ಮೂಡುಬಿದಿರೆ : ಶ್ರೀ ಕ್ಷೇತ್ರ ಧರ್ಮಸ್ಥಳ ಜನಜಾಗೃತಿ ವೇದಿಕೆಯ ವತಿಯಿಂದ ಕಡಂದಲೆ ಶ್ರೀ ಸುಬ್ರಹ್ಮಣ್ಯೇಶ್ವರ ಅನುದಾನಿತ ಪ್ರೌಢಶಾಲೆಯಲ್ಲಿ ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ “ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ” ವನ್ನು ನಡೆಸಲಾಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಜನಜಾಗೃತಿ ವೇದಿಕೆಯ ಸಂಪಿಗೆ ವಲಯಾಧ್ಯಕ್ಷರು, ನಿವೃತ್ತ ಶಿಕ್ಷಕರು ಪ್ರಸ್ತುತ ಮೂಡುಬಿದಿರೆ ತಾಲೂಕು ಪಂಚಾಯತಿನ ಕೆಡಿಪಿ ಸದಸ್ಯರೂ ಆದ ಶ್ರೀ ಟಿ ಎನ್ ಕೆಂಬಾರೆಯವರು ನೆರವೇರಿಸಿದರು.
ಸಭಾಧ್ಯಕ್ಷತೆಯನ್ನು ಹಿರಿಯ ಶಿಕ್ಷಕರಾದ ಸದಾಶಿವ ಉಪಾಧ್ಯಾಯರು ವಹಿಸಿದ್ದರು. ಸಂಪಿಗೆ ವಲಯದ ಮೇಲ್ವಿಚಾರಕ ಶ್ರೀನಿವಾಸ್ , ಸೇವಾಪ್ರತಿನಿಧಿ ವಸಂತಿ, ತೇಜಸ್ವಿನಿ ಉಪಸ್ಥಿತರಿದ್ದರು. ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದ ಟಿ ಎನ್ ಕೆಂಬಾರೆಯವರು” ಶಾಲಾ ಮಕ್ಕಳಿಗೆ ಇಂದು ಅತೀ ಹೆಚ್ಚು ಮೊಬೈಲ್ ಬಳಕೆ ಮಾಡುವ ಪ್ರವೃತ್ತಿ ಇದೆ.
ಇದರಿಂದ ಎಳೆ ಮಕ್ಕಳ ಕಣ್ಣಿಗೆ, ಇಯರ್ ಫೋನ್ ಬಳಕೆಯಿಂದ ಕಿವಿಗೆ ಅಪಾಯ ಕಟ್ಟಿಟ್ಟ ಬುತ್ತಿ” . ಮಕ್ಕಳ ಕೈಗೆ ಮೊಬೈಲ್ ಸಿಗದಂತೆ ಹೆತ್ತವರು ಮುಂಜಾಗೃತೆ ವಹಿಸಬೇಕು” ಎಂದರು. ಎಲ್ಲರನ್ನು ಸ್ವಾಗತಿಸಿ ಕಾರ್ಯಕ್ರಮದ ಉದ್ದೇಶವನ್ನು ಸಂಯೋಜಕರಾದ ಶ್ರೀನಿವಾಸರು ಸಭೆಗೆ ತಿಳಿಸಿದರು.ಕಾರ್ಯಕ್ರಮದ ನಿರೂಪಣೆಯನ್ನು ಶಿಕ್ಷಕ ಸುಧಾಕರ್ ಮಾಡಿದರು.

