ಮಂಗಳೂರು : ಮತದಾರರ ಪಟ್ಟಿ ತೀವ್ರ ಪರಿಷ್ಕರಣೆ (Special Intensive Revision – SIR) ಕಾರ‍್ಯಕ್ರಮದಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ಸಕ್ರಿಯವಾಗಿ ಭಾಗವಹಿಸುವ ಉದ್ದೇಶದಿಂದ ವಿಧಾನ ಪರಿಷತ್ ಶಾಸಕ ಐವನ್ ಡಿ’ಸೋಜಾ ಅವರ ನೇತೃತ್ವದಲ್ಲಿ ವಿವಿಧ ವರ‍್ಡ್‌ಗಳಲ್ಲಿ ಬಿ.ಎಲ್.ಎ.(Booth Level Agent) ಹಾಗೂ ಕೋರ‍್ಡಿನೇಟರ್‌ಗಳ ಸಭೆ ನಡೆಸಿ, ಬಿ.ಎಲ್.ಎ.ಗಳಿಗೆ ಗುರುತಿನ ಚೀಟಿ ವಿತರಿಸಲಾಯಿತು.ಈ ಸಂದರ‍್ಭದಲ್ಲಿ ಮಾತನಾಡಿದ ಐವನ್ ಡಿ’ಸೋಜಾ ಅವರು, ಚುನಾವಣಾ ಆಯೋಗದ ವತಿಯಿಂದ ಒಂದು ತಿಂಗಳ ಕಾಲ ನಡೆಯಲಿರುವ ಈ ವಿಶೇಷ ಪರಿಷ್ಕರಣೆ ಪ್ರಕ್ರಿಯೆಯಲ್ಲಿ ಕಾಂಗ್ರೆಸ್ ಪಕ್ಷದ ಬಿ.ಎಲ್.ಎ.ಗಳು ಅತ್ಯಂತ ಜವಾಬ್ದಾರಿಯಿಂದ ಕರ‍್ಯನರ‍್ವಹಿಸಬೇಕು ಎಂದು ಕರೆ ನೀಡಿದರು.
ಚುನಾವಣಾ ಆಯೋಗದಿಂದ ನೇಮಕಗೊಂಡಿರುವ ಬಿ.ಎಲ್.ಒ.ಗಳು ಮನೆಮನೆಗೆ ತೆರಳಿ Enumeration Form ವಿತರಿಸಲಿದ್ದು, ಆ ಪ್ರಕ್ರಿಯೆಯಲ್ಲಿ ಬಿ.ಎಲ್.ಎ.ಗಳು ಸಹಕಾರ ನೀಡಿ, ಯಾವುದೇ ರ‍್ಹ ಮತದಾರರು ಮತದಾರರ ಪಟ್ಟಿಯಿಂದ ಹೊರಗುಳಿಯದಂತೆ ನೋಡಿಕೊಳ್ಳಬೇಕು. ಪ್ರತಿಯೊಬ್ಬ ಅರ್ಹ ನಾಗರಿಕರ ಹೆಸರನ್ನು ಮತದಾರರ ಪಟ್ಟಿಯಲ್ಲಿ ಸರ‍್ಪಡೆಗೊಳಿಸುವ ಕರ‍್ಯವನ್ನು ಯಾವುದೇ ನರ‍್ಲಕ್ಷ್ಯವಿಲ್ಲದೆ ಪರ‍್ಣಗೊಳಿಸಬೇಕು ಎಂದು ಅವರು ತಿಳಿಸಿದರು.
