ಕಲಾಕುಂಚದಿಂದ ಚನ್ನಗಿರಿ ವಿರೂಪಾಕ್ಷಪ್ಪನವರಿಗೆ ಶತಮಾನೋತ್ಸವ ಸಂಭ್ರಮದಿಂದ ಗೌರವಿಸಿ ಸನ್ಮಾನ

0
26

ದಾವಣಗೆರೆ : ದಾವಣಗೆರೆಯ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯವತಿಯಿಂದ ಇತ್ತೀಚಿಗೆ ದಾವಣಗೆರೆ ನಗರದ ಶಂಕರ ಮಠದ ಸಭಾಂಗಣದಲ್ಲಿ ನಡೆದ ಸಿ.ಆರ್.ಚನ್ನಗಿರಿ ವಿರೂಪಾಕ್ಷಪ್ಪನವರಿಗೆ ಶತಮಾನೋತ್ಸವದ ಜನುಮದಿನದ ಪ್ರಯಕ್ತ ಅವರು ನೂರು ಒಂದು ವರ್ಷಕ್ಕೆ ಕಾಲಿಟ್ಟು ದಾನಿಗಳ ನಗರಿಯಲ್ಲಿ ನಿರಂತರವಾಗಿ ದಾನ, ಧರ್ಮ, ವಿದ್ಯಾರ್ಥಿಗಳಿಗೆ ಸಹಾಯ ಧನ ನೀಡಿ ಸಹಕರಿಸಿ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಗೆ ಕಳೆದ 35 ವರ್ಷಗಳಿಂದ ಎಲ್ಲಾ ಸಮಾರಂಭಕ್ಕೆ ದೇಣಿಗೆ ನೀಡುತ್ತಾ ಬಂದಿದ್ದು ಕಲಾಕುಂಚದಿಂದ ಅಭಿಮಾನದಿಂದ ಅಭಿನಂದಿಸಿ, ಗೌರವಿಸಿ ವಿಜೃಂಭಣೆಯಿಂದ ಸನ್ಮಾನ ಮಾಡಲಾಯಿತು ಎಂದು ಕಲಾಕುಂಚ ಸಂಸ್ಥೆಯ ಸಂಸ್ಥಾಪಕರಾದ ಸಾಲಿಗ್ರಾಮ ಗಣೇಶ್ ಶೆಣೈ ತಿಳಿಸಿದ್ದಾರೆ.

ವೇದಿಕೆಯಲ್ಲಿ ಕಲಾಕುಂಚ ಗೌರವ ಅಧ್ಯಕ್ಷರಾದ ಕೆ.ಹೆಚ್.ಮಂಜುನಾಥ್, ಕಲಾಕುಂಚ ಮಹಿಳಾ ವಿಭಾಗದ ಸಂಸ್ಥಾಪಕರಾದ ಜ್ಯೋತಿ ಗಣೇಶ್ ಶೆಣೈ, ಕಲಾಕುಂಚ ಮಹಿಳಾ ವಿಭಾಗದ ಅಧ್ಯಕ್ಷರಾದ ಹೇಮಾ ಶಾಂತಪ್ಪ ಪೂಜಾರಿ, ಕಲಾಕುಂಚ ಮಹಿಳಾ ವಿಭಾಗದ ಗೌರವ ಅಧ್ಯಕ್ಷರಾದ ವಸಂತಿ ಮಂಜುನಾಥ್, ಕಲಾಕುಂಚ ಸಿದ್ದವೀರಪ್ಪ ಬಡಾವಣೆಯ ಶಾಖೆಯ ಅಧ್ಯಕ್ಷರಾದ ಲಲಿತಾ ಕಲ್ಲೇಶ್, ಎಂ.ಸಿ.ಸಿ. ಶಾಖೆಯ ಅಧ್ಯಕ್ಷರಾದ ಪ್ರಭಾ ರವೀಂದ್ರ, ಸಮಿತಿ ಸದಸ್ಯರಾದ ಭರತ್ ಚನ್ನಗಿರಿ, ರಶ್ಮಿ ಭರತ್, ಶಾಂತಪ್ಪ ಪೂಜಾರಿ, ಚನ್ನಬಸವ ಶೀಲವಂತ್, ಕಲಾಕುಂಚ ಕೆ.ಬಿ.ಬಡಾವಣೆಯ ಶಾಖೆಯ ಅಧ್ಯಕ್ಷರಾದ ವಿ.ಕೃಷ್ಣಮೂರ್ತಿ, ಕಲಾಕುಂಚ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಕೆ.ಸಿ.ಉಮೇಶ್, ಕೋಮಲಾ ವಸಂತ್‌ಕುಮಾರ್, ಸಂಧ್ಯಾ ಶ್ರೀನಿವಾಸ್, ಗಿರಿಜಮ್ಮ ನಾಗರಾಜಪ್ಪ, ಶಿಲ್ಪಾ ಉಮೇಶ್, ರೇಣುಕಾ ರಾಮಣ್ಣ, ಲೀಲಾ ಸುಭಾಷ್ ಮುಂತಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here