ಮೂಡುಬಿದಿರೆ ತಾಲ್ಲೂಕು ಪ್ರಾಂತ್ಯ ದಾರಿದೀಪ ಜ್ಞಾನವಿಕಾಸ ಕೇಂದ್ರದ ವಾರ್ಷಿಕೋತ್ಸವ

0
16

ಮೂಡುಬಿದಿರೆ : ತಾಲ್ಲೂಕು ಪ್ರಾಂತ್ಯ ದಾರಿದೀಪ ಜ್ಞಾನವಿಕಾಸ ಕೇಂದ್ರದ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಮೂಡಬಿದ್ರಿ ಪೊಲೀಸ್ ಠಾಣೆಯ PSI ಪ್ರತಿಭಾ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಅವರು ಮಾದಕ ವಸ್ತುಗಳ ಬಳಕೆಯಿಂದ ಆಗುವ ತೊಡಕುಗಳು, ಡ್ರಗ್ಸ್ ಬಳಕೆ ಮಾಡುತ್ತಿರುವ ಮಕ್ಕಳನ್ನು ಪತ್ತೆ ಹಚ್ಚುವ ವಿಧಾನ ಕುರಿತು ಮಾಹಿತಿ ನೀಡಿದರು, ತಾಲೂಕಿನ ಯೋಜನಾಧಿಕಾರಿ ಬಿ ಧನಂಜಯ್ ಮಹಿಳಾ ಜ್ಞಾನವಿಕಾಸ ಕಾರ್ಯಕ್ರಮದ* ಉದ್ದೇಶ ತಿಳಿಸಿದರು.

ಮುಖ್ಯ ಅತಿಥಿಯಾಗಿ ಆಗಮಿಸಿರುವ ಮುಖ್ಯಶಿಕ್ಷಕರಾದ ಸೇಸಮ್ಮ ಮೇಡಂ ಜ್ಞಾನವಿಕಾಸ ದಂತಹ ಕಾರ್ಯಕ್ರಮ ಗಳಿಗೆ ಭಾಗವಹಿಸುವ ಅನಿವಾರ್ಯತೆ ಕುರಿತು, ಮಹಿಳೆಯರಿಗೆ ಜ್ಞಾನವಿಕಾಸದಂತ ಕಾರ್ಯಕ್ರಮಗಳು ಎಷ್ಟು ಅವಶ್ಯಕ ಎಂಬುದನ್ನು ತಿಳಿಸಿದರು , ಈ ಕಾರ್ಯಕ್ರಮ ದ ಅಧ್ಯಕ್ಷತೆ ಯನ್ನು ವಹಿಸಿರುವ ಅಖಿಲ ಕರ್ನಾಟಕ ಜಿಲ್ಲಾ ಜನಜಾಗೃತಿ ವೇದಿಕೆಯ ಉಪಾಧ್ಯಕ್ಷರಾದ ಪ್ರಸಾದ್ ಕುಮಾರ್ ಸರ್ ಪೂಜ್ಯರ ಧರ್ಮ ಕಾರ್ಯ ಗಳ ಕುರಿತು ಹಾಗೂ ಜ್ಞಾನವಿಕಾಸ ಕಾರ್ಯಕ್ರಮ ಗಳ ಕುರಿತು ಮೆಚ್ಚುಗೆ ವ್ಯಕ್ತ ಪಡಿಸಿದರು. ಸದಸ್ಯರಿಗೆ ಸಂಗೀತಕುರ್ಚಿ, ಜ್ಞಾಪಕಶಕ್ತಿ ಆಟ, ಬಾಲ್ ಪಾಸಿಂಗ್ ಸ್ಪರ್ಧೆ, ಹೂಗುಚ್ಛ ಸ್ಪರ್ಧೆ ಇನ್ನಿತರ ಸ್ಪರ್ಧೆ ನಡೆಸಿ ಬಹುಮಾನ ವಿತರಿಸಲಾಯಿತು, ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಜ್ಞಾನವಿಕಾಸ ಸಮನ್ವಯಾಧಿಕಾರಿ, ಸೇವಾಪ್ರತಿನಿಧಿಗಳು, ಕೇಂದ್ರದ ಸದಸ್ಯರು ಭಾಗವಹಿಸಿದರು.

LEAVE A REPLY

Please enter your comment!
Please enter your name here