ಮೂಡುಬಿದಿರೆ ಪ್ರೇರಣಾ ಶಾಲೆಯಲ್ಲಿ ಯಕ್ಷಧ್ರುವ ಪಟ್ಲ ಫೌಂಡೇಶನ್ ನ ಯಕ್ಷ ಶಿಕ್ಷಣ ತರಗತಿ ಉದ್ಘಾಟನೆ

0
2

ಮೂಡುಬಿದಿರೆ : ಪ್ರೇರಣಾ ಶಾಲೆಯಲ್ಲಿ ಯಕ್ಷಧ್ರುವ ಪಟ್ಲ ಫೌಂಡೇಶನ್ ನ 2026 – 27 ನೆಯ ಸಾಲಿನ ಯಕ್ಷಶಿಕ್ಷಣ ತರಗತಿಯನ್ನು ಅಲಂಗಾರಿನ ಶ್ರೀ ಮಹಾಗಣಪತಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಅರ್ಚಕರಾದ ಶ್ರೀ ಸುಬ್ರಹ್ಮಣ್ಯ ಭಟ್ ರವರು ಉದ್ಘಾಟಿಸಿದರು .

” ಬಾಲ್ಯದಲ್ಲಿ ನಮಗಿಲ್ಲದ ಅವಕಾಶ ಎಳೆಯ ಮಕ್ಕಳಾದ ನಿಮಗೆ ಒದಗಿ ಬಂದಿರುವುದು ಸುವರ್ಣಾವಕಾಶ. ಪುರಾಣದಲ್ಲಿ ಬರುವ ಕತೆಗಳನ್ನು ನಾವು ಅರಿತರೆ ಸುಸಂಸ್ಕೃತ ರಾಗುತ್ತೇವೆ ” ಎಂದು ಶ್ರೀ ಸುಬ್ರಹ್ಮಣ್ಯ ಭಟ್ಟರು ನುಡಿದರು . ಯಕ್ಷಶಿಕ್ಷಣದ ಮೂಡುಬಿದಿರೆ – ಕಾರ್ಕಳ ವಲಯದ ಸಂಚಾಲಕರಾದ ಶ್ರೀ ಮಹಾವೀರ ಪಾಂಡಿಯವರು ,
” ವಿದ್ಯಾರ್ಥಿಗಳಿಗೆ ಯಕ್ಷಗಾನದ ಆಸಕ್ತಿ ಮೂಡಿಸುವ ನಿಟ್ಟಿನಲ್ಲಿ ಯಕ್ಷಧ್ರುವ ಪಟ್ಲ ಫೌಂಡೇಶನ್ ಶ್ರಮಿಸುತ್ತಿದೆ . 102 ಶಾಲೆಗಳಲ್ಲಿ ಸುಮಾರು 7500 ವಿದ್ಯಾರ್ಥಿಗಳು 70 ಯಕ್ಷಗುರುಗಳ ತೊಡಗಿಸುವಿಕೆಯ ಮೂಲಕ ಯಕ್ಷಶಿಕ್ಷಣವು ಯಶಸ್ವಿಯಾಗುತ್ತಿದೆ ” ಎಂದು ನುಡಿದರು . ಸಭೆಯ ಅಧ್ಯಕ್ಷತೆ ವಹಿಸಿದ್ದ
ಪ್ರೇರಣಾ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಸಂಚಾಲಕರಾದ ಎಂ. ಶಾಂತಾರಾಮ ಕುಡ್ವರು , ” ಕರಾವಳಿಯ ಮಣ್ಣಿನ ಕಲೆಯಾದ ಯಕ್ಷಗಾನ ಮುಂದಿನ ಪೀಳಿಗೆಗೂ ಮುಂದುವರಿಯಬೇಕು ಎಂಬ ದೂರದ್ರಷ್ಠಿ ಪಟ್ಲ ಫೌಂಡೇಶನ್ ಗಿರುವ ಕಾರಣ ಯಕ್ಷಶಿಕ್ಷಣವು ಸಕಾಲಿಕ ಹಾಗೂ ಸ್ವಾಗತಾರ್ಹ ” ಎಂದರು .

ಪಟ್ಲ ಫೌಂಡೇಶನ್ ನ ಮೂಡುಬಿದಿರೆ ಘಟಕದ ಸಂಚಾಲಕ ಲಾಡಿ ರವಿಪ್ರಸಾದ್ ಶೆಟ್ಟಿ , ಜೊತೆ ಕಾರ್ಯದರ್ಶಿ ನೆಲ್ಲಿಮಾರ್ ಸದಾಶಿವ ಭಟ್ ಸಂದರ್ಭೋಚಿವಾಗಿ ಮಾತನಾಡಿದರು . ಅಧ್ಯಕ್ಷ ದಿವಾಕರ ಶೆಟ್ಟಿ ಖಂಡಿಗ , ಕಾರ್ಯದರ್ಶಿ ಅರುಣ್ ಕುಮಾರ್ , ಸೇವಾಂಜಲಿ ಶಿಕ್ಷಣ ಸಂಸ್ಥೆಯ ಕೋಶಾಧಿಕಾರಿ ಎಸ್.ಎನ್ . ಬೋರ್ಕರ್ , ಯಕ್ಷ ಶಿಕ್ಷಕ ಪ್ರಥ್ವೀಶ್ ಪರ್ಕಳ ವೇದಿಕೆಯಲ್ಲಿ ಉಪಸ್ಥಿತರಿದ್ದರು .

ಶಾಲಾ ಮುಖ್ಯ ಶಿಕ್ಷಕಿ ವತ್ಸಲಾ ರಾಜೇಶ್ ಅತಿಥಿಗಳನ್ನು ಸ್ವಾಗತಿಸಿದರು . ಶಿಕ್ಷಕಿ ಗ್ರೀಷ್ಮಾರವರು ಕಾರ್ಯಕ್ರಮ ನಿರೂಪಿಸಿದರು.

ಶಿಕ್ಷಕಿ ಪ್ರಿಯಾ ವಂದನಾರ್ಪಣೆ ಗೈದರು . ಪಟ್ಲ ಫೌಂಡೇಶನ್ ನ ಮೂಡುಬಿದಿರೆ ಘಟಕದ ಅಧ್ಯಕ್ಷರಾದ ದಿವಾಕರ ಶೆಟ್ಟರು ಮತ್ತು ಶಾಲಾ ಸಂಚಾಲಕರಾದ ಎಂ . ಶಾಂತರಾಮ ಕುಡ್ವರು , ಸಂಪ್ರದಾಯ ಶೈಲಿಯಲ್ಲಿ, ಯಕ್ಷ ಗುರು ಪ್ರಥ್ವೀಶ್ ಪರ್ಕಳರಿಗೆ ವೀಳ್ಯ ನೀಡಿ , ಯಕ್ಷಗಾನ ತರಗತಿ ಆರಂಬಿಸುವಂತೆ ಆಹ್ವಾನಿಸಿದರು .

LEAVE A REPLY

Please enter your comment!
Please enter your name here