ಧರ್ಮಸ್ಥಳ ಜನಜಾಗೃತಿ ವೇದಿಕೆಯ ಸ್ವಾಸ್ತ್ಯ ಸಂಕಲ್ಪ ಕಾರ್ಯಕ್ರಮ

0
9

ಮೂಡುಬಿದಿರೆ : ಕಡಂದಲೆ ಸುಬ್ರಹ್ಮಣ್ಯೇಶ್ವರ ಅನುದಾನಿತ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳಿಗೆ “ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ” ನಡೆಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಜನಜಾಗೃತಿ ವೇದಿಕೆಯ ಸಂಪಿಗೆ ವಲಯಾಧ್ಯಕ್ಷ, ಮೂಡುಬಿದಿರೆ ತಾಲೂಕು ಪಂಚಾಯತಿನ ಕೆಡಿಪಿ ಸದಸ್ಯ ಟಿ ಎನ್ ಕೆಂಬಾರೆ ನೆರವೇರಿಸಿದರು.

ಸಭಾಧ್ಯಕ್ಷತೆಯನ್ನು ಹಿರಿಯ ಶಿಕ್ಷಕರಾದ ಸದಾಶಿವ ಉಪಾಧ್ಯಾಯರು ವಹಿಸಿದ್ದರು. ಸಂಪಿಗೆ ವಲಯದ ಮೇಲ್ವಿಚಾರಕ ಶ್ರೀನಿವಾಸ್ , ಸಂಯೋಜಕಿ ಶ್ರೀಮತಿ ವಸಂತಿ, ತೇಜಸ್ವಿನಿ ಉಪಸ್ಥಿತರಿದ್ದರು.

ಉದ್ಘಾಟಿಸಿ ಮಾತನಾಡಿದ ಟಿ ಎನ್ ಕೆಂಬಾರೆಯವರು” ಶಾಲಾ ಮಕ್ಕಳಿಗೆ ಇಂದು ಅತೀ ಹೆಚ್ಚು ಮೊಬೈಲ್ ಬಳಕೆ ಮಾಡುವ ಪ್ರವೃತ್ತಿ ಇದೆ. ಇದರಿಂದ ಎಳೆ ಮಕ್ಕಳ ಕಣ್ಣಿಗೆ, ಇಯರ್ ಫೋನ್ ಬಳಕೆಯಿಂದ ಕಿವಿಗೆ ಅಪಾಯ ಕಟ್ಟಿಟ್ಟ ಬುತ್ತಿ” . ಮಕ್ಕಳ ಕೈಗೆ ಮೊಬೈಲ್ ಸಿಗದಂತೆ ಹೆತ್ತವರು ಮುಂಜಾಗೃತೆ ವಹಿಸಬೇಕು” ಎಂದರು. ಕಾರ್ಯಕ್ರಮದ ಸಂಯೋಜಕ ಶ್ರೀನಿವಾಸ ಸ್ವಾಗತಿಸಿದರು. ಕಾರ್ಯಕ್ರಮದ ನಿರೂಪಣೆಯನ್ನು ಶಿಕ್ಷಕ ಸುಧಾಕರ್ ಮಾಡಿದರು.

LEAVE A REPLY

Please enter your comment!
Please enter your name here