾನ ಪರಿಷತ್ ಸದಸ್ಯೆ ಭಾರತಿ ಶೆಟ್ಟಿ, ದೇವಳದ ಟ್ರಸ್ಟಿ ಪ್ರಕಾಶ ಶೆಟ್ಟಿ, ಉದ್ಯಮಿ ಸಾಯಿರಾಧಾ ಮನೋಹರ ಶೆಟ್ಟಿ ಸುನಿಲ್ ಕೆ.ಆರ್., ಸಮಿತಿ ಉಪಾಧ್ಯಕ್ಷರಾದ ಮಟ್ಟಾರು ರತ್ನಾಕರ ಹೆಗ್ಡೆ, +ಮೋಹನ ಶೆಟ್ಟಿ ಮತ್ತು ರವಿ ಶೆಟ್ಟಿ, ಸಂಚಾಲಕ ಸುರೇಂದ್ರ ಶೆಟ್ಟಿ , ಸಂಘಟನಾ ಕಾರ್ಯದಶರ್ಿ ಸಚಿನ್ ರಾಜ್ ರೈ, ಟಿ.ಜಿ. ಹೆಗ್ಡೆ ಹಾಗೂ ವಿವಿಧ ಸಮಿತಿಯ ಸದಸ್ಯರು , ಹತ್ತು ಸಮಸ್ತರೂ ಉಪಸ್ಥಿತರಿದ್ದರು .
ಸಮಿತಿ ಸಂಚಾಲಕ ರಾಜಗೋಪಾಲ ರೈ ಸ್ವಾಗತಿಸಿ, ಜೊತೆ ಕಾರ್ಯದರ್ಶಿ ಮಧುಕರ ಮುದ್ರಾಡಿ ವಂದಿಸಿದರು. ಪ್ರಧಾನ ಕಾರ್ಯದಶರ್ಿ ಬೈಕಾಡಿ ಸುಪ್ರಸಾದ ಶೆಟ್ಟಿ ನಿರೂಪಿಸಿದರು.

