ಡಿ.11ರಂದು ಆತ್ರಾಡಿ ಪಡುಮನೆ ಹಳೇಬೀಡು ಪಟ್ಟದ ಮನೆಯ ಕಂಬಳ ಮಹೋತ್ಸವ

0
4

ಉಡುಪಿ: ವರ್ಷಂಪ್ರತಿಯಂತೆ ನಡೆಯುವ ಆತ್ರಾಡಿ ಪಡುಮನೆ ಹಳೇಬೀಡು ಪಟ್ಟದ ಮನೆಯ ಸಾಂಪ್ರದಾಯಿಕ ಕಂಬಳ ಮಹೋತ್ಸವವು ಡಿಸೆಂಬರ್ 11ರಂದು ಶುಕ್ರವಾರ ನಡೆಯಲಿದೆ. ಕಂಬಳದ ಅಂಗವಾಗಿ ವಿವಿಧ ವಿಭಾಗಗಳಲ್ಲಿ ಕೋಣಗಳ ಸ್ಪರ್ಧೆ ಆಯೋಜಿಸಲಾಗಿದ್ದು, ವಿಜೇತರಿಗೆ ಆಕರ್ಷಕ ಬಹುಮಾನಗಳನ್ನು ಘೋಷಿಸಲಾಗಿದೆ.

ಹಗ್ಗ ಹಿರಿಯ ಕೋಣಗಳ ವಿಭಾಗದಲ್ಲಿ ಪ್ರಥಮ ಬಹುಮಾನ ರೂ.15,000 ಹಾಗೂ ದ್ವಿತೀಯ ಬಹುಮಾನ ರೂ.7,000 ನೀಡಲಾಗುತ್ತದೆ. ಹಗ್ಗ ಕಿರಿಯ ಕೋಣಗಳ ವಿಭಾಗದಲ್ಲಿಯೂ ಇದೇ ಬಹುಮಾನ ಮೊತ್ತ ನಿಗದಿಪಡಿಸಲಾಗಿದೆ. ಹಗ್ಗ ಕಿರಿಯ ವಿಭಾಗ ‘ಬಿ’ (ಸಬ್ ಜೂನಿಯರ್) ವಿಭಾಗದಲ್ಲಿ ಪ್ರಥಮ ಬಹುಮಾನ ರೂ.7,000 ಹಾಗೂ ದ್ವಿತೀಯ ಬಹುಮಾನ ರೂ.4,000 ನೀಡಲಾಗುತ್ತದೆ.

ಕಂಬಳದಲ್ಲಿ ಭಾಗವಹಿಸುವ ಕೋಣಗಳ ಮಾಲಕರು ಅದೇ ದಿನ ಸಂಜೆ 4 ಗಂಟೆಯೊಳಗೆ ತಮ್ಮ ಹೆಸರು ನೋಂದಾಯಿಸಿಕೊಳ್ಳುವಂತೆ ಆಯೋಜಕರು ತಿಳಿಸಿದ್ದಾರೆ. ಸಂಜೆ 4 ಗಂಟೆಗೆ ಕೋಣಗಳನ್ನು ಗದ್ದೆಗೆ ಇಳಿಸಲಾಗುತ್ತದೆ. ಸಂಜೆ 5.30ರಿಂದ 7 ಗಂಟೆಯವರೆಗೆ ಕೋಣಗಳ ಓಟದ ಸ್ಪರ್ಧೆ ನಡೆಯಲಿದೆ. ಕೋಣಗಳ ಮಾಲಕರಿಗೆ ಊಟದ ವ್ಯವಸ್ಥೆಯನ್ನೂ ಕಲ್ಪಿಸಲಾಗಿದೆ.

ಪಟ್ಟದ ಪಂಜುರ್ಲಿ, ಮೂಲೆ ಮೈಸಂದಾಯ ಹಾಗೂ ಸಹಪರಿವಾರ ದೈವಗಳ ಸಿರಿಮುಡಿ ಗಂಧಪ್ರಸಾದ ಸ್ವೀಕರಿಸಿ, ಸಾಂಪ್ರದಾಯಿಕ ಕಂಬಳ ಮಹೋತ್ಸವದಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಆಯೋಜಕರು ಮನವಿ ಮಾಡಿದ್ದಾರೆ.