ಮುಲ್ಕಿ : ಮುಲ್ಕಿ ರೋಟರಿ ಕ್ಲಬ್‌ನ 2026–27ನೇ ಸಾಲಿನ ಅಧ್ಯಕ್ಷೆಯಾಗಿ ಭಾನುಮತಿ ಶೆಟ್ಟಿ ಕಕ್ವಗುತ್ತು ಆಯ್ಕೆಯಾಗಿದ್ದಾರೆ. ನೂತನ ಆಡಳಿತ ಮಂಡಳಿಯಲ್ಲಿ ಕಾರ್ಯದರ್ಶಿಯಾಗಿ ಭುಜಂಗ ಕವತ್ತಾರು, ಜೊತೆ ಕಾರ್ಯದರ್ಶಿಯಾಗಿ ಮೊಹಮ್ಮದ್ ಹಬೀಬುಲ್ಲ, ಕೋಶಾಧಿಕಾರಿಯಾಗಿ ಜೋವಿನ್ ಪ್ರಕಾಶ್ ಡಿ’ಸೋಜ ಹಾಗೂ ಸರ್ಜಂಟ್-ಅಟ್-ಆರ್ಮ್ಸ್ ಆಗಿ ಚಂದ್ರಿಕಾ ಭಂಡಾರಿ ಆಯ್ಕೆಯಾಗಿದ್ದಾರೆ.
ನೂತನ ಅಧ್ಯಕ್ಷೆ ಹಾಗೂ ಪದಾಧಿಕಾರಿಗಳನ್ನು ಬೆಂಗಳೂರಿನ ಆಧ್ಯಾತ್ಮಿಕ ವಿಶ್ವಗುರು ಶ್ರೀ ಶ್ರೀ ಚಂದ್ರಶೇಖರ ಸ್ವಾಮೀಜಿ ಅಭಿನಂದಿಸಿ, ಸಮಾಜಮುಖಿ ಸೇವಾ ಕಾರ್ಯಗಳಲ್ಲಿ ಯಶಸ್ಸು ಕೋರಿ ಶುಭ ಹಾರೈಸಿದ್ದಾರೆ.
ಮುಲ್ಕಿ ರೋಟರಿ ಕ್ಲಬ್‌ನ 2026–27ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ಜುಲೈ 8ರಂದು (ಬುಧವಾರ) ಸಂಜೆ ಕಾರ್ನಾಡಿನ ರೋಟರಿ ಶತಾಬ್ದಿ ಭವನದಲ್ಲಿ ನಡೆಯಲಿದೆ.
ಸಮಾರಂಭದಲ್ಲಿ ನೂತನ ಅಧ್ಯಕ್ಷೆ ಭಾನುಮತಿ ಶೆಟ್ಟಿ ಕಕ್ವಗುತ್ತು ಹಾಗೂ ಅವರ ತಂಡಕ್ಕೆ ರೋಟರಿಯ ಮಾಜಿ ಜಿಲ್ಲಾ ಗವರ್ನರ್ ವಿಕ್ರಮ್ ದತ್ತ ಪದಗ್ರಹಣ ಬೋಧಿಸಲಿದ್ದಾರೆ. ರೋಟರಿಯ ಸಹಾಯಕ ಗವರ್ನರ್ ಜೋಯಲ್ ಹೆರಾಲ್ಡ್ ಡಿ’ಸೋಜ ಹಾಗೂ ವಲಯ ಸೇನಾನಿ ದೇವಿದಾಸ್ ಶೆಟ್ಟಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