ಸಭೆಗಳು ಈ ಕೆಳಕಂಡ ವರ‍್ಡ್‌ಗಳಲ್ಲಿ ನಡೆದವು:
ವರ‍್ಡ್ ಸಂಖ್ಯೆ 21 – ಪಡವು ಪಶ್ಚಿಮ
ವರ‍್ಡ್ ಸಂಖ್ಯೆ 35 – ಪಡವು ಸೆಂಟ್ರಲ್
ವರ‍್ಡ್ ಸಂಖ್ಯೆ 54 – ಜೆಪ್ಪಿನಮೊಗರು
ವರ‍್ಡ್ ಸಂಖ್ಯೆ 50 – ಅಳಪೆ (ಮಾಜಿ ಉಪಮೇಯರ್ ಶೇಸಮ್ಮ ಅವರ ನಿವಾಸದಲ್ಲಿ)
ವರ‍್ಡ್ ಸಂಖ್ಯೆ 47 – ಮಿಲಾಗ್ರಿಸ್ (ಅತ್ತಾವರ ಕಾಪ್ರಿಗುಡ್ಡೆ ಮರೀನಾ ಸ್ಟೇಡಿಯಂ ಸಮೀಪ ಡೋರಿಸ್ ಲೋಬೋ ಅವರ ನಿವಾಸದಲ್ಲಿ)
ಈ ಐದು ವರ‍್ಡ್‌ಗಳ ಸಭೆಗಳಲ್ಲಿ ಮಾತನಾಡಿದ ಅವರು, ರ‍್ಹ ಮತದಾರರು ಯಾವುದೇ ಕಾರಣಕ್ಕೂ ಮತದಾರರ ಪಟ್ಟಿಯಿಂದ ಹೊರಗುಳಿಯಬಾರದು. ಅದೇ ವೇಳೆ ಅರ‍್ಹರು ಪಟ್ಟಿಯಲ್ಲಿ ಸರ‍್ಪಡೆಯಾಗದಂತೆ ಎಚ್ಚರಿಕೆ ವಹಿಸಬೇಕು. ಎರಡು ಕಡೆ ಮತದಾರರ ಪಟ್ಟಿಯಲ್ಲಿ ಹೆಸರು ಹೊಂದಿರುವವರು ಹಾಗೂ ಬೇರೆ ರಾಜ್ಯಗಳಲ್ಲಿ ಮತದಾನದ ಹಕ್ಕು ಹೊಂದಿದ್ದರೂ ಇಲ್ಲಿ ಕೂಡ ಹೆಸರು ನೋಂದಾಯಿಸಿಕೊಂಡಿರುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು. ಈ ಕುರಿತು ಈಗಾಗಲೇ ಬಿ.ಎಲ್.ಒ.ಗಳು ಹಾಗೂ ಜಿಲ್ಲಾಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ ಎಂದು ಹೇಳಿದರು.
ಮಂಗಳೂರು ನಗರದಲ್ಲಿ ವ್ಯಾಪಾರ ಅಥವಾ ಉದ್ಯೋಗದ ಉದ್ದೇಶಕ್ಕಾಗಿ ವಾಸಿಸುತ್ತಿರುವ ಕೆಲವರು ತಮ್ಮ ಮೂಲ ನಿವಾಸದಲ್ಲಿಯೂ ಹಾಗೂ ಮಂಗಳೂರಿನಲ್ಲಿಯೂ ಮತದಾರರ ಪಟ್ಟಿಯಲ್ಲಿ ಹೆಸರು ಹೊಂದಿರುವುದು ಪ್ರಜಾಪ್ರಭುತ್ವದ ಮೌಲ್ಯಗಳಿಗೆ ಧಕ್ಕೆ ತರುವ ವಿಚಾರವಾಗಿದೆ. ಇಂತಹ ಪ್ರಕರಣಗಳನ್ನು ಗುರುತಿಸಿ ಫಾರಂ-7 ಮೂಲಕ ಅರ‍್ಹ ಹೆಸರುಗಳನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕುವ ಪ್ರಕ್ರಿಯೆಗೆ ಬಿ.ಎಲ್.ಎ.ಗಳು ಮತ್ತು ಬಿ.ಎಲ್.ಒ.ಗಳು ಪರಸ್ಪರ ಸಮನ್ವಯದಿಂದ ಕರ‍್ಯನರ‍್ವಹಿಸಬೇಕು ಎಂದು ಐವನ್ ಡಿ’ಸೋಜಾ ತಿಳಿಸಿದರು.
ಈ ಕಾರ‍್ಯಕ್ರಮದಲ್ಲಿ ಪ್ರಕಾಶ್ ಬಿ. ಸಾಲ್ಯಾನ್, ಚೇತನ್ ಕುಮಾರ್, ಭಾಸ್ಕರ್ ರಾವ್, ನಾಗೇಂದ್ರ ಕುಮಾರ್, ರ‍್ಬರ‍್ಟ್ ಡಿ’ಸೋಜಾ, ಶೇಸಮ್ಮ, ನೀತು ಡಿ’ಸೋಜಾ, ಮನೋರಾಜ್ ರಾಜೀವ್, ವೆಲ್ವಿನ್ ಕ್ಯಾಸ್ಟೆಲಿನೋ, ಪ್ರಶಾಂತ್ ಅಮೀನ್, ಸುಧಾಕರ್ ಜೋಗಿ, ಆಶಾಲತಾ, ಯಶವಂತ್, ಮೀನಾ ಟೆಲ್ಲಿಸ್, ಸ್ವಾತಿ ಕೇಶವ್, ಪ್ರಸಾದ್ ಕುಂದರ್, ಮೇರಿ ಪಿಂಟೋ, ದಯಾನಂದ್, ಅಭಿಷೇಕ್, ಅವಲಾನ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

