ಶ್ರೀ ಗಾಯತ್ರಿ ಪರಿವಾರದಿಂದ ಚನ್ನಗಿರಿ ವಿರೂಪಾಕ್ಷಪ್ಪನವರಿಗೆ ಶತಮಾನೋತ್ಸವ ಸಂಭ್ರಮದ ಸನ್ಮಾನ

0
10


ದಾವಣಗೆರೆಯ ಶ್ರೀ ಗಾಯತ್ರಿ ದೇವಿಯ ಉಪಾಸಕರ ಕ್ರಿಯಾತ್ಮಕ ಆಧ್ಯಾತ್ಮಿಕ ಸಂಸ್ಥೆ ಶ್ರೀ ಗಾಯತ್ರಿ ಪರಿವಾರದಿಂದ ಚನ್ನಗಿರಿ ವಿರೂಪಾಕ್ಷಪ್ಪನವರ ಜನುಮದಿನದ ಶತಮಾನೋತ್ಸವದ ಸಂಭ್ರಮದ ಪರವಾಗಿ ಅವರ ಗೃಹಕ್ಕೆ ಹೋಗಿ ಅಭಿಮಾನದಿಂದ ಅಭಿನಂದಿಸಿ ಶುಭ ಹಾರೈಸಿ ಗೌರವದಿಂದ ಸನ್ಮಾನಿಸಲಾಯಿತು ಎಂದು ಶ್ರೀ ಗಾಯತ್ರಿ ಪರಿವಾರದ ಅಧ್ಯಕ್ಷರಾದ ವಾಸುದೇವ ಲಕ್ಷö್ಮಣ್ ರಾಯ್ಕರ್ ತಿಳಿಸಿದ್ದಾರೆ.
ಒಂದು ಶತಮಾನದಿಂದ ವಿವಿಧ ಸಂಘ-ಸAಸ್ಥೆಗಳಿಗೆ ದಾನ, ಧರ್ಮ ಮಾಡಿ ಒಂದು ನೂರ ಒಂದು ವರ್ಷಕ್ಕೆ ಪಾದಾರ್ಪಣೆ ಮಾಡಿದ ಚನ್ನಗಿರಿ ವಿರೂಪಾಕ್ಷಪ್ಪನವರಿಗೆ ಇನ್ನು ಆಯುಷ್ಯು ಆರೋಗ್ಯ ದೇವರ ದಯದಿಂದ ಕರುಣಿಸಲಿ ಎಂದು ಶ್ರೀ ಗಾಯತ್ರಿ ಪರಿವಾರದ ಪ್ರಧಾನ ಕಾರ್ಯದರ್ಶಿ ಸಾಲಿಗ್ರಾಮ ಗಣೇಶ್ ಶೆಣೈ ಶುಭ ಹಾರೈಸಿದರು. ಚನ್ನಗಿರಿ ವಿರೂಪಾಕ್ಷಪ್ಪ ಧರ್ಮಶಾಲಾ ಟ್ರಸ್ಟ್ ಕಾರ್ಯನಿರ್ವಾಹಕರಾದ ಮಂಜುನಾಥ್, ನೇಹಾ ಭರತ್ ಚನ್ನಗಿರಿ ಟ್ರಸ್ಟ್ನ ಗೌರವ ಸಲಹೆಗಾರರಾದ ಶ್ರೀಮತಿ ರಾಧಿಕಾ ಗೋಲಿ, ಶ್ರೀ ಗಾಯತ್ರಿ ಪರಿವಾರದ ಸಮಿತಿ ಸದಸ್ಯರಾದ ಕೆ.ಸಿ.ಉಮೇಶ್, ಮಾಯಕೊಂಡದ ಷಡಾಕ್ಷರಪ್ಪ ಗುರುಮೂರ್ತಿ ಮುಂತಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here