ಹೊಸಬೆಟ್ಟು ಗ್ರಾ.ಪಂ. ಸಿಬ್ಬಂದಿ ಸಂಜೀವ ನಾಯ್ಕರಿಗೆ ಬೀಳ್ಕೊಡುಗೆ

0
10

ಮೂಡುಬಿದಿರೆ : ಹೊಸಬೆಟ್ಟು ಗ್ರಾಮ ಪಂಚಾಯತ್ ಸಿಬ್ಬಂದಿಯಾಗಿ 24 ವರ್ಷಗಳ ಕಾಲ ಪ್ರಾಮಾಣಿಕವಾಗಿ ಸೇವೆಗೈದು ನಿವೃತ್ತರಾಗುತ್ತಿರುವ ಸಂಜೀವ ನಾಯ್ಕ ಇರುವೈಲು ಅವರನ್ನು ಬೀಳ್ಕೊಡುವ ಸಮಾರಂಭವು ಜೂ. 30ರಂದು ಮೂಡುಬಿದಿರೆ ಸಮಾಜ ಮಂದಿರದಲ್ಲಿ ಜರಗಿತು.

ಗ್ರಾಮ ಪಂಚಾಯತ್ ಆಡಳಿತಾಧಿಕಾರಿಯೂ ಆಗಿರುವ ಪಶು ವೈದ್ಯಕೀಯ ಇಲಾಖೆಯ ಆಡಳಿತ ನಿರ್ದೇಶಕ ಗುರುರಾಜ್ ಅವರ ಅಧ್ಯಕ್ಷತೆಯಲ್ಲಿ ನಡೆದ ಬೀಳ್ಕೊಡುಗೆ ಸಮಾರಂಭದಲ್ಲಿ ಇರುವೈಲು ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನದ ಪ್ರಧಾನ ಅರ್ಚಕ ವೇದಮೂರ್ತಿ ರಾಘವೇಂದ್ರ ಆಸ್ರಣ್ಣರು ಆಶೀರ್ವಚನ ನುಡಿದರು.

ತಾಲೂಕು ಪಂಚಾಯತ್ ಆಡಳಿತ ನಿರ್ದೇಶಕ ಸಾಯೀಶ ಚೌಟ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಮಂಗಳೂರು ತಾ.ಪಂ. ಮಾಜಿ ಅಧ್ಯಕ್ಷೆ ರೀಟಾ ಕುಟಿನ್ಹಾ, ಗ್ರಾ.ಪಂ. ಮಾಜಿ ಅಧ್ಯಕ್ಷರುಗಳಾದ ವಲೇರಿಯನ್ ಕುಟಿನ್ಹೋ, ಮೀನಾಕ್ಷಿ, ಸೌಮ್ಯಾ, ಗ್ರಾ.ಪಂ. ಮಾಜಿ ಸದಸ್ಯರುಗಳಾದ ವಿಲ್ಫ್ರೆಡ್ ಮೆಂಡೋನ್ಸಾ, ರೊನಾಲ್ಡ್ ಸೆರಾವೊ, ಯೋಗೀಶ ಶೆಟ್ಟಿ, ಸಚೀಂದ್ರ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸವಿತಾ ಕುಮಾರಿ, ಗ್ರಾಮ ಸಹಾಯಕ ಶೀನ, ಪಂಚಾಯತ್ ಸಿಬ್ಬಂದಿಗಳಾದ ಶಾರದಾ, ಗಣೇಶ್, ಪ್ರೇಮಾ, ಹರಿಣಾಕ್ಷಿ, ವನಿತಾ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here